Flipkart Big Saving Days sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ​ ಬಿಗ್‌ ಸೇವಿಂಗ್‌ ಡೇಸ್‌: ಈ ಬಾರಿ ಕೂಡ ಬಂಪರ್ ಆಫರ್ಸ್

ಸ್ಮಾರ್ಟ್​ಫೋನ್​ಗಳ ವಿಚಾರಕ್ಕೆ ಬರುವುದಾದರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿ ಪಿಕ್ಸೆಲ್ 6ಅ ಫೋನ್ ಕೇವಲ 27,999 ರೂ. ಗೆ ಮಾರಾಟ ಕಾಣುತ್ತಿದೆ. ರಿಯಲ್ ಮಿ ಜಿಟಿ ನಿಯೋ 3T ಅನ್ನು 22,999 ರೂ. ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು

Flipkart Big Saving Days sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ​ ಬಿಗ್‌ ಸೇವಿಂಗ್‌ ಡೇಸ್‌: ಈ ಬಾರಿ ಕೂಡ ಬಂಪರ್ ಆಫರ್ಸ್
flipkart big saving days sale
Follow us
Vinay Bhat
|

Updated on: Jun 10, 2023 | 2:02 PM

ಪ್ರಸಿದ್ಧ ಇ ಕಾಮರ್ಸ್​ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗಿದೆ. ಫ್ಲಿಪ್​ಕಾರ್ಟ್​ನಲ್ಲಿ​ ಇಂದಿನಿಂದ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days sale) ಸೇಲ್ ಶುರುವಾಗಿದೆ. ಈ ಬಹುನಿರೀಕ್ಷಿತ ಸೇಲ್ ಈಗಾಗಲೇ ಲೈವ್ ಆಗಿದ್ದು, ಐದು ದಿನಗಳ ಕಾಲ ನಡೆಯಲಿದ್ದು ಮೇ 14ಕ್ಕೆ ಕೊನೆಗೊಳ್ಳಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್‌ ಆಫರ್‌ಗಳನ್ನು ನೀಡಲಾಗಿದೆ. ನೀವು ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್​ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್​ನಲ್ಲಿ ಮೊಬೈಲ್​ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಫ್ಲಿಪ್​ಕಾರ್ಟ್ ಮುಂದಾಗಿದೆ.

ಫ್ಲಿಪ್​ಕಾರ್ಟ್​ನಲ್ಲಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್​ನಲ್ಲಿ ಹಲವು ಉತ್ಪನ್ನಗಳ ಮೇಲೆ ಶೇ. 80 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಲ್ಯಾಪ್‌ಟಾಪ್‌ಗಳು 14,999 ರೂ. ಆರಂಭಿಕ ಬೆಲೆಯೊಂದಿಗೆ ಸಿಗಲಿದೆ. ಅಂತೆಯೆ ಮಾನಿಟರ್‌ಗಳು ಮತ್ತು ಪ್ರಿಂಟರ್‌ಗಳು ಸಹ 2,199 ರೂ. ಗೆ ಲಭ್ಯವಿದೆ. ಬಟ್ಟೆ ಮತ್ತು ಸ್ಟೈಲಿಂಗ್ ಉತ್ಪನ್ನಗಳ ಮೇಲೆ ಕೊಡುಗೆಗಳು ಲಭ್ಯವಿದೆ. ಈ ಉತ್ಪನ್ನಗಳು 399 ರೂ. ರಿಂದ ಪ್ರಾರಂಭವಾಗುತ್ತವೆ. ಮೈಕ್ರೊ ಎಸ್‌ಡಿ ಕಾರ್ಡ್‌ಗಳು, ಪೆನ್ ಡ್ರೈವ್‌ಗಳು, ಹಾರ್ಡ್ ಡ್ರೈವ್‌ಗಳ ಮೇಲೆ ಶೇ. 60 ರಷ್ಟು ರಿಯಾಯಿತಿ ಪಡೆಯಬಹುದು.

Moto G13: ಬಂಪರ್ ಆಫರ್: ಕೇವಲ 9,999 ರೂ. ಗೆ ಸೇಲ್ ಆಗುತ್ತಿದೆ ಮೋಟೋ G13 ಸ್ಮಾರ್ಟ್​ಫೋನ್

ಇದನ್ನೂ ಓದಿ
Image
Asus Zenfone 10: ಗೇಮಿಂಗ್ ಪ್ರಿಯರಿಗೆ ಸಂತಸದ ಸುದ್ದಿ: ಬರುತ್ತಿದೆ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್​​ನ ಹೊಸ ಫೋನ್
Image
OnePlus Nord N30 5G: 108MP ಕ್ಯಾಮೆರಾ ಹೊಂದಿರುವ ಒನ್​ಪ್ಲಸ್ ಫೋನ್ ಬಿಡುಗಡೆ
Image
Infinix InBook X2 Slim: ಆಕರ್ಷಕ ವಿನ್ಯಾಸದಲ್ಲಿ ಹೊಸ ಲ್ಯಾಪ್​ಟಾಪ್ ಪರಿಚಯಿಸಿದ ಇನ್ಫಿನಿಕ್ಸ್
Image
Samsung OLED TV: ಸ್ಯಾಮ್​ಸಂಗ್ ಹೊಸ ಮೇಡ್ ಇನ್ ಇಂಡಿಯಾ ಒಎಲ್‌ಇಡಿ ಟಿವಿ ಬಿಡುಗಡೆ

ಇನ್ನು ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಅಲ್ಲದೆ, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳ ಮೇಲೆ ಗ್ರಾಹಕರು ಶೇಕಡಾ 55 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಫ್ಲಿಪ್​ಕಾರ್ಟ್ ಒರಿಜಿನಲ್ಸ್​ನಲ್ಲಿ ಶೇಕಡಾ 80 ರಷ್ಟು ಡಿಸ್ಕೌಂಟ್ ಪಡೆಯಬಹುದು. ಈ ಸೇಲ್‌ನಲ್ಲಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 5 ಪ್ರತಿಶತದಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಸ್ಮಾರ್ಟ್​ಫೋನ್​ಗಳ ವಿಚಾರಕ್ಕೆ ಬರುವುದಾದರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿ ಪಿಕ್ಸೆಲ್ 6ಅ ಫೋನ್ ಕೇವಲ 27,999 ರೂ. ಗೆ ಮಾರಾಟ ಕಾಣುತ್ತಿದೆ. ರಿಯಲ್ ಮಿ ಜಿಟಿ ನಿಯೋ 3T ಅನ್ನು 22,999 ರೂ. ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಪೋಕೋ X5 ಪ್ರೊ ಕೇವಲ 21,999, ರಿಯಲ್ ಮಿ 10 ಪ್ರೊ 5G ಅನ್ನು 19,999 ರೂ. ಗೆ ನಿಮ್ಮದಾಗಿಸಬಹುದು. ಆ್ಯಪಲ್ ಕಂಪನಿಯಐಫೋನ್ 13 ಅನ್ನು 58,749 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಬ್ಯಾಂಕ್‌ ಕಾರ್ಡ್‌ ಆಫರ್‌ ಮಾತ್ರವಲ್ಲದೆ ಹೆಚ್ಚುವರಿ ಎಕ್ಸ್‌ಚೇಂಜ್‌ ಆಫರ್‌ಗಳು ಸಹ ಸೇರಿವೆ.

ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.