WhatsApp privacy policy 2021: ವಾಟ್ಸಾಪ್ ಖಾಸಗಿತನ ನೀತಿ ಹೆಸರಲ್ಲಿ ನಕಲಿ ಸಂದೇಶ; ಸುಳ್ಳು ಹಬ್ಬಿಸಬೇಡಿ ಎಂದ ಕಂಪೆನಿ

ವಾಟ್ಸಾಪ್​ನ ಹೊಸ ಖಾಸಗಿತನ ನೀತಿ 2021ಕ್ಕೆ ನೀವೇನಾದರೂ ಒಪ್ಪಿಗೆ ಕೊಟ್ಟುಬಿಟ್ಟರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬ ನಕಲಿ ಸಂದೇಶವೊಂದು ಹರಿದಾಡುತ್ತಿದೆ ಎಂಬ ಬಗ್ಗೆ ಎಚ್ಚರಿಸಲಾಗಿದೆ.

WhatsApp privacy policy 2021: ವಾಟ್ಸಾಪ್ ಖಾಸಗಿತನ ನೀತಿ ಹೆಸರಲ್ಲಿ ನಕಲಿ ಸಂದೇಶ; ಸುಳ್ಳು ಹಬ್ಬಿಸಬೇಡಿ ಎಂದ ಕಂಪೆನಿ
ವಾಟ್ಸಾಪ್ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: May 21, 2021 | 3:55 PM

ಮತ್ತೊಂದು ಫೇಕ್ (ನಕಲಿ) ಸಂದೇಶ ವಾಟ್ಸಾಪ್​ನಲ್ಲಿ ಹರಿದಾಡುತ್ತಿದೆ. ವಾಟ್ಸಾಪ್​ನ ಹೊಸ ಖಾಸಗಿ ನೀತಿಯ ಬಗ್ಗೆ ಸುಳ್ಳನ್ನು ಹಬ್ಬಿಸುವ ಭಾಗವಾಗಿ ಇದನ್ನು ಹರಿಬಿಡಲಾಗುತ್ತದೆ. ವಾಟ್ಸಾಪ್, ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಿಂದ ನಿಮ್ಮ ಫೋಟೋಗಳು, ಸಂದೇಶಗಳು, ಫೈಲ್​ಗಳು ಮತ್ತು ಇತರ ಮಾಹಿತಿಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದಕ್ಕೆ ಈ ಹೊಸ ನೀತಿ ಅವಕಾಶ ಮಾಡಿಕೊಡುತ್ತದೆ ಎಂಬ ಒಕ್ಕಣೆಯುಳ್ಳ ನಕಲಿ ಮೆಸೇಜ್ ಅದು. ಅಷ್ಟೇ ಅಲ್ಲ, ಈ ಮಾಹಿತಿಯನ್ನು ಹತ್ತು ಗ್ರೂಪ್​ಗಳಿಗೆ ಫಾರ್ವರ್ಡ್​ ಮಾಡಿ, ಆ ನಂತರ ನಿಮಗೆ ಗ್ರೀನ್ (ಹಸಿರು) ಟಿಕ್ (ರೈಟ್ ಆಕಾರದ ಚಿಹ್ನೆ) ಬಂದರೆ ನಿಮ್ಮ ಫೋನ್​ ಆ ಹೊಸ ನಿಯಮದಿಂದ ಸುರಕ್ಷಿತವಾಗಿದೆ ಎಂದು ತಿಳಿಸಿರಲಾಗಿರುತ್ತದೆ.

ಇದೊಂದು ನಕಲಿ ಸಂದೇಶ ಆಗಿದ್ದು, ವಾಟ್ಸಾಪ್ ಬಳಕೆದಾರರು ಯಾರಿಗೂ ಫಾರ್ವರ್ಡ್ ಮಾಡಬಾರದು ಎಂದು ಸಲಹೆ ನೀಡಲಾಗಿದೆ. ಬ್ಲಾಗ್ ​ಪೋಸ್ಟ್​ವೊಂದರಲ್ಲಿ ವಾಟ್ಸಾಪ್ ತಿಳಿಸಿರುವ ಪ್ರಕಾರ, ಬಳಕೆದಾರರ ಯಾವ ಡೇಟಾವನ್ನೂ ಫೇಸ್​ಬುಕ್ ಜತೆಗೆ ಹಂಚಿಕೊಳ್ಳಲ್ಲ. ಈ ಮೆಸೇಜಿಂಗ್ ಆ್ಯಪ್ ಎಂಡ್ ಟು ಎಂಡ್ ಎನ್​ಕ್ರಿಪ್ಟೆಡ್. ಆದ್ದರಿಂದ ಕಂಪೆನಿಯು ಚಾಟ್​, ಫೋಟೋ, ವೈಯಕ್ತಿಕ ಫೈಲ್​ಗಳು ಮತ್ತು ಇತರ ಯಾವುದೇ ಖಾಸಗಿ ಮಾಹಿತಿಯಾಗಲೀ ಪಡೆಯುವುದಕ್ಕೆ ಸಾಧ್ಯವಿಲ್ಲ. ನಿಮ್ಮ ಕರೆಯನ್ನು ಸಹ ಟ್ರ್ಯಾಕ್ ಮಾಡುವುದಿಲ್ಲ ಎಂದು ತಿಳಿಸಿದೆ.

