ಇಂದಿನ ಯುಗವನ್ನು ಕಂಪ್ಯೂಟರ್ (Computer) ಯುಗ ಎಂದು ಕರೆಯಲಾಗುತ್ತದೆ. ಒಂದು ದಶಕದ ಹಿಂದೆ ಇದ್ದ ಸ್ಥಿತಿಗೂ ಇಂದಿನ ಪರಿಸ್ಥಿತಿಗೂ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಇಂದು ಕಂಪ್ಯೂಟರ್ ವ್ಯಕ್ತಿಯ ಕೈ ಅಥವಾ ಜೀವನದ ಪ್ರಮುಖ ಭಾಗವಾಗಿಬಿಟ್ಟಿದೆ. ದಿನದಿಂದ ದಿನಕ್ಕೆ ಕಂಪ್ಯೂಟರ್ ಬಳಕೆಯ ವಿಧಾನ ಹೆಚ್ಚುತ್ತಿರುವ ಜೊತೆಗೆ ಇದರಲ್ಲಿ ಸಮಸ್ಯೆಗಳೂ ಅಧಿಕವಾಗುತ್ತಿದೆ. ಮುಖ್ಯವಾಗಿ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಕಂಪ್ಯೂಟರ್‌ಗೆ ವೈರಸ್ ಬರುವುದು ಅಥವಾ ಮಾಲ್ವೇರ್ (Malware) ಅಟ್ಯಾಕ್ ಆಗುವುದು ಮಾಮೂಲಾಗಿದೆ. ಮಾಲ್ವೇರ್ ಎನ್ನುವುದು ಕಂಪ್ಯೂಟರ್‌ನಲ್ಲಿ ಸಂಭವಿಸುವ ವೈರಸ್‌ನ ಹೆಸರು. ಇದು ಕಂಪ್ಯೂಟರ್‌ನ ಡೇಟಾವನ್ನು ಕ್ಷಣಾರ್ಧದಲ್ಲಿ ವಶಕ್ಕೆ ಪಡೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೆ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಆಸ್ಪತ್ರೆಯ ಸರ್ವರ್ಗೆ ವೈರಸ್ ಅಟ್ಯಾಕ್ ಆಗಿ ಹ್ಯಾಕ್ ಆಗಿರುವುದು.
ಇನ್ನೂ ಸರಿ ಆಗಿಲ್ಲ ಸರ್ವರ್:
ಏಮ್ಸ್ನ ಇ-ಆಸ್ಪತ್ರೆ ಡೇಟಾ ಸರ್ವರ್ ಹ್ಯಾಕ್ ಆಗಿ 10 ದಿನವಾಗಿದ್ದರೂ ಸರ್ವರ್ ಇನ್ನೂ ಡೌನ್ ಆಗಿದೆ. ಇ-ಹಾಸ್ಪಿಟಲ್ ಡೇಟಾವನ್ನು ಮರುಸ್ಥಾಪಿಸಲಾಗಿದ್ದರೂ, ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಇನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸದ್ಯಕ್ಕೆ ಹೊರರೋಗಿ, ಒಳರೋಗಿ, ಪ್ರಯೋಗಾಲಯಗಳು ಸೇರಿದಂತೆ ಎಲ್ಲಾ ಆಸ್ಪತ್ರೆ ಸೇವೆಗಳು ಸದ್ಯಕ್ಕೆ ಮ್ಯಾನ್ಯುವಲ್ ಮೋಡ್‌ನಲ್ಲಿ ನಡೆಯುತ್ತಿವೆ. ಸರ್ವರ್ ಡೌನ್ ಆಗಿದ್ದಲ್ಲ, ವೈರಸ್ ಅಟ್ಯಾಕ್ ಆಗಿದೆ ಎನ್ನುವ ಸತ್ಯ ತಡವಾಗಿ ತನಿಖೆ ಕೈಗೊಂಡ ಮೇಲಷ್ಟೇ ಆಸ್ಪತ್ರೆ ಸಿಬ್ಬಂದಿಗೆ ತಿಳಿದು ಆಘಾತವಾಗಿದೆ. ಸರ್ವರ್ ಸರಿಪಡಿಸಲು ತೀವ್ರ ಪ್ರಯತ್ನ ನಡೆಯುತ್ತಿದ್ದು, ಇನ್ನೂ ಸರಿಹಾದಿಗೆ ಬಂದಿಲ್ಲ.
