ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಮೊನ್ನೆಯಷ್ಟೆ ಹೋಳಿ ಹಬ್ಬದ ಪ್ರಯುಕ್ತ ಸೇಲ್ ನಡೆಸಿ ಆಕರ್ಷಕ ಕೊಡುಗೆಗಳನ್ನು ನೀಡಿತ್ತು. ಇದೀಗ ಮತ್ತೊಂದು ಹೊಸ ಮೇಳ ಫ್ಲಿಪ್ಕಾರ್ಟ್ ನಡೆಯುತ್ತಿದೆ. ಬಿಗ್ ಸೇವಿಂಗ್ ಡೇಸ್ (Flipkart Big Saving Days Sale) ಹೆಸರಿನಲ್ಲಿ ಮಾರಾಟ ಸುಗ್ಗಿ ಭರ್ಜರಿ ನಡೆಯುತ್ತಿದ್ದು ಇಂದು ಕೊನೆಯ ದಿನವಾಗಿದೆ. ಮಾರ್ಚ್ 15 ರಂದು ಈ ಮೇಳ ಕೊನೆಯಾಗಲಿದೆ. ಯುಗಾದಿ ಹಬ್ಬದ ಸಂಭ್ರಮಕ್ಕೂ ಮುನ್ನ ಫ್ಲಿಪ್ಕಾರ್ಟ್ ಈ ಮೇಳ ನಡೆಸುತ್ತಿದ್ದು, ಮುಖ್ಯವಾಗಿ ಸ್ಮಾರ್ಟ್ಫೋನ್ಗಳ ಮೇಲೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್ಟಾಪ್, ಸ್ಮಾರ್ಟ್ಟಿವಿ ಸೇರಿದಂತೆ ಹಲವು ಡಿವೈಸ್ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಬಳಕೆದಾರರು ICICI ಬ್ಯಾಂಕ್ನ ಕ್ರೆಡಿಟ್ ಕಾರ್ಡ್ನಲ್ಲಿ 10 ಪ್ರತಿಶತ ತ್ವರಿತ ರಿಯಾಯಿತಿ ಮತ್ತು EMI ಸೌಲಭ್ಯದ ಲಾಭವನ್ನು ನೀಡಲಾಗಿದೆ. ಮುಖ್ಯವಾಗಿ ಕಳೆದ ವರ್ಷ ಅನಾವರಣಗೊಂಡ ಆ್ಯಪಲ್ ಐಫೋನ್ 14 128GB ಮಾದರಿಯು ಶೇ. 17 ರಿಯಾಯಿತಿಯೊಂದಿಗೆ ಲಭ್ಯವಿದೆ. ಬಳಕೆದಾರರು ಈ ಫೋನ್ ಅನ್ನು ಸುಮಾರು 65,999 ರೂ. ಗೆ ಖರೀದಿಸಬಹುದು. ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದ್ದು 20,000 ರೂ. ವರೆಗೆ ಉಳಿತಾಯವಾಗಲಿದೆ. ಕಂಪನಿಯು ಈ ಫೋನ್ ಮೇಲೆ ಒಂದು ವರ್ಷದ ವಾರಂಟಿ ಮತ್ತು ಇನ್-ಬಾಕ್ಸ್ ಬಿಡಿಭಾಗಗಳ ಮೇಲೆ 6 ತಿಂಗಳ ವಾರಂಟಿಯನ್ನು ನೀಡುತ್ತಿದೆ.
ಇನ್ನು ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ನೀಡಿ ಹೊಸ ಅಲೆಯನ್ನೇ ಎಬ್ಬಿಸಿದ್ದ ನಥಿಂಗ್ ಫೋನ್ 1 ಕೂಡ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಡಿಸ್ಕೌಂಟ್ನಲ್ಲಿ ದೊರೆಯಲಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು 28,499 ರೂ. ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಸೇಲ್ನಲ್ಲಿ ಪ್ಲಸ್ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಉಚಿತ ಡೆಲಿವರಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೆಡ್ಮಿ ನೋಟ್ 12 ಪ್ರೋ+, ಗೂಗಲ್ ಪಿಕ್ಸೆಲ್ 7, ಮೊದಲಾದ ಸ್ಮಾರ್ಟ್ಫೋನ್ಗಳೂ ಕೂಡ ಭಾರೀ ರಿಯಾಯಿತಿಯಲ್ಲಿ ಫ್ಲಿಪ್ಕಾರ್ಟ್ನಲ್ಲಿ ಲಭ್ಯ ಇರಲಿವೆ. 60 ಸಾವಿರ ರೂ ಬೆಲೆಯ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ಫೋನ್ ಫೆಸ್ಟಿವ್ ಸೇಲ್ ಆಫರ್ನಲ್ಲಿ ಬ್ಯಾಂಕ್ ಆಫರ್ ಮೂಲಕ 50 ಸಾವಿರ ರೂಗಿಂತ ಅಗ್ಗದ ಬೆಲೆಗೆ ಖರೀದಿಸಬಹುದು.
ಫ್ಲಿಪ್ಕಾರ್ಟ್ನ ಟಾಪ್ ಡೀಲ್ಗಳು:
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