Oppo F19: ಭಾರತದಲ್ಲಿ ಭರ್ಜರಿ ಮಾರಾಟ: ಒಪ್ಪೋ ಕಂಪೆನಿಯ ಎರಡು ಸ್ಮಾರ್ಟ್​ಫೋನ್ ಬೆಲೆಯಲ್ಲಿ ಏರಿಕೆ

ಒಪ್ಪೋ ಎ54 ಮತ್ತು ಒಪ್ಪೋ ಎಫ್19 (Oppo A54 and Oppo F19) ಸ್ಮಾರ್ಟ್‌ಫೋನ್​ಗಳ ಬೆಲೆಯಲ್ಲಿ 1,000ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ.

Oppo F19: ಭಾರತದಲ್ಲಿ ಭರ್ಜರಿ ಮಾರಾಟ: ಒಪ್ಪೋ ಕಂಪೆನಿಯ ಎರಡು ಸ್ಮಾರ್ಟ್​ಫೋನ್ ಬೆಲೆಯಲ್ಲಿ ಏರಿಕೆ
Oppo Smartphones
Follow us
TV9 Web
| Updated By: Vinay Bhat

Updated on: Sep 21, 2021 | 2:31 PM

ಭಾರತದಲ್ಲಿ ಜನಪ್ರಿಯ ಸ್ಮಾರ್ಟ್​ಫೋನ್​ಗಳ ಬೆಲೆ ಹೆಚ್ಚಳ ಕಾರ್ಯ ಮುಂದುವರೆದಿದೆ. ಶವೋಮಿ (Xiaomi), ಸ್ಯಾಮ್​ಸಂಗ್ (Samsung) ಬಳಿಕ ಇದೀಗ ಒಪ್ಪೋ ಕಂಪೆನಿ ತನ್ನ ಎರಡು ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಆಕರ್ಷಕ ಫೀಚರ್​ಗಳಿಂದ ಕೂಡಿರುವ ಒಪ್ಪೋ ಎ54 ಮತ್ತು ಒಪ್ಪೋ ಎಫ್19 (Oppo A54 and Oppo F19) ಸ್ಮಾರ್ಟ್‌ಫೋನ್​ಗಳ ಬೆಲೆಯಲ್ಲಿ 1,000ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಒಪ್ಪೋ A54 ಸ್ಮಾರ್ಟ್​ಫೋನ್ ಇದೀಗ 14,990 ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಇದರ 4GB + 128GB ಸ್ಟೋರೇಜ್‌ ಬೆಲೆ ಕೂಡ 14,490 ರೂ. ಆಗಿದೆ. ಇನ್ನು ಒಪ್ಪೋ F19 ಸ್ಮಾರ್ಟ್‌ಫೋನ್‌ 18,990 ರೂ. ನಿಂದ 19,990 ರೂ. ಗೆ ಏರಿಕೆ ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ (Flipkart), ಅಮೆಜಾನ್‌ (Amazon) ಪ್ಲಾಟ್‌ಫಾರ್ಮ್‌ ಸೈಟ್‌ಗಳಲ್ಲಿ ಮಾರಾಟದಲ್ಲಿವೆ.

ಒಪ್ಪೋ A54 ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ P35 (MT6765V) SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10. ಆಧಾರಿತ ಕಲರ್‌ ಒಎಸ್‌ 7.2 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ಚಾರ್ಜಿಂಗ್ ಬೆಂಬಲಿಸಲಿದೆ.

ಒಪ್ಪೋ F19 ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರಿನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಲರ್ಓಎಸ್ 11.1 ಮೇಲೆ ರನ್ ಆಗಲಿದೆ. ಇನ್ನು ಈ ಫೋನ್ ಟ್ರಿಪಲ್‌ ಕ್ಯಾಮೆರಾ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ. ಇದಲ್ಲದೆ 5,000mAh ಬ್ಯಾಟರಿಯನ್ನು 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

Telegram Update: ವಾಟ್ಸ್​ಆ್ಯಪ್​ಗೆ ಸೆಡ್ಡು ಹೊಡೆದ ಟೆಲಿಗ್ರಾಂ: ಹೊಸ ಅಪ್ಡೇಟ್​ನಲ್ಲಿ ಸೂಪರ್ ಫೀಚರ್ಸ್

iOS 15: ಐಫೋನ್​ ಬಳಕೆದಾರರ ಗಮನಕ್ಕೆ; ನಿಮ್ಮ ಮೊಬೈಲ್​ಗೆ ಇಂದು ಹೊಸ ಅಪ್​ಡೇಟ್ ಸಿಗಲಿದೆ

(Oppo A54 and Oppo F19 Oppo has increased the prices of some of its popular smartphones in India)