ಸ್ಮಾರ್ಟ್​ಫೋನ್ ಪ್ರಿಯರಿಗೆ ಭರ್ಜರಿ ಸುದ್ದಿ: ರಿಯಲ್ ಮಿ X7, X7 ಪ್ರೊ ಫೋನ್​ಗೆ 3000 ರೂ. ಡಿಸ್ಕೌಂಟ್

| Updated By: Vinay Bhat

Updated on: Sep 06, 2021 | 2:09 PM

Flipkart ongoing Carnival sale 2021: ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌, 65W ಫಾಸ್ಟ್‌ ಚಾರ್ಜಿಂಗ್ ಸೇರಿದಂತೆ ಆಕರ್ಷಕ ಫೀಚರ್​ಗಳಿರುವ ರಿಯಲ್ ಮಿ X7, ರಿಯಲ್ ಮಿ X7 ಪ್ರೊ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 3000 ರೂ. ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಸ್ಮಾರ್ಟ್​ಫೋನ್ ಪ್ರಿಯರಿಗೆ ಭರ್ಜರಿ ಸುದ್ದಿ: ರಿಯಲ್ ಮಿ X7, X7 ಪ್ರೊ ಫೋನ್​ಗೆ 3000 ರೂ. ಡಿಸ್ಕೌಂಟ್
Realme X7
Follow us on

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ನಲ್ಲಿ ಸ್ಮಾರ್ಟ್‌ಫೋನ್ ಕಾರ್ನಿವಲ್ ಮೇಳ (Flipkart Smartphones Carnival Sale 2021) ನಡೆಯುತ್ತಿದೆ. ಈ ಮೇಳದಲ್ಲಿ ಜನಪ್ರಿಯ ಫೋನ್‌ ಮಾಡೆಲ್‌ಗಳಿಗೆ ಜೊತೆಗೆ ಇತ್ತೀಚಿಗಿನ ಕೆಲವು ನೂತನ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಈ ಮೇಳವು ಸೆಪ್ಟೆಂಬರ್ 2ರಿಂದ ಶುರುವಾಗಿದ್ದು, ಸೆಪ್ಟಂಬರ್ 8ರ ವರೆಗೂ ಚಾಲ್ತಿಯಲ್ಲಿ ಇರಲಿದೆ. ಈ ಪೈಕಿ ರಿಯಲ್ ಮಿಯ ರಿಯಲ್ ಮಿ X7 (Realme X7) ಮತ್ತು ರಿಯಲ್ ಮಿ X7 ಪ್ರೊ (Realme X7 Pro) ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟವಾಗುತ್ತಿದೆ.

ಹೌದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌, 65W ಫಾಸ್ಟ್‌ ಚಾರ್ಜಿಂಗ್ ಸೇರಿದಂತೆ ಆಕರ್ಷಕ ಫೀಚರ್​ಗಳಿರುವ ಈ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 3000 ರೂ. ಡಿಸ್ಕೌಂಟ್ ಆಫರ್ ನೀಡಲಾಗಿದೆ. ರಿಯಲ್ ಮಿ ಎಕ್ಸ್ 7 ಸ್ಮಾರ್ಟ್​ಫೋನಿನ 8GB RAM ಮತ್ತು 128GB ವೇರಿಯಂಟ್ ಮಾದರಿ ಈಗ 19,999 ರೂ. ಗೆ ಲಭ್ಯವಾಗುತ್ತಿದೆ. ಅಂತೆಯೆ ಎಕ್ಸ್ 7 ಪ್ರೊ ಫೋನಿನ 8GB RAM ಮತ್ತು128GB  ಆಯ್ಕೆಯು 26,999 ರೂ. ಗೆ ಮಾರಾಟವಾಗುತ್ತಿದೆ.

ರಿಯಲ್‌ಮಿ X7 5G ಸ್ಮಾರ್ಟ್‌ಫೋನ್ ಆಗಿದ್ದು, 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ Dimensity 800U 5G SoC ಪ್ರೊಸೆಸರ್‌ ಅನ್ನು ಹೊಂದಿದೆ.

ಹಿಂಬದಿಯಲ್ಲಿ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದೆ.

ಇನ್ನೂ ಈ ಸ್ಮಾರ್ಟ್‌ಫೋನ್ 4310mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G VOLTE, ವೈ-ಫೈ, ಬ್ಲೂಟೂತ್ V5.0, GPS ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಸೆನ್ಸಾರ್‌ ಅನ್ನು ಒಳಗೊಂಡಿದೆ.

WhatsApp: ವಾಟ್ಸ್​ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್​​ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ

ಸ್ಮಾರ್ಟ್​ಫೋನ್​ಗಳ ಮೇಲೆ ಭಾರೀ ಡಿಸ್ಕೌಂಟ್: ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಅವಕಾಶ