AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Genesis GV60: ಸದ್ಯದಲ್ಲೇ ಸ್ಮಾರ್ಟ್​ಫೋನ್​ನಂತೆ ಕಾರಿಗೂ ಬರುತ್ತಿದೆ ಫಿಂಗರ್ ಪ್ರಿಂಟ್, ಫೇಸ್ ಐಡಿ

ಒಂದು ಕಾಲದಲ್ಲಿ ಕೇವಲ ಅಂಬಾಸಿಡರ್ ಕಾರುಗಳು ರಸ್ತೆಯಲ್ಲಿರುತ್ತಿದ್ದವು. ಇದೀಗ ಟೆಕ್ನಾಲಜಿಯಿಂದಾಗಿ ಕಾರುಗಳ ಜಗತ್ತು ಬದಲಾಗಿ ಬಿಟ್ಟಿದೆ. ಇನ್ನುಂದೆ ಡ್ರೈವರ್​ಗಳು ವೆಹಿಕಲ್ ಅನ್ನು ತಮ್ಮ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಮತ್ತು ಕಾರನ್ನು ಸ್ಟಾರ್ಟ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಲಾಗುತ್ತಿದೆ.

Genesis GV60: ಸದ್ಯದಲ್ಲೇ ಸ್ಮಾರ್ಟ್​ಫೋನ್​ನಂತೆ ಕಾರಿಗೂ ಬರುತ್ತಿದೆ ಫಿಂಗರ್ ಪ್ರಿಂಟ್, ಫೇಸ್ ಐಡಿ
Face ID Car
TV9 Web
| Updated By: Vinay Bhat|

Updated on: Sep 20, 2021 | 1:49 PM

Share

ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್​ಫೋನ್​ನಿಂದ (Smartphone) ಹಿಡಿದು ಟ್ಯಾಬ್ಲೆಟ್, ಕಂಪ್ಯೂಟರ್ ಅಷ್ಟೇ ಯಾಕೆ ಮನೆಯ ಬಾಗಿಲನ್ನೂ ಕೂಡ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಸೌಲಭ್ಯವು ಪ್ರಸಿದ್ಧಿಯಾಗಿದೆ. ಇದೀಗ ಈ ತಂತ್ರಜ್ಞಾನವು ಒಂದು ಹಂತ ಮುಂದಕ್ಕೆ ಸಾಗುತ್ತಿದೆ. ಸ್ಮಾಟ್​ಫೋನ್​ನಲ್ಲಿರುವಂತೆಯೇ ಸ್ಮಾರ್ಟ್​ ಕಾರುಗಳಲ್ಲಿ ಇಂತಹದೇ ಫೀಚರ್ಸ್​​ ಅಳವಡಿಸುವ ಬಗ್ಗೆ ಜೆನೆಸಿಸ್ (Genesis) ಮೋಟಾರ್​ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ  ಫೇಸ್​ ಕನೆಕ್ಟ್​ ತಂತ್ರಜ್ಞಾನ ಮತ್ತು ಕೀ ಸಹಾಯವಿಲ್ಲದೆ ಫಿಂಗರ್​ ಪ್ರಿಂಟ್​ ಮೂಲಕ ಕಾರಿನ ಬಾಗಿಲು ತೆರೆಯುವ ತಂತ್ರಜ್ಞಾನ ಮುಂಬರುವ ಕಾರಿನಲ್ಲಿ ಬರಲಿದೆ ಎಂದು ಹೇಳಿದೆ.

ಹೌದು, ಒಂದು ಕಾಲದಲ್ಲಿ ಕೇವಲ ಅಂಬಾಸಿಡರ್ ಕಾರುಗಳು ರಸ್ತೆಯಲ್ಲಿರುತ್ತಿದ್ದವು. ಇದೀಗ ಟೆಕ್ನಾಲಜಿಯಿಂದಾಗಿ ಕಾರುಗಳ ಜಗತ್ತು ಬದಲಾಗಿ ಬಿಟ್ಟಿದೆ. ಇನ್ನುಂದೆ ಡ್ರೈವರ್​ಗಳು ವೆಹಿಕಲ್ ಅನ್ನು ತಮ್ಮ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಮತ್ತು ಕಾರನ್ನು ಸ್ಟಾರ್ಟ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಲಾಗುತ್ತಿದೆ.

ಈ ಹೊಸ ತಂತ್ರಜ್ಞಾನವು ಗ್ರಾಹಕರಿಗೆ ಉತ್ತಮ ಅನುಭವ ನೀಡುವುದರ ಜೊತೆಗೆ ಹೆಚ್ಚು ತಂತ್ರಜ್ಞಾನದತ್ತ ಮರಳಲು ಸಹಾಯ ಮಾಡುತ್ತದೆ ಎಂದು ಜೆನೆಸಿಸ್​ ಹೇಳಿದೆ. ಫೇಸ್ ಕನೆಕ್ಟ್ ತಂತ್ರಜ್ಞಾನವು ಚಾಲಕನನ್ನು ಗುರುತಿಸಿದ ನಂತರ, ಅವರ ಪ್ರೊಫೈಲ್‌ನೊಂದಿಗೆ ಸಿಂಕ್ ಆಗುತ್ತದೆ. ಜೊತೆಗೆ ಚಾಲಕನ ಆಸನ ಮತ್ತು ಸ್ಟೀರಿಂಗ್ ವೀಲ್ ಅನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಹೆಡ್-ಅಪ್-ಡಿಸ್‌ಪ್ಲೇ (HUD), ಸೈಡ್ ಮಿರರ್‌ಗಳು ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಅವರ ಕಸ್ಟಮ್ ಆದ್ಯತೆಗಳ ಆಧಾರದ ಮೇಲೆ ಹೊಂದಿಸುತ್ತದೆ ಎಂದು ತಿಳಿಸಿದೆ.

