AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart: ಕುತೂಹಲ ಸೃಷ್ಟಿಸಿದ ಫ್ಲಿಪ್‌ಕಾರ್ಟ್​ನ ಬಿಗ್ ಬಿಲಿಯನ್ ಡೇಸ್: ಈ ಬಾರಿ ಬಂಪರ್ ಡಿಸ್ಕೌಂಟ್ ಗ್ಯಾರಂಟಿ

Flipkart Big Billion Days Sale 2021: ಪ್ರಮುಖವಾಗಿ ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್‌ ಟೈಂನಲ್ಲಿ ಸೌಂಡ್‌ಬಾರ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಹೆಚ್ಚಿನವುಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು.

Flipkart: ಕುತೂಹಲ ಸೃಷ್ಟಿಸಿದ ಫ್ಲಿಪ್‌ಕಾರ್ಟ್​ನ ಬಿಗ್ ಬಿಲಿಯನ್ ಡೇಸ್: ಈ ಬಾರಿ ಬಂಪರ್ ಡಿಸ್ಕೌಂಟ್ ಗ್ಯಾರಂಟಿ
Flipkart Big Billion Days Sale 2021
TV9 Web
| Updated By: Vinay Bhat|

Updated on: Sep 18, 2021 | 2:22 PM

Share

ಆನ್‌ಲೈನ್ ಖರೀದಿದಾರರು ನಿರೀಕ್ಷೆಯಿಂದ ಕಾದುಕುಳಿತಿರುವ ಫ್ಲಿಪ್‌ಕಾರ್ಟ್ (Flipkart) ‘ಬಿಗ್ ಬಿಲಿಯನ್ ಡೇಸ್ ಸೇಲ್’ (Flipkart Big Billion Days Sale 2021) ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಾರಿಯ ಈ ಮೇಳ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ ಎಂದು ಹೇಳಲಾಗಿದೆ. ಈಗಾಗಲೇ ಕಿಚ್ಚ ಸುದೀಪ್ (Kiccha Sudeep), ವಿರಾಟ್ ಕೊಹ್ಲಿ (Virat Kohli), ಅಲಿಯಾ ಭಟ್ (Alia Bhatt) ಸೇರಿದಂತೆ ಖ್ಯಾತ ದಿಗ್ಗಜರ ಬಿಗ್ ಬಿಲಿಯನ್ ಡೇಸ್ ಸೇಲ್​ನ ಪ್ರಮೋಷನ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ನೀವು ಯಾವುದೇ ಹೊಸ ಗ್ಯಾಜೆಟ್ ಪಡೆಯಲು ಬಯಸಿದರೆ, ಮುಂಬರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಶಾಪಿಂಗ್ ಮಾಡಲು ಉತ್ತಮ ಸ್ಥಳವಾಗಿದೆ. ಸೌಂಡ್‌ಬಾರ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು (Smartphone), ಸ್ಮಾರ್ಟ್‌ವಾಚ್‌ಗಳು (Smart Watch), ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನವುಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು.

ಪ್ರಮುಖವಾಗಿ ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್‌ ಟೈಂನಲ್ಲಿ ಫ್ಲಿಪ್‌ಕಾರ್ಟ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು, ಒಪ್ಪೋ ಸ್ಮಾರ್ಟ್‌ಫೋನ್‌ಗಳು, ವಿವೋ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್ 12 ಸರಣಿ, ಐಫೋನ್ ಎಕ್ಸ್‌ಆರ್, ಕೈಗೆಟುಕುವ ಐಫೋನ್ ಎಸ್‌ಇ 2020 ಸೇರಿದಂತೆ ಹಲವಾರು ಡಿವೈಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುವ ನಿರೀಕ್ಷೆಯಿದೆ.

ಫ್ಲಿಪ್‌ಕಾರ್ಟ್ ಜೊತೆ ಬಹುತೇಕ ಎಲ್ಲಾ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿದ್ದು, ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳ ಜೊತೆಯಲ್ಲಿ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 10 ಪರ್ಸೆಂಟ್​ಗಿಂತ ಹೆಚ್ಚು ಡಿಸ್ಕೌಂಟ್ಸ್ ಸಿಗಲಿದೆ ಎಂದು ಹೇಳಲಾಗಿದೆ. ಬೋಟ್ ಸೌಂಡ್‌ಬಾರ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೆ 80% ರಿಯಾಯಿತಿ ನೀಡುತ್ತದೆ. ಬೊಟ್ ನಿಂದ ಹೊಸ ಹೆಡ್‌ಫೋನ್ ಅಥವಾ ಆಡಿಯೋ ಆಕ್ಸಸರಿಸಗಳನ್ನ ಪಡೆಯಲು ಇದು ಅತ್ಯುತ್ತಮ ಸಮಯವಾಗಿದೆ.

ಇನ್ನೂ ಇಂಟೆಲ್-ಚಾಲಿತ ಲ್ಯಾಪ್‌ಟಾಪ್‌ಗಳು ಶೇಕಡಾ 40 ರಷ್ಟು ರಿಯಾಯಿತಿ, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ವೇರಬಲ್ ಮತ್ತು ಹೆಚ್ಚಿನವುಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡಬಹುದು. ಡಿಜೊ ಭಾರತದಲ್ಲಿ ಹೊಸ ಬ್ರಾಂಡ್ ಆಗಿದ್ದು ಅದು ಆಕ್ಸಸರಿಸ್ ಮಾರ್ಕೆಟನಲ್ಲಿ ಮುನ್ನಡೆಯುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಡಿಜೊ ಹೆಡ್‌ಸೆಟ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿ ನೀಡುತ್ತದೆ.

ಇದರ ಜೊತೆಗೆ ಹಲವು ಬ್ರಾಂಡ್‌ಗಳು, ಕಿಚನ್‌ ಪ್ರಾಡಕ್ಟ್‌ಗಳು, ಗೃಹೋಪಯೋಗಿ ವಸ್ತುಗಳು, ರೆಫ್ರಿಜರೇಟರ್‌ಗಳು ಮತ್ತು ಹೆಚ್ಚಿನವುಗಳಿಂದ ಸ್ಮಾರ್ಟ್ ಟಿವಿಗಳ ಮೇಲೆ 80% ರಿಯಾಯಿತಿಯನ್ನು ನೀಡೋದು ಕನ್ಫರ್ಮ್‌ ಆಗಿದೆ. ಇನ್ನು ಫ್ಲಿಪ್‌ಕಾರ್ಟ್ ಪಲ್ಸ್ ಆಕ್ಸಿಮೀಟರ್, ಬಿಪಿ ಯಂತ್ರಗಳು ಮತ್ತು ಹೆಚ್ಚಿನವುಗಳಂತಹ ಆರೋಗ್ಯ ರಕ್ಷಣಾ ಸಾಧನಗಳ ಮೇಲೆ 80% ರಿಯಾಯಿತಿ ನೀಡಲಿದೆ.

WhatsApp: ಐಒಎಸ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ವಾಟ್ಸ್​ಆ್ಯಪ್ ಪರಿಚಯಿಸಿದೆ ಹೊಸ ಫೀಚರ್

Vivo X70 series: ವಿದೇಶದಲ್ಲಿ ಸಂಚಲನ ಸೃಷ್ಟಿಸಿದ ವಿವೋ X70 ಸರಣಿ ಸೆ. 30ಕ್ಕೆ ಭಾರತದಲ್ಲಿ ಬಿಡುಗಡೆ

(Flipkart Big Billion Days Sale 2021 Starting Soon Know the unbelievable offers the company provides)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