Tech Tips: ಫೋನ್ ಪೇ, ಗೂಗಲ್ ಪೇ ಮೂಲಕ ದಿನಕ್ಕೆ ಎಷ್ಟು ಹಣ ಕಳುಹಿಸಬಹುದು?: ಇಲ್ಲಿದೆ ಮಾಹಿತಿ
ವೈರಸ್ ಅಟ್ಯಾಕ್ ಆಗಲು ಕಾರಣವೇನು?:
ಕಂಪ್ಯೂಟರ್‌ನಲ್ಲಿ ಅಗತ್ಯವಾದ ಫೈಲ್ಗಳು, ವೈಯಕ್ತಿಕ ವಿಚಾರ, ಪರ್ಸನ್ ಫೋಟೋ, ವಿಡಿಯೋ ಮುಂತಾದ ಅಗತ್ಯ ದಾಖಲೆಗಳಿದ್ದರೆ ಅದನ್ನು ವಶಪಡಿಸಿಕೊಳ್ಳಲು ಮಾಲ್ವೇರ್ಗಳು ವೈರಸ್ ಹರಿಬಿಟ್ಟು ಹ್ಯಾಕ್ ಮಾಡುತ್ತಾರೆ. ಇಂದು ವೈರಸ್‌ಗಳು ಹಲವು ವಿಧಗಳಾಗಿದ್ದು ಅದು ಯಾವುದೇ ರೀತಿಯಲ್ಲಿ ಕಂಪ್ಯೂಟರ್‌ಗೆ ಪ್ರವೇಶಿಸಿ ಎಲ್ಲವನ್ನೂ ನಾಶಪಡಿಸುವ, ವಶಪಡಿಸುವ ಸಾಮರ್ಥ್ಯ ಹೊಂದಿದೆ. ಏಮ್ಸ್ ಆಸ್ಪತ್ರೆ ವಿಚಾರವನ್ನೇ ತೆಗೆದುಕೊಳ್ಳುವುದಾದರೆ, ಇಲ್ಲಿ ವಿಐವಿ, ವಿವಿಐಪಿ, ದೇಶದ ಗಣ್ಯಾತಿಗಣ್ಯರು, ಸಚಿವರು, ಮಾಜಿ ಸಚಿವರು, ಸಂಸದರು, ನ್ಯಾಯಾಧೀಶರು ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳು ಹೆಚ್ಚಾಗಿ ಚಿಕಿತ್ಸೆ ಪಡೆಯುತ್ತಾರೆ. ಇವರೆಲ್ಲರ ಡೇಟಾಗಳು, ಔಷಧಿ ಮಾಹಿತಿಗಳನ್ನೆಲ್ಲ ಕ್ಷಣಮಾತ್ರದಲ್ಲಿ ಬಾಚಿಕೊಂಡು ಎಲ್ಲ ವಿವರಗಳಲ್ಲಿ ಕದ್ದಿದ್ದಾರೆ.
ಹೇಗೆ ಅಟ್ಯಾಕ್ ಆಗುತ್ತದೆ?:
ವೈರಸ್‌ಗಳು ಕಂಪ್ಯೂಟರ್‌ನ ಪ್ರೋಗ್ರಾಂನೊಳಗೆ ಪ್ರವೇಶಿಸಿ, ಆ ಪ್ರೋಗ್ರಾಂ ರನ್ ಆಗುವಾಗ ಈ ವೈರಸ್ ಕೂಡ ರನ್ ಆಗಿ ಬೇರೆ ಪ್ರೋಗ್ರಾಂಗಳಿಗೆ, ಅಪ್ಲಿಕೇಶನ್‌ಗಳಿಗೆ ಅಥವಾ ಇಡೀ ಕಂಪ್ಯೂಟರಿಗೆ ಹರಡುತ್ತದೆ. ಹೆಚ್ಚಾಗಿ, ಪೂರ್ವನಿರ್ಧರಿತ ದಿನದಂದು ಈ ವೈರಸ್ ಕೋಡ್ ಸಕ್ರಿಯಗೊಳ್ಳುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಹಿಂದೆಲ್ಲಾ ವೈರಸ್‌ಗಳು ಕಂಪ್ಯೂಟರನ್ನು ಹಾಳುಗೆಡಹುವಂತೆ ಕಿಡಿಗೇಡಿಗಳ ಮೂಲಕ ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಅವು ಮಾಹಿತಿ ಕದಿಯುವ ತಂತ್ರಜ್ಞಾನವಾಗಿ ಬೆಳೆದುಬಿಟ್ಟಿದೆ. ಕೆಲ ವೈರಸ್ಗಳಲ್ಲಿ ಪ್ರೋಗ್ರಾಂ ಅನ್ನು ರನ್ ಮಾಡಲೇಬೇಕೆಂದಿಲ್ಲ. ತಾನಾಗಿಯೇ ಬೇರೆ ಕಂಪ್ಯೂಟರಿಗೆ ನಕಲಾಗುವ ಇದು, ಸ್ವಯಂ ಆಗಿ ರನ್ ಆಗುತ್ತದೆ ಮತ್ತು ತದ್ರೂಪಿ ಫೈಲ್‌ಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದರಿಂದ ವೆಬ್ ಬ್ರೌಸಿಂಗ್ ನಿಧಾನವಾಗುತ್ತದೆ ಮತ್ತು ಸಾಕಷ್ಟು ಡೇಟಾ ನಷ್ಟವಾಗುತ್ತದೆ. ಇಂಟರ್‌ನೆಟ್ ಸಂಪರ್ಕ ಮತ್ತು ಹಾರ್ಡ್ ಡ್ರೈವ್‌ಗಳ ಸ್ಕ್ಯಾನ್ ಮಾಡದೇ ಬಳಸುವುದರಿಂದ ಕಂಪ್ಯೂಟರ್‌ನೊಳಗೆ ವೈರಸ್ ಅಟ್ಯಾಕ್ ಆಗುತ್ತದೆ.
