iOS 15: ಐಫೋನ್​ ಬಳಕೆದಾರರ ಗಮನಕ್ಕೆ; ನಿಮ್ಮ ಮೊಬೈಲ್​ಗೆ ಇಂದು ಹೊಸ ಅಪ್​ಡೇಟ್ ಸಿಗಲಿದೆ

Apple iOS 15: ಐಫೋನ್ ಎಸ್ಇ (ಫಸ್ಟ್ ಜನರೇಷನ್), ಐಫೋನ್ ಎಸ್ಇ (ಸೆಕೆಂಡ್ ಜನರೇಷನ್), ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 8, ಐಫೋನ್ 8 ಪ್ಲಸ್.

iOS 15: ಐಫೋನ್​ ಬಳಕೆದಾರರ ಗಮನಕ್ಕೆ; ನಿಮ್ಮ ಮೊಬೈಲ್​ಗೆ ಇಂದು ಹೊಸ ಅಪ್​ಡೇಟ್ ಸಿಗಲಿದೆ
iOS 15
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 20, 2021 | 6:33 PM

ಜನಪ್ರಿಯ ಟೆಕ್ ಕಂಪೆನಿ ಆ್ಯಪಲ್ ತನ್ನ ಹೊಸ​ ಆಪರೇಟಿಂಗ್ ಸಿಸ್ಟಂ 15 (iOS 15) ಅನ್ನು ಇಂದು ಬಿಡುಗಡೆಯಾಗಲಿದೆ. ರಾತ್ರಿ 10.30ರ ಬಳಿಕ ಆ್ಯಪಲ್ ಐ-ಸಿರೀಸ್ ಬಳಕೆದಾರರು iOS-15 ಅನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು. ಅದರಂತೆ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಹೊಸ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಅನ್ನು ಇನ್​ಸ್ಟಾಲ್ ಮಾಡಬಹುದಾಗಿದೆ. ಕಂಪನಿಯು ಆ್ಯಪಲ್ ಐಫೋನ್ 13 ಸಿರೀಸ್ ಮತ್ತು ಆ್ಯಪಲ್​ ವಾಚ್​ ಸಿರೀಸ್​-7 ಮತ್ತು ಹೊಸ ಐಪ್ಯಾಡ್ ಅನ್ನು ಸೆಪ್ಟೆಂಬರ್ 14 ರಂದು ಬಿಡುಗಡೆ ಮಾಡಿತ್ತು. ಇದೀಗ ಹೊಸ ಅಪ್​ಡೇಟ್ ನೀಡುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಆಯ್ಕೆ ನೀಡಲು ಮುಂದಾಗಿದೆ.

iOS 15 ವೈಶಿಷ್ಟ್ಯಗಳು: ಹೊಸ ಆಪರೇಟಿಂಗ್ ಸಿಸ್ಟಂ ಮೂಲಕ ಆ್ಯಪಲ್ ಬಳಕೆದಾರರು ಇನ್ಮುಂದೆ ಸಫಾರಿ ಬ್ರೌಸರ್​ನಲ್ಲಿ ಅಗತ್ಯವಾದ ರಿಫ್ರೆಶ್‌ ಆಯ್ಕೆಗಳನ್ನು ಪಡೆಯಲಿದ್ದಾರೆ. ಹಾಗೆಯೇ ಸಫಾರಿಯಲ್ಲಿ ಬಾಟಮ್ ಟ್ಯಾಬ್ ಬಾರ್, ಟ್ಯಾಬ್ ಗ್ರೂಪ್ ಸಿಂಕ್, ಕಸ್ಟಮೈಸ್ ಮಾಡಬಹುದಾದ ಸ್ಟಾರ್ಟ್ ಪೇಜ್, ಹೊಸ ಪ್ರೈವೆಸಿ ಪ್ರೊಟೆಕ್ಷನ್, HTTPS ಅಪ್‌ಗ್ರೇಡ್ ಮತ್ತು ಐಒಎಸ್‌ನಲ್ಲಿ ವೆಬ್ ಎಕ್ಸ್‌ಟೆನ್ಶನ್ ಇರಲಿದೆ.

