Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಕ್ರೈಮ್: 2019 ರಿಂದ ಈವರೆಗೆ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು

| Updated By: Vinay Bhat

Updated on: Dec 22, 2022 | 12:41 PM

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ, ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಭಾರತದಲ್ಲಿ ಸೈಬರ್ ವಂಚನೆಯ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ವಂಚನೆಯಿಂದ ಉಳಿಸಲಾಗಿದೆ ಎಂದು ಹೇಳಿದ್ದಾರೆ.

Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಕ್ರೈಮ್: 2019 ರಿಂದ ಈವರೆಗೆ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ಸಾಂದರ್ಭಿಕ ಚಿತ್ರ
Follow us on

ದೇಶದಲ್ಲಿ ಸೈಬರ್ ದರೋಡೆಕೋರರ (Cyber Fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ. ಈ ಹಿಂದೆ ವಿದ್ಯುತ್ ಬಿಲ್, ಓಟಿಪಿ ಮೂಲಕ ಹಣ ದೋಚಿಕೊಳ್ಳುತ್ತಿದ್ದ ಖದೀಮರು ಈಗೀಗ ಫೋನ್‌ಗೆ ಮಿಸ್ಡ್‌ಕಾಲ್‌ (Missed Call) ಕೊಡುವ ಮೂಲಕ ಸಿಮ್ ಸ್ವ್ಯಾಪ್ ಮಾಡಿ ಹಣ ಖದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಅಚ್ಚರಿ ಎಂದರೆ ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಭಾರತದಲ್ಲಿ ಸೈಬರ್ ವಂಚನೆಯ 6 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆಯಂತೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ, ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಭಾರತದಲ್ಲಿ ಸೈಬರ್ ವಂಚನೆಯ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ವಂಚನೆಯಿಂದ ಉಳಿಸಲಾಗಿದೆ ಎಂದು ಹೇಳಿದ್ದಾರೆ. ಸೈಬರ್ ಅಪರಾಧದಿಂದ ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ, ಗೃಹ ವ್ಯವಹಾರಗಳ ಸಚಿವಾಲಯವು ಎಸ್​ಎಮ್​ಎಸ್ ಮೂಲಕ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರಗಳನ್ನು ನಡೆಸುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ. ಆದರೆ ಇದರ ನಂತರವೂ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದರು.

2021-22ರಲ್ಲಿ ಸೈಬರ್ ಕ್ರೈಂ, ಫೋರೆನ್ಸಿಕ್ ಉಪಕರಣಗಳು, ಪೊಲೀಸ್ ಆಧುನೀಕರಣ ಮತ್ತು ಸೈಬರ್ ಪೊಲೀಸರಿಗೆ ಉಪಕರಣಗಳನ್ನು ಖರೀದಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸುಮಾರು 621 ಕೋಟಿ ರೂ. ಗಳನ್ನು ನೀಡಿದೆ. ಅಲ್ಲದೆ ಜನರ ಮಾಹಿತಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ಅಪರಾಧವನ್ನು ಎದುರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸುಮಾರು 4 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ
WhatsApp: ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್: ತಪ್ಪಿಯೂ ಹೇಗೆ ಮಾಡಬೇಡಿ
ಕಡಿಮೆ ಬಜೆಟ್‌ನಲ್ಲಿ ಕ್ರಿಸ್ಮಸ್ ಉಡುಗೊರೆ ಹುಡುಕುತ್ತಿರುವಿರಾ, ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾನಲ್ಲಿ ನಡೆಯುತ್ತಿದೆ ಟಾಪ್ ಡೀಲ್‌
Paytm Wallet Transit Card: ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್​ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Elon Musk: ಟ್ವಿಟರ್​ಗೆ ಹೊಸ ಸಿಇಒ ಹುಡುಕಾಟದಲ್ಲಿದ್ದಾರೆ ಎಲಾನ್​ ಮಸ್ಕ್

ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಂದ ಶೇ. 57ರಷ್ಟು ಜನ, ಈ ಟ್ವಿಟ್ಟರ್ ಸಮೀಕ್ಷೆಯ ಒಳ ಮರ್ಮವೇನು?

ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?:

ಬೆಂಗಳೂರು ಪೊಲೀಸರು ಇತ್ತೀಚೆಗಷ್ಟೆ ಪರಿಚಯಿಸಿರುವ “ಗೋಲ್ಡನ್ ಅವರ್” ಎಂಬ ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಈಗಾಗಲೇ ಈ ಗೋಲ್ಡನ್ ಅವರ್ ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ಹಣವನ್ನು ಮರಳಿ ವಾಪಸು ಪಡೆದಿದ್ದಾರೆ. ಕೊರೊನ ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿತ್ತು. ಈ ಕಾರಣಕ್ಕಾಗಿ ಗೋಲ್ಡನ್ ಅವರ್ ಸೌಲಭ್ಯ ತರಲಾಗಿದೆ.

ಏನಿದು ಗೋಲ್ಡನ್ ಅವರ್?:

ಹೆಚ್ಚಿನ ಸಮಯದಲ್ಲಿ ಸೈಬರ್ ವಂಚಕರು ಹಣ ಕದಿಯುವ ಉದ್ದೇಶದಿಂದ ಮೆಸೇಜ್ ಕಳುಹಿಸುವುದು, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಚೇಂಜ್ ಎಂಬ ಆಫರ್ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸುತ್ತಾರೆ. ಆಗ ಆಕಸ್ಮಿಕವಾಗಿ ಗೊತ್ತಿಲ್ಲದೇ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದಕೊಂಡರೆ, ಕಳೆದುಕೊಂಡ ಒಂದು ಗಂಟೆಯ ಒಳಗೆ ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇದನ್ನೇ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.

ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ www.cybercrime.gov.in ಮೂಲಕವೂ ದೂರು ನೀಡಬಹುದು. ಈ ಮೂಲಕ ಸೈಬರ್ ವಂಚಕರ ಮೋಸದ ಜಾಲ ನಿಯಂತ್ರಣಕ್ಕೆ ಮಹತ್ವದ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