ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ಫೋನ್ನಿಂದ (Smartphone) ಹಿಡಿದು ಟ್ಯಾಬ್ಲೆಟ್, ಕಂಪ್ಯೂಟರ್ ಅಷ್ಟೇ ಯಾಕೆ ಮನೆಯ ಬಾಗಿಲನ್ನೂ ಕೂಡ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಸೌಲಭ್ಯವು ಪ್ರಸಿದ್ಧಿಯಾಗಿದೆ. ಇದೀಗ ಈ ತಂತ್ರಜ್ಞಾನವು ಒಂದು ಹಂತ ಮುಂದಕ್ಕೆ ಸಾಗುತ್ತಿದೆ. ಸ್ಮಾಟ್ಫೋನ್ನಲ್ಲಿರುವಂತೆಯೇ ಸ್ಮಾರ್ಟ್ ಕಾರುಗಳಲ್ಲಿ ಇಂತಹದೇ ಫೀಚರ್ಸ್ ಅಳವಡಿಸುವ ಬಗ್ಗೆ ಜೆನೆಸಿಸ್ (Genesis) ಮೋಟಾರ್ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ ಫೇಸ್ ಕನೆಕ್ಟ್ ತಂತ್ರಜ್ಞಾನ ಮತ್ತು ಕೀ ಸಹಾಯವಿಲ್ಲದೆ ಫಿಂಗರ್ ಪ್ರಿಂಟ್ ಮೂಲಕ ಕಾರಿನ ಬಾಗಿಲು ತೆರೆಯುವ ತಂತ್ರಜ್ಞಾನ ಮುಂಬರುವ ಕಾರಿನಲ್ಲಿ ಬರಲಿದೆ ಎಂದು ಹೇಳಿದೆ.
ಹೌದು, ಒಂದು ಕಾಲದಲ್ಲಿ ಕೇವಲ ಅಂಬಾಸಿಡರ್ ಕಾರುಗಳು ರಸ್ತೆಯಲ್ಲಿರುತ್ತಿದ್ದವು. ಇದೀಗ ಟೆಕ್ನಾಲಜಿಯಿಂದಾಗಿ ಕಾರುಗಳ ಜಗತ್ತು ಬದಲಾಗಿ ಬಿಟ್ಟಿದೆ. ಇನ್ನುಂದೆ ಡ್ರೈವರ್ಗಳು ವೆಹಿಕಲ್ ಅನ್ನು ತಮ್ಮ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಮತ್ತು ಕಾರನ್ನು ಸ್ಟಾರ್ಟ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಲಾಗುತ್ತಿದೆ.
ಈ ಹೊಸ ತಂತ್ರಜ್ಞಾನವು ಗ್ರಾಹಕರಿಗೆ ಉತ್ತಮ ಅನುಭವ ನೀಡುವುದರ ಜೊತೆಗೆ ಹೆಚ್ಚು ತಂತ್ರಜ್ಞಾನದತ್ತ ಮರಳಲು ಸಹಾಯ ಮಾಡುತ್ತದೆ ಎಂದು ಜೆನೆಸಿಸ್ ಹೇಳಿದೆ. ಫೇಸ್ ಕನೆಕ್ಟ್ ತಂತ್ರಜ್ಞಾನವು ಚಾಲಕನನ್ನು ಗುರುತಿಸಿದ ನಂತರ, ಅವರ ಪ್ರೊಫೈಲ್‌ನೊಂದಿಗೆ ಸಿಂಕ್ ಆಗುತ್ತದೆ. ಜೊತೆಗೆ ಚಾಲಕನ ಆಸನ ಮತ್ತು ಸ್ಟೀರಿಂಗ್ ವೀಲ್ ಅನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಹೆಡ್-ಅಪ್-ಡಿಸ್‌ಪ್ಲೇ (HUD), ಸೈಡ್ ಮಿರರ್‌ಗಳು ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಅವರ ಕಸ್ಟಮ್ ಆದ್ಯತೆಗಳ ಆಧಾರದ ಮೇಲೆ ಹೊಂದಿಸುತ್ತದೆ ಎಂದು ತಿಳಿಸಿದೆ.
