iPhone 13: ಐಫೋನ್ 13 ಖರೀದಿಸುವ ಪ್ಲಾನ್​ನಲ್ಲಿದ್ದರೆ ವೊಡಾಫೋನ್-ಐಡಿಯಾದ ಈ ಆಫರ್ ಗಮನಿಸಿ

Vodafone Idea: ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 13 ಮಿನಿಯ ಪ್ರಿ-ಆರ್ಡರ್‌ ಆರಂಭವಾಗಿದೆ. ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಆಫರ್‌ ನೀಡುವುದಾಗಿ ಹೇಳಿದೆ.

iPhone 13: ಐಫೋನ್ 13 ಖರೀದಿಸುವ ಪ್ಲಾನ್​ನಲ್ಲಿದ್ದರೆ ವೊಡಾಫೋನ್-ಐಡಿಯಾದ ಈ ಆಫರ್ ಗಮನಿಸಿ
Vi iPhone 13
Follow us
TV9 Web
| Updated By: Vinay Bhat

Updated on: Sep 20, 2021 | 2:36 PM

ವೋಡಾಫೋನ್- ಐಡಿಯಾ (Vodafone Idea) ಟೆಲಿಕಾಂ ಸಂಸ್ಥೆ ಜಂಟಿಯಾದ ಬಳಿಕ ಜಿಯೋ (Jio), ಏರ್‌ಟೆಲ್‌ (Airtel) ಮತ್ತು ಬಿಎಸ್​ಎನ್​ಎಲ್ (BSNL) ಸಂಸ್ಥೆಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು (Prepaid Plan) ಪರಿಚಯಿಸುತ್ತಾ ಬಂದಿರುವ ವಿ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಇದೀಗ ಬಂಪರ್ ಆಫರ್‌ ನೀಡಿದೆ. ಇತ್ತೀಚೆಗಷ್ಟೆ ಲಾಂಚ್ ಆದ ಬಹುನಿರೀಕ್ಷಿತ ಐಫೋನ್ 13 (iPhone 13) ಖರೀದಿ ಮಾಡುವ ತನ್ನ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಆಫರ್‌ ನೀಡುವುದಾಗಿ ಹೇಳಿದೆ. ಜೊತೆಗೆ ವಿ ಟೆಲಿಕಾಂ ಕೆಲವು ಪ್ರಿ-ಆರ್ಡರ್ ಆಫರ್‌ಗಳನ್ನು ಅನಾವರಣಗೊಳಿಸಿದೆ. ವಿ (Vi) ಟೆಲಿಕಾಂನ ಪೋಸ್ಟ್‌ಪೇಯ್ಡ್ ಯೋಜನೆಗಳಾದ 1099ರೂ,ಗಳ Redx ಪ್ಯಾಕ್, 1,699ರೂ,ಗಳ Redx ಫ್ಯಾಮಿಲಿ ಪ್ಯಾಕ್, ಮತ್ತು 2,299ರೂ,ಗಳ Redx ಫ್ಯಾಮಿಲಿ ಪ್ಲಾನ್ ಗಳೊಂದಿಗೆ ಕೆಲವು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 13 ಮಿನಿ ಈಗಾಗಲೇ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿವೆ. ಭಾರತದಲ್ಲಿ ಈಗಾಗಲೇ ಈ ಫೋನಿನ ಪ್ರಿ-ಆರ್ಡರ್‌ ಆರಂಭವಾಗಿದೆ. ಆ್ಯಪಲ್ ಆನ್​ಲೈನ್ ಸ್ಟೋರ್, ಜನಪ್ರಿಯ ಇ-ಕಾಮರ್ಸ್ ಸೈಟ್‌ಗಳು ಹಾಗೂ ಪ್ರಮುಖ ರಿಟೇಲ್ ಸ್ಟೋರ್‌ಗಳ ಮೂಲಕ ಮುಂಗಡ ಆರ್ಡರ್ ಮಾಡಬಹುದು. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಹ ತಮ್ಮ ತಾಣಗಳಿಂದ ಪ್ರಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ಈ ಐಫೋನ್ ಮಾಡೆಲ್‌ಗಳು ಇದೇ ಸೆಪ್ಟೆಂಬರ್ 25 ರಿಂದ ದೊರೆಯಲಿವೆ.

