Telegram Update: ವಾಟ್ಸ್​ಆ್ಯಪ್​ಗೆ ಸೆಡ್ಡು ಹೊಡೆದ ಟೆಲಿಗ್ರಾಂ: ಹೊಸ ಅಪ್ಡೇಟ್​ನಲ್ಲಿ ಸೂಪರ್ ಫೀಚರ್ಸ್

ಲೈವ್‌ ಸ್ಟ್ರೀಮ್‌ ಮತ್ತು ವಿಡಿಯೋ ಚಾಟ್‌ ರೇಕಾರ್ಡ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದಾಗಿ ಇನ್ಮುಂದೆ ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಲೈವ್‌ಸ್ಟ್ರೀಮ್‌ನಲ್ಲಿರುವಾಗ ವಿಡಿಯೋ ಚಾಟ್‌ ರೇಕಾರ್ಡ್‌ ಮಾಡಬಹುದು.

Telegram Update: ವಾಟ್ಸ್​ಆ್ಯಪ್​ಗೆ ಸೆಡ್ಡು ಹೊಡೆದ ಟೆಲಿಗ್ರಾಂ: ಹೊಸ ಅಪ್ಡೇಟ್​ನಲ್ಲಿ ಸೂಪರ್ ಫೀಚರ್ಸ್
Telegram
Follow us
TV9 Web
| Updated By: Vinay Bhat

Updated on: Sep 21, 2021 | 1:24 PM

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಟೆಲಿಗ್ರಾಂ ಆ್ಯಪ್ (Telegram App) ಕೂಡ ಒಂದು. ಅನೇಕರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ. ಸಂದೇಶ ರವಾನಿಸುದರಿಂದ ಹಿಡಿದು ವಿಡಿಯೋ ಕರೆ, ಧ್ವನಿ ಸಂದೇಶಕ್ಕೆ ಈ ಆ್ಯಪ್ ಹೆಚ್ಚು ಉಪಯೋಗವಾಗಿದೆ. ಅಷ್ಟೇ ಏಕೆ, ಸಿನಿಮಾಗಳನ್ನು ಕೂಡ ಡೌನ್​ಲೋಡ್ ಮಾಡುತ್ತಾರೆ. ಅಂದರೆ ಎಂಬಿ, ಜಿಬಿ ಗಾತ್ರದ ಫೈಲ್​ಗಳನ್ನು ಇದರ ಮೂಲಕ ಸುಲಭದಲ್ಲಿ ಕಳುಹಿಸಬಹುದು. ಈಗಾಗಲೇ ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ ಗಳನ್ನು ಪರಿಚಯಿಸಿರು ಟೆಲಿಗ್ರಾಂ ಇದೀಗ ಆಪ್ಲಿಕೇಶನ್‌ನಲ್ಲಿಯೇ ಲೈವ್ ಸ್ಟ್ರೀಮ್ (Live Stream) ಮತ್ತು ವಿಡಿಯೋ ಚಾಟ್ ಗಳನ್ನು ರೆಕಾರ್ಡ್ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದರ ಜೊತೆಗೆ ಎಂಟು ಹೊಸ ಚಾಟ್ ಥೀಮ್‌ಗಳನ್ನು ಸಹ ಸೇರಿಸಿದೆ. ಈ ಮೂಲಕ ವಾಟ್ಸ್​ಆ್ಯಪ್​ಗೆ (WhatsApp) ಕಠಿಣ ಪೈಪೋಟಿ ನಿಡುತ್ತಿದೆ.

ಈ ಚಾಟ್ ಥೀಮ್‌ಗಳನ್ನು ಹಗಲು ಮತ್ತು ರಾತ್ರಿ ಆವೃತ್ತಿಯಲ್ಲಿ ನೀಡಲಾಗುವುದು ಎಂದು ಹೇಳಿದೆ. ಇದರೊಂದಿಗೆ ಗ್ರೂಪ್‌ಗಳಲ್ಲಿ ಡಿಟೈಲ್ಡ್‌ ರೀಡಿಂಗ್‌ ರೆಸಿಪ್ಟ್‌ಗಳನ್ನು ಪರಿಚಯಿಸುತ್ತಿದೆ. ಈ ಹೊಸ ಅಪ್‌ಡೇಟ್‌ನ ಭಾಗವಾಗಿ ಬಳಕೆದಾರರು ಫುಲ್‌ ಸ್ಕ್ರೀನ್‌ ಎಫೆಕ್ಟ್‌ ನೀಡುವ ಹೊಸ ಸಂವಾದಾತ್ಮಕ ಎಮೋಜಿಗಳನ್ನು ಸಹ ಪಡೆಯಲಿದ್ದಾರೆ.