ಎಂಡ್ ಟು ಎಂಡ್ ಎನ್​ಕ್ರಿಪ್ಷನ್ ಎಂಬ ಪದವನ್ನು ನೀವೂ ಕೇಳಿರುತ್ತೀರಿ. ಹೀಗಂದರೆ, ನಿಮ್ಮ ಸಂದೇಶಗಳು ಲಾಕ್​ನೊಂದಿಗೆ ಸುರಕ್ಷಿತವಾಗಿದೆ. ಸಂದೇಶ ಕಳುಹಿಸುವವರು ಮತ್ತು ಪಡೆಯುವವರು ಮಾತ್ರ ವಿಶೇಷ ಕೀ ಜತೆ ಅದನ್ನು ಅನ್​ಲಾಕ್ ಮಾಡುವುದಕ್ಕೆ ಹಾಗೂ ಓದುವುದಕ್ಕೆ ಸಾಧ್ಯ. ಈ ವರ್ಷದ ಶುರುವಿನಿಂದ ವಾಟ್ಸಾಪ್ ಸುದ್ದಿಯಾಗುತ್ತಲೇ ಇದೆ. ಅದರ ಖಾಸಗಿತನದ ನೀತಿಯ ಬಗ್ಗೆ ತಿಳಿಸಿತ್ತು. ಈ ಮೂಲಕ ವಾಟ್ಸಾಪ್ ಬಳಕೆದಾರರ ಮಾಹಿತಿಯನ್ನು ಮಾರ್ಕೆಟಿಂಗ್ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬ ಗುಮಾನಿ ಹಲವರಲ್ಲಿದೆ. ಖಾಸಗಿತನದ ಬಗ್ಗೆ ಆತಂಕ ಇರುವ ಹಲವರು ಬೇರೆ ಮೆಸೇಜಿಂಗ್ ಆ್ಯಪ್​ಗೆ ಬದಲಾಗುತ್ತಿದ್ದಾರೆ.

ಇನ್ನು ವಾಟ್ಸಾಪ್​ನಿಂದಲೂ ಸ್ಪಷ್ಟನೆ ಸಿಕ್ಕಿದ್ದು, ವೈಯಕ್ತಿಕ ಮಾತುಕತೆಗಳಲ್ಲಿ ಎಂಡ್ ಟು ಎಂಡ್ ಎನ್​ಕ್ರಿಪ್ಷನ್ ಮುಂದುವರಿಯುತ್ತದೆ. ಆದರೆ ಬಿಜಿನೆಸ್ ಮಾತುಕತೆಗಳು ಮಾತ್ರ ಓದುವ ಹಾಗೆ ಮಾಡಬಹುದು. ಅದನ್ನು ಜಾಹೀರಾತು ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ವ್ಯವಹಾರದ ಜತೆ ಮೆಸೇಜಿಂಗ್ ಎಂಬುದು ಸ್ನೇಹಿತರು ಅಥವಾ ಸಂಬಂಧಿಕರ ಜತೆಗಿನ ಮೆಸೇಜಿಂಗ್​ಗಿಂತ ಭಿನ್ನ ಮತ್ತು ಕೆಲವು ದೊಡ್ಡ ಉದ್ಯಮಗಳು ತಮ್ಮ ಸಂವಹನದ ನಿರ್ವಹಣೆಗೆ ಹೋಸ್ಟಿಂಗ್ ಸರ್ವೀಸ್ ಬಳಸಿಕೊಳ್ಳಬೇಕಿದೆ ಎಂದು ವಾಟ್ಸಾಪ್ ಹೇಳಿದೆ. ಇನ್ನು ವಾಟ್ಸಾಪ್ ಹೇಳಿರುವಂತೆ, ಹೊಸ ಖಾಸಗಿ ನೀತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೆಲ ಸಮಯವನ್ನು ಕೂಡ ನೀಡಲಾಗಿದೆ.

ಒಂದು ವೇಳೆ 2021ರ ಖಾಸಗಿತನ ನೀತಿಯನ್ನು ಸಮ್ಮತಿಸುವುದಕ್ಕೆ ಬಯಸದಿದ್ದಲ್ಲಿ ಮೆಸೇಜಿಂಗ್ ಆ್ಯಪ್ ಬಳಸುವುದನ್ನು ನಿಲ್ಲಿಸಬಹುದು ಎಂದು ವಾಟ್ಸಾಪ್ ಹೇಳಿದೆ. ಒಂದು ವೇಳೆ ಹೊಸ ಖಾಸಗಿತನ ನೀತಿಯನ್ನು ಸಮ್ಮತಿಸದೆಯೇ ಬಳಕೆ ಮುಂದುವರಿಸುವುದಾದರೆ ಕ್ರಮೇಣ ವಾಟ್ಸಾಪ್​ನ ಒಂದೊಂದೇ ಫೀಚರ್​ಗಳು ದೊರೆಯುವುದಿಲ್ಲ. ಆದ್ದರಿಂದ ಒಂದೋ ಪಾಲಿಸಿಯನ್ನು ಒಪ್ಪಬೇಕು ಅಥವಾ ಬೇರೆ ಆ್ಯಪ್​ಗೆ ಬದಲಾಗಬೇಕು. ​

ಇದನ್ನೂ ಓದಿ: WhatsApp privacy policy: ವಾಟ್ಸಾಪ್ ಖಾಸಗಿತನ ನೀತಿ ಯುರೋಪ್​ನಲ್ಲೊಂದು ಭಾರತದಲ್ಲೊಂದು ಏಕೆ ಎಂದ ಸರ್ಕಾರ

ಇದನ್ನೂ ಓದಿ: WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?

(Messaging app WhatsApp warned it’s users about fake message circulating about new privacy policy 2021)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್