ಫಿಫಾ ವಿಶ್ವಕಪ್ 2022 (FIFA World Cup 2022) ಪಂದ್ಯಾವಳಿ ಆರಂಭವಾಗಿದ್ದು ರೋಚಕತೆ ಪಡೆಯುತ್ತಿದೆ. ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ ವಿಶ್ವಕಪ್ ಅನ್ನು ಆಯೋಜಿಸಿದ್ದು ಪ್ರತಿಯೊಂದು ಪಂದ್ಯ ಕೂಡ ಕುತೂಹಲ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ (Reliance JIO) ಫುಟ್ಬಾಲ್ ನೋಡುವವರಿಗಾಗಿ ಐದು ಹೊಸ ಇಂಟರ್ ನ್ಯಾಷನಲ್ ರೋಮಿಂಗ್ ಪ್ಲಾನ್‌ಗಳನ್ನು ಪರಿಚಯಿಸಿತ್ತು. ಈ ಯೋಜನೆಗಳು ಬಳಕೆದಾರರಿಗೆ ಕತಾರ್, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಬಲವಾದ ಸಂಪರ್ಕವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಇದೀಗ ವೊಡಾಫೋನ್ ಐಡಿಯಾ (Vi) ಕೂಡ ಹೊಸ ಇಂಟರ್ ನ್ಯಾಷನಲ್ ರೋಮಿಂಗ್ ಪ್ಲಾನ್‌ಗಳನ್ನು ಪರಿಚಯಿಸಿದೆ.
ವೊಡಾಫೋನ್ ಐಡಿಯಾದ ಹೊಸ 2,999ರೂ. ರೋಮಿಂಗ್ ಪ್ಲಾನ್ ಏಳು ದಿನಗಳ ಮಾನ್ಯತೆಯನ್ನು ಪಡೆದಿದ್ದು, 2GB ಡೇಟಾವನ್ನು ನೀಡುತ್ತದೆ. ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 200 ನಿಮಿಷಗಳ ವಾಯ್ಸ್ ಕಾಲ್‌ಗಳನ್ನು ನೀಡುತ್ತದೆ. 25 ಎಸ್ಎಮ್ಎಸ್ ಕೂಡ ಉಚಿತವಿದೆ.
ವೊಡಾಫೋನ್ ಐಡಿಯಾದ ಹೊಸ 3,999ರೂ. ರೋಮಿಂಗ್ ಪ್ಲಾನ್ ಹತ್ತು ದಿನಗಳ ಮಾನ್ಯತೆಯನ್ನು ಪಡೆದಿದ್ದು, 3GB ಡೇಟಾವನ್ನು ನೀಡುತ್ತದೆ. ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 300 ನಿಮಿಷಗಳ ವಾಯ್ಸ್ ಕಾಲ್‌ಗಳನ್ನು ನೀಡುತ್ತದೆ. 50 ಎಸ್ಎಮ್ಎಸ್ ಕೂಡ ಉಚಿತವಿದೆ.
ವೊಡಾಫೋನ್ ಐಡಿಯಾದ ಹೊಸ 2,999ರೂ. ರೋಮಿಂಗ್ ಪ್ಲಾನ್ ಏಳು ದಿನಗಳ ಮಾನ್ಯತೆಯನ್ನು ಪಡೆದಿದ್ದು, 2GB ಡೇಟಾವನ್ನು ನೀಡುತ್ತದೆ. ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 200 ನಿಮಿಷಗಳ ವಾಯ್ಸ್ ಕಾಲ್‌ಗಳನ್ನು ನೀಡುತ್ತದೆ. 25 ಎಸ್ಎಮ್ಎಸ್ ಕೂಡ ಉಚಿತವಿದೆ.
ವೊಡಾಫೋನ್ ಐಡಿಯಾದ 4,499ರೂ. ರೋಮಿಂಗ್ ಪ್ಲಾನ್ 14 ದಿನಗಳ ಮಾನ್ಯತೆಯನ್ನು ಪಡೆದಿದ್ದು, 5GB ಡೇಟಾವನ್ನು ನೀಡುತ್ತದೆ. ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 500 ನಿಮಿಷಗಳ ವಾಯ್ಸ್ ಕಾಲ್‌ಗಳನ್ನು ನೀಡುತ್ತದೆ. 100 ಎಸ್ಎಮ್ಎಸ್ ಕೂಡ ಉಚಿತವಿದೆ.
ವೊಡಾಫೋನ್ ಐಡಿಯಾದ 5,999ರೂ. ರೋಮಿಂಗ್ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಪಡೆದಿದ್ದು, 5GB ಡೇಟಾವನ್ನು ನೀಡುತ್ತದೆ. ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 500 ನಿಮಿಷಗಳ ವಾಯ್ಸ್ ಕಾಲ್‌ಗಳನ್ನು ನೀಡುತ್ತದೆ. 100 ಎಸ್ಎಮ್ಎಸ್ ಕೂಡ ಉಚಿತವಿದೆ.
ಜಿಯೋ ಪ್ಲಾನ್ ಹೇಗಿದೆ?:
ಜಿಯೋ ಟೆಲಿಕಾಂನ ಹೊಸ 1,122ರೂ. IR ರೋಮಿಂಗ್ ಪ್ಲಾನ್ ಐದು ದಿನಗಳ ಮಾನ್ಯತೆಯನ್ನು ಪಡೆದಿದ್ದು, 1GB ಡೇಟಾವನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ನೀವು ಒಮ್ಮೆ ಎಲ್ಲಾ ಡೇಟಾವನ್ನು ಬಳಸಿದ ನಂತರ PayGo ದರಗಳು ಅನ್ವಯವಾಗಲಿವೆ. ಅಂತೆಯೆ 1,599ರೂ. IR ರೋಮಿಂಗ್ ಪ್ಲಾನ್ 15 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 150 ನಿಮಿಷಗಳ ವಾಯ್ಸ್ ಕಾಲ್‌ಗಳನ್ನು ನೀಡುತ್ತದೆ. ಇದುಕೂಡ 1GB ಡೇಟಾ ಮತ್ತು 100 SMS ಗಳನ್ನು ಸಹ ನೀಡುತ್ತದೆ. ಇದರಲ್ಲಿ ವೈಫೈ ಕರೆಗಳ ಮೂಲಕ ಒಳಬರುವ ಕರೆಗಳಿಗೆ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಜಿಯೋದ 3,999ರೂ. IR ರೋಮಿಂಗ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ಇದು 250 ನಿಮಿಷಗಳ ಲೋಕಲ್ ವಾಯ್ಸ್ ಕಾಲ್ ಮತ್ತು ಹೆಚ್ಚುವರಿ 250 ನಿಮಿಷಗಳ ಇನ್‌ಕಮಿಂಗ್ ಕಾಲ್‌ಗಳು, ಭಾರತಕ್ಕೆ ರಿಟರ್ನ್ ಕಾಲ್‌ಗಳನ್ನು ನೀಡಲಿದೆ. ಇದು 3GB ಡೇಟಾ ಮತ್ತು 100 SMS ಗಳನ್ನು ಸಹ ನೀಡುತ್ತದೆ. ಇದರಲ್ಲಿ ವೈಫೈ ಕಾಲ್‌ಗಳ ಮೂಲಕ ಇನ್‌ಕಮಿಂಗ್ ಕಾಲ್‌ಗಳ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
Published On - 11:37 am, Fri, 25 November 22