ಟ್ವಿಟರ್ ಎಲ್ಲರಿಗೂ ಉಚಿತವಲ್ಲ: ಶುಲ್ಕ ವಿಧಿಸುವ ಸಾಧ್ಯತೆ ತೆರೆದಿಟ್ಟ ಎಲನ್ ಮಸ್ಕ್ ಟ್ವೀಟ್
ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿರುತ್ತದೆ. ಆದರೆ ಸರ್ಕಾರ ಮತ್ತು ವಾಣಿಜ್ಯ ಬಳಕೆದಾರರಿಗೆ ತುಸು ಶುಲ್ಕ ವಿಧಿಸಬೇಕಾಗುತ್ತದೆ ಎಂದು ಟ್ವಿಟರ್ ಮಾಲೀಕ ಎಲನ್ ಮಸ್ಕ್ ಹೇಳಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ: ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿರುತ್ತದೆ. ಆದರೆ ಸರ್ಕಾರ ಮತ್ತು ವಾಣಿಜ್ಯ ಬಳಕೆದಾರರಿಗೆ ತುಸು ಶುಲ್ಕ ವಿಧಿಸಬೇಕಾಗುತ್ತದೆ ಎಂದು ಟ್ವಿಟರ್ ಮಾಲೀಕ ಎಲನ್ ಮಸ್ಕ್ ಹೇಳಿದ್ದಾರೆ. ಇದೀಗ ಪ್ರಭಾವಿ ವರ್ಗದ ಸಾಮಾಜಿಕ ಮಾಧ್ಯಮ ಎನಿಸಿಕೊಂಡಿರುವ ಟ್ವಿಟರ್ ಅನ್ನು ಎಲ್ಲರ ಮಾಧ್ಯಮವಾಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು. ಇದೀಗ ಶುಲ್ಕ ವಿಧಿಸುವ ಕುರಿತ ಮಸ್ಕ್ ಅವರ ಹೇಳಿಕೆಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ.
ಟ್ವಿಟರ್ ಕುರಿತು ಇನ್ನಷ್ಟು ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ
ಈ ಕುರಿತು ಟ್ವಿಟರ್ನ ಪ್ರತಿನಿಧಿಗಳಿಂದ ಪ್ರತಿಕ್ರಿಯೆ ಪಡೆಯಲು ರಾಯಿಟರ್ಸ್ ಸುದ್ದಿಸಂಸ್ಥೆ ಪ್ರಯತ್ನಿಸಿತು. ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ಟ್ವಿಟರ್ ವಕ್ತಾರರು ನಿರಾಕರಿಸಿದರು. ಕಳೆದ ತಿಂಗಳು ಟ್ವಿಟರ್ನ ಸಂಪೂರ್ಣ ಷೇರುಗಳನ್ನು ತಮ್ಮದಾಗಿಸಿಕೊಂಡ ಎಲನ್ ಮಸ್ಕ್ ಹಲವು ಬದಲಾವಣೆಗಳನ್ನು ಸೂಚಿಸುತ್ತಿದ್ದಾರೆ. ಹಲವು ಹೊಸ ಫೀಚರ್ಗಳನ್ನು ಪರಿಚಯಿಸುವುದರೊಂದಿಗೆ ಟ್ವಿಟರ್ನ ಆಲ್ಗೊರಿದಂ ಸಾರ್ವಜನಿಕಗೊಳಿಸಲಾಗುವುದು ಎಂದು ಹೇಳಿದ್ದರು. ಈ ಮೂಲಕ ಸ್ಪ್ಯಾಮ್ ತಡೆಯುವುದು ಮತ್ತು ನಂಬಿಕೆ ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ ಎಂದು ಮಸ್ಕ್ ಹೇಳಿದ್ದರು.
ಕಳೆದ ತಿಂಗಳು ಟ್ವಿಟರ್ ಖರೀದಿ ಮಾತುಕತೆ ಅಂತಿಮಗೊಳ್ಳುವ ಮೊದಲೇ ಮಸ್ಕ್ ಟ್ವಿಟರ್ನ ಬ್ಲೂ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಸೇವೆಗಳಲ್ಲಿ ಬೆಲೆ ಕಡಿತ ಸೇರಿದಂತೆ ಹಲವು ಬದಲಾವಣೆಗಳನ್ನು ಸೂಚಿಸಿದ್ದರು.
ನ್ಯೂಯಾರ್ಕ್ನ ವಾರ್ಷಿಕ ಮೆಟ್ ಗಾಲಾ ಸಮಾರಂಭದಲ್ಲಿ ಈ ವಾರದ ಆರಂಭದಲ್ಲಿ ಪಾಲ್ಗೊಂಡಿದ್ದ ಮಸ್ಕ್ ಟ್ವಿಟರ್ ಯಾವುದೆ ಕಂಟೆಂಟ್ ಅನ್ನು ಹೇಗೆ ಪ್ರಮೋಟ್ ಅಥವಾ ಡಿಮೋಟ್ ಮಾಡುತ್ತದೆ ಎಂಬುದನ್ನು ಪಾರದರ್ಶಕವಾಗಿ ಎಲ್ಲರಿಗೂ ತಿಳಿಯುವಂತೆ ಮಾಡಲು ಅದರ ಸಾಫ್ಟ್ವೇರ್ ಅನ್ನು ಸಾರ್ವಜನಿಕಗೊಳಿಸಲಾಗುವುದು. ಬಳಕೆದಾರರ ಪ್ರತಿಕ್ರಿಯೆಯನ್ನು ಆಹ್ವಾನಿಸಲಾಗುವುದು ಎಂದು ಹೇಳಿದ್ದರು.
Ultimately, the downfall of the Freemasons was giving away their stonecutting services for nothing
— Elon Musk (@elonmusk) May 3, 2022
ಇದನ್ನೂ ಓದಿ: Donald Trump: ಎಲಾನ್ ಮಸ್ಕ್ ಈಗ ಟ್ವಿಟರ್ ಒಡೆಯ: ನಿರ್ಬಂಧವಾಗಿರುವ ಡೊನಾಲ್ಡ್ ಟ್ರಂಪ್ ಖಾತೆ ಮರಳುತ್ತದೆಯೇ?
ಇದನ್ನೂ ಓದಿ: Elon Musk: ಟ್ವಿಟರ್ ನನಗೆ ತುಂಬಾ ಇಷ್ಟ, ಇದಕ್ಕೆ ಎಷ್ಟು?: 2017 ರಲ್ಲಿ ಎಲಾನ್ ಮಸ್ಕ್ ಮಾಡಿದ ಟ್ವೀಟ್ ವೈರಲ್
Published On - 9:40 am, Wed, 4 May 22