ಹಾಗೆಯೇ ಫೋಟೋಗಳಲ್ಲಿ ಲೈವ್ ಟೆಕ್ಸ್ಟ್​ ಆಯ್ಕೆಗಳು ಸಿಗಲಿದೆ. ಲೈವ್ ಟೆಕ್ಸ್ಟ್​ಗಳು ಫೋಟೋಗಳು, ಸ್ಕ್ರೀನ್‌ಶಾಟ್‌ಗಳು, ಸಫಾರಿ ಮತ್ತು ಕ್ಯಾಮೆರಾ ಆ್ಯಪ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಫೋಟೋಗಳ ಅಪ್ಲಿಕೇಶನ್​ನಲ್ಲೂ ರಿಫ್ರೆಶ್‌ಗಳ ಆಯ್ಕೆ ಇರಲಿದೆ. ಇದರೊಂದಿಗೆ ಆ್ಯಪಲ್ ಮ್ಯೂಸಿಕ್​ ಮೂಲಕ ಫೋಟೊ ಮೆಮೊರಿಗಳನ್ನು ಕ್ರಿಯೇಟ್ ಮಾಡಬಹುದು. ಈ ಅಪ್​ಡೇಟ್​ನಲ್ಲಿ ನೀಡಲಾಗಿರುವ ಮೆಮೊರಿಯಲ್ಲಿ ಶೀರ್ಷಿಕೆಗಳೊಂದಿಗೆ ಅನಿಮೇಟೆಡ್ ಕಾರ್ಡ್‌ಗಳು, ಹೊಸ ಅನಿಮೇಷನ್ ಸೇರಿದಂತೆ ಹಲವು ಆಯ್ಕೆಗಳನ್ನು ನೀಡಲಾಗಿದೆ.

ಐಒಎಸ್ 15 ರ ಪ್ರಮುಖ ವೈಶಿಷ್ಟ್ಯಗಳಲ್ಲಿ ಫೇಸ್‌ಟೈಮ್‌ನಲ್ಲಿ ಹೊಸ ಶೇರ್‌ಪ್ಲೇ ಫೀಚರ್​ ಇರಲಿದೆ. ಬಳಕೆದಾರರು ನೈಜ ಸಮಯದಲ್ಲಿ ಒಟ್ಟಿಗೆ ಕೇಳಲು ಅಥವಾ ವೀಕ್ಷಿಸಲು ಫೇಸ್‌ಟೈಮ್‌ನಲ್ಲಿ ಶೇರ್‌ಪ್ಲೇ ಆನ್ ಮಾಡಬಹುದು. ಶೇರ್‌ಪ್ಲೇ ಆಕ್ಟೀವ್ ಆದ ಬಳಿಕ ಬಳಕೆದಾರರು ತಮ್ಮ ಸ್ಕ್ರೀನ್​ ಅನ್ನು ಸಹ ಹಂಚಿಕೊಳ್ಳಬಹುದು.

iOS 15 ಸಪೋರ್ಟ್ ಮಾಡುವ ಐಫೋನ್​ಗಳು? ಐಫೋನ್ ಎಸ್ಇ (ಫಸ್ಟ್ ಜನರೇಷನ್), ಐಫೋನ್ ಎಸ್ಇ (ಸೆಕೆಂಡ್ ಜನರೇಷನ್), ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್ ಆರ್, ಐಫೋನ್ ಎಕ್ಸ್, ಐಫೋನ್ ಎಕ್ಸ್ ಎಸ್​ , ಐಫೋನ್ ಎಕ್ಸ್ ಎಸ್​ ಮ್ಯಾಕ್ಸ್​, ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್​, ಐಫೋನ್ 11, ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ, ಐಫೋನ್ 12 ಮ್ಯಾಕ್ಸ್​, ಹೊಸ ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್​.

ಡೌನ್​ಲೋಡ್​ ಮಾಡೋದು ಹೇಗೆ? ನಿಮ್ಮ ಐಫೋನ್ ಅಥವಾ ಐಪ್ಯಾಡ್​ನ Settings ಹೋಗಿ> ಬಳಿಕ General ಆಯ್ಕೆ ಮಾಡಿ> ನಂತರ Software update ಅಪ್​ಡೇಟ್ ನೀಡಿದರೆ iOS 15 ಡೌನ್​ಲೋಡ್ ಆಗಲಿದೆ. ಆ ಬಳಿಕ ಅದನ್ನು ಇನ್​ಸ್ಟಾಲ್ ಮಾಡಬೇಕು.

ಇದನ್ನೂ ಓದಿ: Taliban bans IPL 2021: ಐಪಿಎಲ್ ಬ್ಯಾನ್ ಮಾಡಿದ ತಾಲಿಬಾನಿಗಳು: ಕಾರಣ ಕೇಳಿದ್ರೆ ದಂಗಾಗ್ತೀರಾ..!

ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು

ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್

ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್​ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್​ ಸ್ಪೀಕರ್

(iOS 15 to release today at 10:30 pm IST)