ಹೀಗಿರುವಾಗ ವಿ ಟೆಲಿಕಾಂ ಬಳಸುವ ಪೋಸ್ಟ್‌ಪೇಯ್ಡ್ ಗ್ರಾಹಕರು ಐಫೋನ್ ಅನ್ನು ಫ್ರೀ ಆರ್ಡರ್ ಮಾಡಿದರೆ, ಭಾರತದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡದ ದಿನವೇ ಐಫೋನ್‌ ನಿಮ್ಮ ಕೈ ಸೇರಲಿದೆ ಎಂದು ಹೇಳಿದೆ. ಇದಲ್ಲದೆ ವೋಡಾಫೋನ್‌ ಐಡಿಯಾದ ರೆಡ್ಎಕ್ಸ್ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಂಡರೆ ಐಫೋನ್‌ ಖರೀದಿಸಿದ ನಂತರ ಮೊದಲ ತಿಂಗಳ ಬಾಡಿಗೆ ಮೊತ್ತದ ಮೇಲೆ “100% ಕ್ಯಾಶ್‌ಬ್ಯಾಕ್” ಸಿಗಲಿದೆ. ವಿ ಟೆಲಿಕಾಂ ಈ ಕ್ಯಾಶ್‌ಬ್ಯಾಕ್ ಅನ್ನು ಬಿಲ್‌ ರೂಪದಲ್ಲಿ ರಿಯಾಯಿತಿಯಾಗಿ ಆರು ತಿಂಗಳಲ್ಲಿ ನೀಡಲಾಗುವುದು ಎಂದು ಉಲ್ಲೇಖಿಸಿದೆ.

ಇದಲ್ಲದೆ ವಿ ಟೆಲಿಕಾಂ ಗ್ರಾಹಕರು ಹೆಚ್ಚುವರಿಯಾಗಿ REDX ಪ್ಲಾನ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್, ಇಂಟರ್‌ನ್ಯಾಷನಲ್ ರೋಮಿಂಗ್ ಮತ್ತು ಏರ್‌ಪೋರ್ಟ್ ಲೌಂಜ್ ಆಕ್ಸೆಸ್, ಪ್ರೀಮಿಯಂ ಗ್ರಾಹಕ ಸೇವೆ ಮತ್ತು ಹೆಚ್ಚಿನ ರೀತಿಯ ಪ್ರಯಾಣದ ಸಂದರ್ಭಗಳಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಷ್ಟೇ ಅಲ್ಲದೆ ಐಫೋನ್ 13 ಅನ್ನು ಖರೀದಿಸಲು ಬಯಸುವ ಪ್ರಿಪೇಯ್ಡ್ ವಿ ಟೆಲಿಕಾಂ ಬಳಕೆದಾರರು 299 ರೂ. ಪ್ರಿಪೇಯ್ಡ್ ಪ್ಲಾನ್ ರೀಚಾರ್ಜ್ ಮೇಲೆ ಡಬಲ್ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಈ ಆಫರ್‌ನೊಂದಿಗೆ ವಿಕೆಂಡ್‌ ರೋಲ್‌ಓವರ್‌ ಪ್ರಯೋಜನವನ್ನು ಸಹ ಪಡೆಯಬಹುದು.

Genesis GV60: ಸದ್ಯದಲ್ಲೇ ಸ್ಮಾರ್ಟ್​ಫೋನ್​ನಂತೆ ಕಾರಿಗೂ ಬರುತ್ತಿದೆ ಫಿಂಗರ್ ಪ್ರಿಂಟ್, ಫೇಸ್ ಐಡಿ

Oppo A16: 5000mAh ಬ್ಯಾಟರಿ, ಕೇವಲ 13,990 ರೂ.: ಭಾರತದಲ್ಲಿ ಹೊಸ ಒಪ್ಪೋ A16 ಸ್ಮಾರ್ಟ್​ಫೋನ್ ಬಿಡುಗಡೆ

(iPhone 13 Vodafone Idea cash back offer for postpaid customers for iPhone 13)

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು