Flipkart: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್: 108MP ಕ್ಯಾಮೆರಾದ ಈ ಫೋನ್​ಗೆ ಬಂಪರ್ ಡಿಸ್ಕೌಂಟ್

Flipkart Big Saving Days sale: ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​​ಕಾರ್ಟ್​ ಬಿಗ್ ಸೇವಿಂಗ್ ಡೇಸ್ ಸೇಲ್‌ ಆರಂಭಿಸಿದೆ. ಈ ಮೇಳ ಜುಲೈ 23 ಇಂದಿನಿಂದ ಶುರುವಾಗಿದ್ದು ಜುಲೈ 28 ರ ವರೆಗೆ ನಡೆಯಲಿದೆ.

Flipkart: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್: 108MP ಕ್ಯಾಮೆರಾದ ಈ ಫೋನ್​ಗೆ ಬಂಪರ್ ಡಿಸ್ಕೌಂಟ್
Flipkart Big Saving Days sale
Edited By:

Updated on: Jul 23, 2022 | 1:51 PM

ಅತ್ತ ಅಮೆಜಾನ್​ನಲ್ಲಿ ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ಸೇಲ್ (Amazon Prime Day Sale) ನಡೆಯುತ್ತಿದ್ದರೆ ಇದರ ಬೆನ್ನಲ್ಲೇ ಇತ್ತ ಮತ್ತೊಂದು ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​​ಕಾರ್ಟ್​ ಬಿಗ್ ಸೇವಿಂಗ್ ಡೇಸ್ ಸೇಲ್‌ (Flipkart Big Saving Days sale) ಆರಂಭಿಸಿದೆ. ಈ ಮೇಳ ಜುಲೈ 23 ಇಂದಿನಿಂದ ಶುರುವಾಗಿದ್ದು ಜುಲೈ 28 ರ ವರೆಗೆ ನಡೆಯಲಿದೆ. ಅಮೆಜಾನ್​ನಂತೆ ಇದರಲ್ಲೂ ಸ್ಮಾರ್ಟ್​​ಫೋನ್, ಲ್ಯಾಪ್​ಟಾಪ್, ಸ್ಮಾರ್ಟ್​ ಟಿವಿ ಸೇರಿದಂತೆ ಅನೇಕ ಪ್ರಾಡಕ್ಟ್​ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಮುಖ್ಯವಾಗಿ ಮೋಟೋರೊಲಾ (Motorola) ಕಂಪನಿಯ ಮೋಟೋ G ಸರಣಿಯ ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್ ನೀಡಲಾಗಿದೆ. ಮೋಟೋ G71, ಮೋಟೋ G51, ಮೋಟೋ G31, ಮೋಟೋ G60 ಮತ್ತು ಮೋಟೋರೊಲಾ ಎಡ್ಜ್ 20 ಫ್ಯೂಜನ್‌ ಸೇರಿದಂತೆ ಇತರೆ ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ನೀವು ಕಡಿಮೆ ಬೆಲೆಗೆ ಖರೀದಿಸಬಹುದು.

ನೀವು 5G ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್​​ಫೋನ್ ಮೇಲೆ ಕಣ್ಣಿಟ್ಟಿದ್ದರೆ ಮೋಟೋ G71 ಮತ್ತು ಮೋಟೋ G51 ಅತ್ಯುತ್ತಮ ಆಯ್ಕೆಯಾಗಿದೆ. ಮೋಟೋ G71 6.4 ಇಂಚಿನ ಅಮೋಲೆಡ್ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಮೇಲೆ 4,000 ರೂ. ಡಿಸ್ಕೌಂಟ್ ನೀಡಲಾಗಿದೆ. ಹೀಗಾಗಿ ಇದನ್ನು ನೀವು ಕೇವಲ 14,999 ರೂ. ಗೆ ಖರೀದಿಸಬಹುದು.

ಮೋಟೋ G51 ಕೂಡ ಕೇವಲ 11,999 ರೂ. ಗೆ ಮಾರಾಟ ಕಾಣುತ್ತಿದೆ. ಇದು ಕೂಡ 5ಜಿ ಕನೆಕ್ಟಿವಿಟಿ ಪಡೆದುಕೊಂಡಿದ್ದು 6.8 ಇಂಚಿನ ಡಿಸ್​​ಪ್ಲೇ, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ, ಸ್ನಾಪ್​ಡ್ರಾಗನ್ ಆಕ್ಟಾಕೋರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ.

ಇದನ್ನೂ ಓದಿ
Amazon Prime Day Sale: ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್: 30,000 ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್
ಫೋನ್ ಕಳೆದುಕೊಂಡರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
Redmi k50i 5G: ಭಾರತದಲ್ಲಿ ಇಂದಿನಿಂದ ರೆಡ್ಮಿ K50i ಮಾರಾಟ ಆರಂಭ: ಈ ಫೋನನ್ನು ಖರೀದಿಸಬಹುದೇ?
WhatsApp: ವಾಟ್ಸ್​ಆ್ಯಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಿರಿ: ಹೇಗೆ ಗೊತ್ತೇ?

ಎಂಟ್ರಿ ಲೆವೆನ್ ಸ್ಮಾರ್ಟ್​​ಫೋನ್ ಆಗಿರುವ ಮೋಟೋ G31 ಮೀಡಿಯಾ ಟೆಕ್ ಹೀಲೊಯೊ G85 ಪ್ರೊಸೆಸರ್​ನಿಂದ ಆವೃತ್ತವಾಗಿದೆ. ಇದು 50 ಮೆಗಾ ಫಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಮಖ್ಯ ಕ್ಯಾಮೆರಾವನ್ನು ಹೊಂದಿದೆ. ಇದರ 4GB RAM + 64GB ಸ್ಟೋರೇಜ್ ಆಯ್ಕೆಗೆ 9,499 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 6GB RAM + 128GB ಸ್ಟೋರೇಜ್ ಆಯ್ಕೆಗೆ 11,499 ರೂ. ಇದೆ.

ಇನ್ನು 108 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೋಟೋ G60 ಸ್ಮಾರ್ಟ್​ಫೋನ್ ಮೇಲೂ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಈ ಫೋನನ್ನು ಬ್ಯಾಂಕ್ ಆಫರ್ ಎಲ್ಲ ಅಳವಡಿಸಿ ಕೇವಲ 13,999 ರೂ. ಗೆ ನಿಮ್ಮದಾಗಿಸಬಹುದು. ಇದು 6.8 ಇಂಚಿನ ಡಿಸ್ ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 732G ಪ್ರೊಸೆಸರ್ ನೀಡಲಾಗಿದೆ. ಇನ್ನು ಸ್ನಾಪ್​ಡ್ರಾಗನ್ 732G ಪ್ರೊಸೆಸರ್ ಅನ್ನು ಹೊಂದಿರುವ ಮೋಟೋ G40 ಫ್ಯೂಜನ್‌ ಕೂಡ ಕೇವಲ 12,999 ರೂ. ಗೆ ಸೇಲ್ ಕಾಣುತ್ತಿದೆ.

Published On - 1:51 pm, Sat, 23 July 22