Realme C25Y: 50MP ಕ್ಯಾಮೆರಾ, 5000mAh ಬ್ಯಾಟರಿ, 10,999 ರೂ.: ಈ ಸ್ಮಾರ್ಟ್​ಫೋನ್ ಬೇಕಿದ್ದರೆ ಇಂದೇ ಬುಕ್ ಮಾಡಿ

ರಿಯಲ್‌ಮಿ C25Y ಸ್ಮಾರ್ಟ್‌ಫೋನ್‌ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿ. ಕಾಮ್​ನಲ್ಲಿ ಪ್ರಿ-ಆರ್ಡರ್‌ ಸೆ. 20 ರಿಂದ ಆರಂಭವಾಗಿದೆ.

Realme C25Y: 50MP ಕ್ಯಾಮೆರಾ, 5000mAh ಬ್ಯಾಟರಿ, 10,999 ರೂ.: ಈ ಸ್ಮಾರ್ಟ್​ಫೋನ್ ಬೇಕಿದ್ದರೆ ಇಂದೇ ಬುಕ್ ಮಾಡಿ
Realme C25Y
Follow us
TV9 Web
| Updated By: Vinay Bhat

Updated on: Sep 20, 2021 | 3:31 PM

ಪ್ರಸಿದ್ಧ ರಿಯಲ್‌ಮಿ ಕಂಪೆನಿ ಕಳೆದ ವಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ರಿಯಲ್‌ ಮಿ ಸಿ25ವೈ (Realme C25Y) ಸ್ಮಾರ್ಟ್‌ಫೋನ್‌ ಇಂದಿನಿಂದ ಬುಕ್ಕಿಂಗ್ ಮಾಡಲು ಅವಕಾಶವಿದೆ. ವಿಶೇಷವಾಗಿ ಈ ಸ್ಮಾರ್ಟ್​ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 48 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart) ಮತ್ತು ರಿಯಲ್ ಮಿ. ಕಾಮ್​ನಲ್ಲಿ (Realme.com) ಪ್ರಿ-ಆರ್ಡರ್‌ ಸೆ. 20 ರಿಂದ ಆರಂಭವಾಗಿದ್ದು ಸೆಪ್ಟೆಂಬರ್‌ 27 ರಂದು ಮೊದಲ ಸೇಲ್‌ ಕಾಣಲಿದೆ.

ಭಾರತದಲ್ಲಿ ರಿಯಲ್‌ಮಿ C25Y ಸ್ಮಾರ್ಟ್‌ಫೋನ್‌ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂ. ಹಾಗೂ 4GB RAM ಮತ್ತು 128 GB ಸ್ಟೋರೇಜ್ ರೂಪಾಂತರಕ್ಕೆ 11,999 ರೂ. ನಿಗದಿ ಮಾಡಲಾಗಿದೆ. ಇನ್ನು ಈ ಎರಡೂ ಮಾದರಿಗಳು ಗ್ಲೇಸಿಯರ್ ಬ್ಲೂ ಮತ್ತು ಮೆಟಲ್ ಗ್ರೇ ಕಲರ್ ಆಯ್ಕೆಗಳಲ್ಲಿ ಬರುತ್ತವೆ.

ರಿಯಲ್‌ಮಿ C25Y ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಯುನಿಸೋಕ್ T610 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಆರ್ ಎಡಿಷನ್ ಇಂಟರ್ಫೇಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ರಿಯರ್‌ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI ಬ್ಯೂಟಿ, HDR ಮೋಡ್, ಪನೋರಮಿಕ್ ವ್ಯೂ, ಪೋರ್ಟ್ರೇಟ್, ಫೀಚರ್ಸ್‌ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬರೋಬ್ಬರಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಬ್ಯಾಟರಿ 48 ದಿನಗಳ ಸ್ಟ್ಯಾಂಡ್‌ಬೈ ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 b/g/n, ಬ್ಲೂಟೂತ್ v5, GPS/A-GPS, ಮೈಕ್ರೋ- USB, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಇತ್ತೀಚೆಗಿನ ಪ್ರಮುಖ ಆಯ್ಕೆಯನ್ನು ನೀಡಲಾಗಿದೆ.

iPhone 13: ಐಫೋನ್ 13 ಖರೀದಿಸುವ ಪ್ಲಾನ್​ನಲ್ಲಿದ್ದರೆ ವೊಡಾಫೋನ್-ಐಡಿಯಾದ ಈ ಆಫರ್ ಗಮನಿಸಿ

Genesis GV60: ಸದ್ಯದಲ್ಲೇ ಸ್ಮಾರ್ಟ್​ಫೋನ್​ನಂತೆ ಕಾರಿಗೂ ಬರುತ್ತಿದೆ ಫಿಂಗರ್ ಪ್ರಿಂಟ್, ಫೇಸ್ ಐಡಿ

(Realme C25Y the latest entry-level smartphone will be available for pre-booking from today)