Top Android Apps 2022: ಈ ವರ್ಷದ ಬೆಸ್ಟ್ ಗೇಮ್ಸ್, ಆ್ಯಪ್ಸ್ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ
ವೈರಸ್ ಅಟ್ಯಾಕ್ ಆಗಿದೆಯೆಂದು ತಿಳಿಯವುದು ಹೇಗೆ?:
ವೈರಸ್ ಅಟ್ಯಾಕ್ನಿಂದ ಪಾರಾಗುವುದು ಹೇಗೆ?:
ವೈರಸ್ ಕಂಪ್ಯೂಟರ್ ಅನ್ನು ಪ್ರವೇಶಿಸಿದೆ ಎಂಬ ಅನುಮಾನ ಬಂದ ಕೂಡಲೇ ಮೊದಲು ಕಂಪ್ಯೂಟರ್ ಅಂತರ್ಜಾಲ ಸಂಪರ್ಕ ತಪ್ಪಿಸಿ. ಇದರಿಂದ ಹ್ಯಾಕರ್‌ಗಳು ಇಂಟರ್‌ನೆಟ್ ಮೂಲಕ ಕಂಪ್ಯೂಟರ್ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಅಂತೆಯೆ ಉತ್ತಮ ಕಂಪನಿಯ ಆಂಟಿ-ವೈರಸ್ ಅನ್ನು ಇನ್ಸ್ಟಾಲ್ ಮಾಡಿ ಉಪಯೋಗಿಸುವುದು ಕಡ್ಡಾಯ. ಈ ಆಂಟಿ-ವೈರಸ್ಗೆ ಕೊನೆಯ ದಿನಾಂಕವಿದ್ದು ನೆನಪಿನಲ್ಲಿಡಿ. ನೀವು ಮೊಬೈಲ್, ಪೆನ್ ಡ್ರೈವ್ ಅಥವಾ ಯಾವುದೇ ಸಾಧನವನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವಾಗ ಸ್ಕ್ಯಾನ್ ಮಾಡಿ. ಮುಖ್ಯವಾಗಿ ಆನ್‌ಲೈನ್‌ನಲ್ಲಿ ಏನಾದರು ವೀಕ್ಷಿಸಿದಾಗ ಅಥವಾ ಡೌನ್‌ಲೋಡ್ ಮಾಡಿದಾಗ ಅದು ನಂಬಿಕೆಗೆ ಅರ್ಹವಾದ ತಾಣವೇ ಎಂಬುದನ್ನು ಪರಿಶೀಲಿಸಿ ಉಪಯೋಗಿಸಿ. ಸಿಸ್ಟಂನ ಡೇಟಾವನ್ನು ಬ್ಯಾಕಪ್ ತೆಗೆದುಕೊಂಡು ಸಂಪೂರ್ಣ ಫಾರ್ಮ್ಯಾಟ್ ಮಾಡಿ ಪುನಃ ಹೊಸ ಅಪರೇಟಿಂಗ್ ಸಿಟ್ಟಂ ಇನ್ಸ್ಟಾಲ್ ಮಾಡುವುದು ಕೂಡ ಒಳ್ಳೆಯ ನಿರ್ಧಾರ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Fri, 2 December 22