ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಂದ ಶೇ. 57ರಷ್ಟು ಜನ, ಈ ಟ್ವಿಟ್ಟರ್ ಸಮೀಕ್ಷೆಯ ಒಳ ಮರ್ಮವೇನು?
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಮುಖ್ಯಸ್ಥನ ಹುದ್ದೆಯಿಂದ ತೊರೆಯಲು ಎಲಾನ್ ಮಾಸ್ಕ್ ಜನಾಭಿಪ್ರಾಯ ಸಂಗ್ರಹ ಮೂಲಕ ಸುಳಿವು ಕೊಟ್ಟರೆ?
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಖರೀದಿಸಿದ ಮೇಲೆ ಎಲಾನ್ ಮಸ್ಕ್ ಹೊಸ-ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದ್ದಾರೆ. ಅದರಲ್ಲೂ ಬ್ಲೂಟಿಕ್ಗೆ ಶುಲ್ಕ ವಿಧಿಸಲು ಮುಂದಾಗಿರುವುದಕ್ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಶೇಕಡ 57ರಷ್ಟು ಜನ ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಎಲಾನ್ ಮಸ್ಕ್ ತೊರೆಯಬೇಕೆಂದು ಹೇಳಿದ್ದಾರೆ. ಈ ಮೂಲಕ ಎಲಾನ್ ಮಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೆ? ಎಂದು ಎಲಾನ್ ಮಸ್ಕ್ ಪೋಲ್ ಹಾಕಿ ಸಮೀಕ್ಷೆ ನಡೆಸಿದ್ದರು. ಇದಕ್ಕೆ ಶೇಕಡ 57ರಷ್ಟು ಜನ ಹೌದು ನೀವು ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕು ಎಂದಿದ್ದಾರೆ. ಪೋಲ್ ಹಾಕುವಾಗ ಸಮೀಕ್ಷೆಯಿಂದ ಬರುವ ರಿಸಲ್ಟ್ಗೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಇದೀಗ ಸಮೀಕ್ಷೆಯಲ್ಲಿ ಬಹಳಷ್ಟು ಜನ ಎಲಾನ್ ಮಸ್ಕ್ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ತಮ್ಮ ಮಾತಿಗೆ ಬದ್ಧರಾಗಿ ಟ್ವಿಟ್ಟರ್ ಮುಖ್ಯಸ್ಥಾನ ತೊರೆಯುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.
Should I step down as head of Twitter? I will abide by the results of this poll.
— Elon Musk (@elonmusk) December 18, 2022
ಇನ್ನು ಎಲಾನ್ ಮಸ್ಕ್ ಹಾಕಿದ್ದ ಪೋಲ್ಗೆ ಇದುವರೆಗೆ 1.75 ಕೋಟಿ ಜನ ಪ್ರತಿಕ್ರಿಯಿಸಿ ತಮ್ಮ-ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. 1.75 ಕೋಟಿ ಜನರ ಪೈಕಿ ಅರ್ಧಕ್ಕಿಂತ ಹೆಚ್ಚು 57ರಷ್ಟು ಜನರು ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ಹೇಳಿದ್ದಾರೆ. ಶೇ.43ರಷ್ಟು ಬಳಕೆದಾರರಿಂದ ಮಾತ್ರ ಬೇಡ ಎಂದಿದ್ದಾರೆ. ಹೀಗಾಗಿ ಎಲಾನ್ ಮಸ್ಕ್ ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಳಿಯುವವರೇ ಎನ್ನುವ ಪ್ರಶ್ನೆಗಳು ಮೂಡಿವೆ. ಇನ್ನು ಹುದ್ದೆಯಿಂದ ತೊರೆಯಲು ಜನಾಭಿಪ್ರಾಯ ಸಂಗ್ರಹ ಮೂಲಕ ಸುಳಿವು ಕೊಟ್ಟರೆ? ಅಥವಾ ತಮ್ಮ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನ ತಿಳಿಯಲು ಈ ರೀತಿ ಮಾಡಿದರೆ? ಎನ್ನುವ ಪ್ರಶ್ನೆಗಳು ಹುಟ್ಟು ಹಾಕಿವೆ.
ಒಟ್ಟಿನಲ್ಲಿ ಎಲಾನ್ ಮಾಸ್ಕ್ ಅವರ ಪೋಲ್ ಸಮೀಕ್ಷೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:03 pm, Mon, 19 December 22