ಇನ್ನೂ ಲೈವ್‌ ಸ್ಟ್ರೀಮ್‌ ಮತ್ತು ವಿಡಿಯೋ ಚಾಟ್‌ ರೇಕಾರ್ಡ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದಾಗಿ ಇನ್ಮುಂದೆ ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಲೈವ್‌ಸ್ಟ್ರೀಮ್‌ನಲ್ಲಿರುವಾಗ ವಿಡಿಯೋ ಚಾಟ್‌ ರೇಕಾರ್ಡ್‌ ಮಾಡಬಹುದು. ಇದಲ್ಲದೆ ಬಳಕೆದಾರರು ನಿರ್ದಿಷ್ಟ ಖಾಸಗಿ ಚಾಟ್‌ಗಳಿಗೆ ಕಸ್ಟಮೈಸ್ ಮಾಡಲು ಟೆಲಿಗ್ರಾಂನ ಹೊಸ ಚಾಟ್ ಥೀಮ್‌ಗಳನ್ನು ಅನ್ವಯಿಸಲು ಸಾಧ್ಯವಾಗಲಿದೆ. ಪ್ರತಿಯೊಂದು ಹೊಸ ಥೀಮ್‌ಗಳು ಗ್ರೇಡಿಯಂಟ್ ಮೆಸೇಜ್‌ ಬಬಲ್ಸ್‌, ಅನಿಮೇಟೆಡ್ ಬ್ಯಾಕ್‌ಗ್ರೌಂಡ್ಸ್‌ ಮತ್ತು ಯೂನಿಕ್‌ ಬ್ಯಾಕ್‌ಗ್ರೌಂಡ್‌ ಪ್ಯಾಟನರ್ಸ್‌ ಅನ್ನು ಒಳಗೊಂಡಿರುತ್ತವೆ.

ನೀವು ನಿಮ್ಮ ಡಿವೈಸ್‌ನಲ್ಲಿ ಥೀಮ್‌ಗಳನ್ನು ಸಕ್ರಿಯಗೊಳಿಸಲು ಬಯಸಿದರೆ, ಟೆಲಿಗ್ರಾಂ ಅನ್ನು ಅಪ್ಡೇಟ್‌ ಮಾಡಬೇಕಾಗಿದೆ. ಇದಾದ ನಂತರ ನೀವು ಚಾಟ್ ವಿಂಡೋದಲ್ಲಿ ಚಾಟ್ ಹೆಡರ್ ಬಾಕ್ಸ್ ಮೇಲೆ ಟ್ಯಾಪ್ ಮಾಡಬಹುದು. ಆದಾದ ಮೇಲೆ ಮೂರು-ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಥೀಮ್ ಗಳನ್ನು ಎನೇಬಲ್ ಮಾಡಲು ಬಣ್ಣಗಳನ್ನು ಬದಲಾಯಿಸಿ ಆಯ್ಕೆ ಮಾಡಿ. ಇದಲ್ಲದೆ ಟೆಲಿಗ್ರಾಮ್‌ ಅಪ್ಲಿಕೇಶನ್ ಫುಲ್‌ ಸ್ಕ್ರೀನ್ ಎಫೆಕ್ಟ್‌ ನೀಡುವ ಹೊಸ ಅನಿಮೇಟೆಡ್ ಎಮೋಜಿಗಳನ್ನು ಸಹ ಸೇರಿಸಿದೆ.

iOS 15: ಐಫೋನ್​ ಬಳಕೆದಾರರ ಗಮನಕ್ಕೆ; ನಿಮ್ಮ ಮೊಬೈಲ್​ಗೆ ಇಂದು ಹೊಸ ಅಪ್​ಡೇಟ್ ಸಿಗಲಿದೆ

Realme C25Y: 50MP ಕ್ಯಾಮೆರಾ, 5000mAh ಬ್ಯಾಟರಿ, 10,999 ರೂ.: ಈ ಸ್ಮಾರ್ಟ್​ಫೋನ್ ಬೇಕಿದ್ದರೆ ಇಂದೇ ಬುಕ್ ಮಾಡಿ

(Telegram New features Live stream recording read receipts in groups and other features coming to Telegram)