ಫಿಂಗರ್ ಪ್ರಿಂಟ್ ಅನ್ನು ಕಾರಿನ ಡೋರ್ನಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇಗ್ನೀಷನ್ ಪಾಯಿಂಟ್ ನಲ್ಲೂ ಅಳವಡಿಸಲಾಗಿರುತ್ತದೆ ಎಂದು ಹೇಳಲಾಗಿದೆ. ಇನ್ನೂ ನೂತನ ಫೇಸ್ ಐಡಿ ತಂತ್ರಜ್ಞಾನ ಯಾವುದೇ ಸನ್ನಿವೇಶದಲ್ಲೂ ಕಾರ್ಯನಿರ್ವಹಿಸಲಿದೆ. ಕತ್ತಲಿನಲ್ಲಿಯೂ ಮುಖ ಗುರುತಿಸಿ ಡೋರ್ ಅನ್ಲಾಕ್ ಮಾಡಲಿದೆ. ಆದರೆ ಈ ತಂತ್ರಜ್ಞಾನವು ಮೊದಲೇ ನೋಂದಾಯಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ನಿಯರ್ ಇನ್ಫ್ರಾ-ರೆಡ್ (NIR) ಕ್ಯಾಮೆರಾವನ್ನು ಅಳವಡಿಸಿದೆ.
ಜೆನೆಸಿಸ್ ಮೋಟಾರ್ ಸಂಸ್ಥೆ ಹೇಳುವಂತೆ, ಪ್ರತಿ ವಾಹನಕ್ಕೆ ಎರಡು ಫೇಸ್ ಕನೆಕ್ಟ್ ಸಿಸ್ಟಂ ಸಂಗ್ರಹಿಸುವ ಆಯ್ಕೆಯನ್ನು ನೀಡಲಾಗಿದೆ. ಆಪ್ತರ ಮುಖವನ್ನು ಎನ್‌ಕ್ರಿಪ್ಟ್ ಮಾಡಬಹುದಾಗಿದೆ ಎಂದು ಜೆನೆಸಿಸ್ ಹೇಳಿದೆ. ಚಾಲಕರ ಅನುಕೂಲಕ್ಕಾಗಿ ಫೆಸ್ ಕನೆಕ್ಸ್ ಫೀಚರ್ನಲ್ಲಿ ದೃಢವಾದ ಮುಖದ ಛಾಯೆಯನ್ನು ಯಾವುದೇ ಸಮಯದಲ್ಲಿ ಅಳಿಸಬಹುದು ಮತ್ತು ಹೊಸ ಪ್ರೊಫೈಲ್‌ಗಳನ್ನು ಧ್ವನಿ ಸಹಾಯಕ ಬಳಸಿ ನೋಂದಾಯಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಯಾವ ಡ್ರೈವರ್ ಕೂರುತ್ತಾರೋ ಎಂಬುದನ್ನು ಫಿಂಗರ್ ಪ್ರಿಂಟ್ ಸೆನ್ಸರ್ ನಿಂದಲೇ ಅರ್ಥಮಾಡಿಕೊಳ್ಳುವ ಕಾರು ಕೂಡಲೇ ಹಿಂಭಾಗದ ಕನ್ನಡಿಗಳನ್ನು ಮತ್ತು ಡ್ರೈವಿಂಗ್ ಸೀಟನ್ನು ಅವರಿಗೆ ತಕ್ಕಂತೆ ಹೊಂದಿಸಿಬಿಡುವ ಆಯ್ಕೆಕೂಡ ಇದೆ ಎನ್ನಲಾಗಿದೆ. ಜೆನೆಸಿಸ್ ಈ ಹೊಸ ತಂತ್ರಜ್ಞಾನಗಳನ್ನು ತನ್ನ ಮುಂಬರುವ ಮಾದರಿ ಜಿವಿ60 ವಾಹನಕ್ಕೆ ಅನ್ವಯಿಸಲು ಯೋಜಿಸಿದೆ.
Oppo A16: 5000mAh ಬ್ಯಾಟರಿ, ಕೇವಲ 13,990 ರೂ.: ಭಾರತದಲ್ಲಿ ಹೊಸ ಒಪ್ಪೋ A16 ಸ್ಮಾರ್ಟ್ಫೋನ್ ಬಿಡುಗಡೆ
(Face ID and fingerprint sensor on cars Genesis promises smartphone-like tech)