ಫಿಂಗರ್ ಪ್ರಿಂಟ್ ಅನ್ನು ಕಾರಿನ ಡೋರ್​ನಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇಗ್ನೀಷನ್ ಪಾಯಿಂಟ್ ನಲ್ಲೂ ಅಳವಡಿಸಲಾಗಿರುತ್ತದೆ ಎಂದು ಹೇಳಲಾಗಿದೆ. ಇನ್ನೂ ನೂತನ ಫೇಸ್​ ಐಡಿ ತಂತ್ರಜ್ಞಾನ ಯಾವುದೇ ಸನ್ನಿವೇಶದಲ್ಲೂ ಕಾರ್ಯನಿರ್ವಹಿಸಲಿದೆ. ಕತ್ತಲಿನಲ್ಲಿಯೂ ಮುಖ ಗುರುತಿಸಿ ಡೋರ್​ ಅನ್​ಲಾಕ್​ ಮಾಡಲಿದೆ. ಆದರೆ ಈ ತಂತ್ರಜ್ಞಾನವು ಮೊದಲೇ ನೋಂದಾಯಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ನಿಯರ್ ಇನ್ಫ್ರಾ-ರೆಡ್ (NIR) ಕ್ಯಾಮೆರಾವನ್ನು ಅಳವಡಿಸಿದೆ.

ಜೆನೆಸಿಸ್ ಮೋಟಾರ್​ ಸಂಸ್ಥೆ ಹೇಳುವಂತೆ, ಪ್ರತಿ ವಾಹನಕ್ಕೆ ಎರಡು ಫೇಸ್ ಕನೆಕ್ಟ್ ಸಿಸ್ಟಂ ಸಂಗ್ರಹಿಸುವ ಆಯ್ಕೆಯನ್ನು ನೀಡಲಾಗಿದೆ. ಆಪ್ತರ ಮುಖವನ್ನು ಎನ್‌ಕ್ರಿಪ್ಟ್ ಮಾಡಬಹುದಾಗಿದೆ ಎಂದು ಜೆನೆಸಿಸ್ ಹೇಳಿದೆ. ಚಾಲಕರ ಅನುಕೂಲಕ್ಕಾಗಿ ಫೆಸ್​ ಕನೆಕ್ಸ್​ ಫೀಚರ್​ನಲ್ಲಿ ದೃಢವಾದ ಮುಖದ ಛಾಯೆಯನ್ನು ಯಾವುದೇ ಸಮಯದಲ್ಲಿ ಅಳಿಸಬಹುದು ಮತ್ತು ಹೊಸ ಪ್ರೊಫೈಲ್‌ಗಳನ್ನು ಧ್ವನಿ ಸಹಾಯಕ ಬಳಸಿ ನೋಂದಾಯಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಯಾವ ಡ್ರೈವರ್ ಕೂರುತ್ತಾರೋ ಎಂಬುದನ್ನು ಫಿಂಗರ್ ಪ್ರಿಂಟ್ ಸೆನ್ಸರ್ ನಿಂದಲೇ ಅರ್ಥಮಾಡಿಕೊಳ್ಳುವ ಕಾರು ಕೂಡಲೇ ಹಿಂಭಾಗದ ಕನ್ನಡಿಗಳನ್ನು ಮತ್ತು ಡ್ರೈವಿಂಗ್ ಸೀಟನ್ನು ಅವರಿಗೆ ತಕ್ಕಂತೆ ಹೊಂದಿಸಿಬಿಡುವ ಆಯ್ಕೆಕೂಡ ಇದೆ ಎನ್ನಲಾಗಿದೆ. ಜೆನೆಸಿಸ್ ಈ ಹೊಸ ತಂತ್ರಜ್ಞಾನಗಳನ್ನು ತನ್ನ ಮುಂಬರುವ ಮಾದರಿ ಜಿವಿ60 ವಾಹನಕ್ಕೆ ಅನ್ವಯಿಸಲು ಯೋಜಿಸಿದೆ.

Oppo A16: 5000mAh ಬ್ಯಾಟರಿ, ಕೇವಲ 13,990 ರೂ.: ಭಾರತದಲ್ಲಿ ಹೊಸ ಒಪ್ಪೋ A16 ಸ್ಮಾರ್ಟ್​ಫೋನ್ ಬಿಡುಗಡೆ

Amazon Mega Music Fest: ಅಮೆಜಾನ್​ನಲ್ಲಿ ಮ್ಯೂಸಿಕ್‌ ಫೆಸ್ಟ್‌ ಸೇಲ್‌: ಹೆಡ್‌ಫೋನ್‌, ಸ್ಪೀಕರ್‌ಗಳು ಬಂಪರ್ ಡಿಸ್ಕೌಂಟ್​ಗೆ ಲಭ್ಯ

(Face ID and fingerprint sensor on cars Genesis promises smartphone-like tech)

ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