AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Mega Music Fest: ಅಮೆಜಾನ್​ನಲ್ಲಿ ಮ್ಯೂಸಿಕ್‌ ಫೆಸ್ಟ್‌ ಸೇಲ್‌: ಹೆಡ್‌ಫೋನ್‌, ಸ್ಪೀಕರ್‌ಗಳು ಬಂಪರ್ ಡಿಸ್ಕೌಂಟ್​ಗೆ ಲಭ್ಯ

ಈಗಾಗಲೇ ಭಾರತದಲ್ಲಿ ಅಮೆಜಾನ್ ಮ್ಯೂಸಿಕ್ ಫೆಸ್ಟ್ ಸೇಲ್ ಲೈವ್ ಆಗಿದ್ದು, ಇದು ಸೆಪ್ಟೆಂಬರ್ 20 ರವರೆಗೆ ಮುಂದುವರಿಯಲಿದೆ.

Amazon Mega Music Fest: ಅಮೆಜಾನ್​ನಲ್ಲಿ ಮ್ಯೂಸಿಕ್‌ ಫೆಸ್ಟ್‌ ಸೇಲ್‌: ಹೆಡ್‌ಫೋನ್‌, ಸ್ಪೀಕರ್‌ಗಳು ಬಂಪರ್ ಡಿಸ್ಕೌಂಟ್​ಗೆ ಲಭ್ಯ
Amazon
TV9 Web
| Edited By: |

Updated on: Sep 19, 2021 | 3:02 PM

Share

ದೇಶದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಆನ್‌ಲೈನ್‌ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಸದ್ಯ ಅಮೆಜಾನ್ ಭಾರತದಲ್ಲಿ ಮ್ಯೂಸಿಕ್ ಫೆಸ್ಟ್ ಸೇಲ್ ಆಯೋಜಿಸಿದೆ. ಇದರ ಮೂಲಕ ಹೆಡ್ಫೋನ್, ಸ್ಪೀಕರ್. ಗಿಟಾರ್, ಸೌಂಡ್ರ್ಬಾರ್ ಮೇಲೆ ಆಕರ್ಷಕ ಉಡುಗೊರೆ ನೀಡಿದೆ.

ಈಗಾಗಲೇ ಭಾರತದಲ್ಲಿ ಮ್ಯೂಸಿಕ್ ಫೆಸ್ಟ್ ಸೇಲ್ ಲೈವ್ ಆಗಿದ್ದು, ಇದು ಸೆಪ್ಟೆಂಬರ್ 20 ರವರೆಗೆ ಮುಂದುವರಿಯಲಿದೆ. ಕಡಿಮೆ ಬೆಲೆಯ ಬ್ರಾಂಡೆಡ್ ಹೆಡ್ ಫೋನುಗಳನ್ನು ಮಾರಾಟ ಮಾಡುತ್ತಿದೆ. 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಅಮೆಜಾನ್ ಮ್ಯೂಸಿಕ್ ಫೆಸ್ಟ್ ಸೇಲಿನಲ್ಲಿ ಹೆಡ್ ಫೋನ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.

ಇನ್ನೂ ಫ್ಯಾಬ್ ಫೋನ್ ಫೆಸ್ಟ್ ಸೇಲ್ ನಲ್ಲಿ ಟಾಪ್ ಮೊಬೈಲ್ ಸೆಲ್ಲಿಂಗ್ ಬ್ರಾಂಡ್ ಗಳಾದ ಶವೋಮಿ, ರೆಡ್ಮಿ, ಸ್ಯಾಮ್ಸಂಗ್, ಒಪ್ಪೋ, ಐಫೋನ್ ಸೇರಿದಂತೆ ಪ್ರಮುಖ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ.

ಉಳಿದಂತೆ ಸೋನಿ WF-1000XM3 ಸಹ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ಸೋನಿ WF-1000XM3 ಹೆಡ್‌ಫೋನ್‌ 12,990 ರೂ. ಗಳಿಗೆ ಲಭ್ಯವಾಗಲಿದೆ.

ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ಬೋಟ್‌ ಏರ್‌ಡೂಪ್ಸ್‌ 441 ವಾಯರ್‌ಲೆಸ್ ಇಯರ್‌ಫೋನ್‌ ರಿಯಾಯಿತಿ ದರದಲ್ಲಿ 1,999 ರೂ. ಗಳಿಗೆ ನೀಡಲಿದೆ. ಇನ್ನು ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ ಐದು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಹೆಚ್ಚುವರಿ 25 ಗಂಟೆಗಳ ಚಾರ್ಜಿಂಗ್ ಕೇಸ್ ಅನ್ನು ನೀಡಲಿದೆ. ಏರ್‌ಡೂಪ್ಸ್‌ 441 ಬ್ಲೂಟೂತ್ v5.0, ಡಿಜಿಟಲ್ ಅಸಿಸ್ಟೆಂಟ್, IPX7 ರೇಟಿಂಗ್ ಒಳಗೊಂಡಿದೆ.

ಇದಲ್ಲದೆ ಇನ್ಫಿನಿಟಿ ಹಾರ್ಡ್‌ರಾಕ್ 210 ಸ್ಪೀಕರ್ ಕೂಡ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದೆ. ಸದ್ಯ ಈ ಸ್ಪೀಕರ್‌ ಅಮೆಜಾನ್‌ನಲ್ಲಿ 4,999 ರೂ. ಬೆಲೆ ಪಡೆದುಕೊಂಡಿದೆ. ಇದು 100W ಔಟ್‌ಪುಟ್‌ ನೊಂದಿಗೆ 2.1 ಚಾನೆಲ್ ಮಲ್ಟಿಮೀಡಿಯಾ ಸ್ಪೀಕರ್ ಆಗಿದೆ. ಇದನ್ನು ಟಿವಿ, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಅಥವಾ ಯಾವುದೇ ಬ್ಲೂಟೂತ್ ಡಿವೈಸ್‌ಗೆ ಕನೆಕ್ಟ್‌ ಮಾಡಬಹುದು.

Airtel: ಐಪಿಎಲ್ ವೀಕ್ಷಿಸಲು ಅಭಿಮಾನಿಗಳಿಗೆ ಬಂಪರ್ ಆಫರ್ ಪರಿಚಯಿಸಿದ ಏರ್ಟೆಲ್

Xiaomi 11 Lite NE 5G: ಬಿಡುಗಡೆಗು ಮುನ್ನವೇ ಸೋರಿಕೆಯಾಯ್ತು ಶವೋಮಿ 11 ಲೈಟ್‌ NE 5G ಸ್ಮಾರ್ಟ್​ಫೋನ್ ವಿಶೇಷತೆ

(Amazon Mega Music Fest: Amazon announces Mega Music Fest Check out Best offet on audio products)

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