WhatsApp: ವಾಟ್ಸ್ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ
ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸ್ಆ್ಯಪ್ ಇಮೇಜ್ ಫಿಲ್ಟರ್ ಒಂದನ್ನು ಸೈಬರ್ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಚೆಕ್ ಪಾಯಿಂಟ್ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಈ ಫಿಲ್ಟರ್ ಅನುವಾಗುತ್ತಿತ್ತು.
ವಿಶ್ವದಲ್ಲಿ ಕೋಟ್ಯಾಂತರ ಜನರು ಬಳಕೆ ಮಾಡುವ ಜನಪ್ರಿಯ ಆ್ಯಪ್ಗಳ ಮೇಲೆ ಹ್ಯಾಕರ್ಗಳ ಕಣ್ಣು ಇದ್ದೇ ಇರುತ್ತದೆ. ಭದ್ರತೆಯನ್ನು ಎಷ್ಟೇ ಬಲ ಪಡಿಸಿದರು ಹ್ಯಾಕರ್ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ನಲ್ಲೂ (WhatsApp) ಬಳಕೆದಾರರ ಖಾಸಗಿ ಸಂದೇಶಗಳು ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.
ಈ ಪೈಕಿ ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸ್ಆ್ಯಪ್ ಇಮೇಜ್ ಫಿಲ್ಟರ್ ಒಂದನ್ನು ಸೈಬರ್ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಚೆಕ್ ಪಾಯಿಂಟ್ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಈ ಫಿಲ್ಟರ್ ಅನುವಾಗುತ್ತಿತ್ತು. ಆದರೆ, ಇದು ಗಮನಕ್ಕೆ ಬಂದ ಕೂಡಲೆ ಈ ದೋಷವನ್ನು ವಾಟ್ಸ್ಆ್ಯಪ್ ಸರಿಪಡಿಸಿದೆ.
ಈ ನ್ಯೂನತೆ ಹ್ಯಾಕರ್ ಕೈಗೆ ಸಿಕ್ಕರೆ ವಾಟ್ಸ್ಆ್ಯಪ್ ಮೆಮೊರಿಯಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಆಕ್ರಮಣಕಾರರು ದುರುದ್ದೇಶಪೂರಿತ ಫೋಟೋವನ್ನು ಕಳುಹಿಸುವ ಮೂಲಕ ಬಳಕೆದಾರರ ಸ್ಮಾರ್ಟ್ಫೋನ್ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಸೆಕ್ಯುರಿಟಿ ಸಂಸ್ಥೆಯ ಸಂಶೋಧಕರಾದ ಡಿಕ್ಲಾ ಬರ್ದಾ ಮತ್ತು ಗಾಲ್ ಎಲ್ಬಾಜ್ ಅವರು ಬಳಕೆದಾರರು ವಾಟ್ಸ್ಆ್ಯಪ್ ಫೋಟೋಗೆ ಫಿಲ್ಟರ್ ಬಳಸಿದರೆ ಹ್ಯಾಕರ್ಗಳು ಇದನ್ನೇ ದಾರಿಯೆಂದುಕೊಂಡು ಬಳಕೆದಾರರನ ವಾಟ್ಸ್ಆ್ಯಪ್ ಮೆಮೊರಿಗೆ ಪ್ರವೇಶವನ್ನು ಪಡೆಯಬಹುದು ಎಂದು ತಿಳಿಸದ್ದಾರೆ. ಕೊನೆಗೆ ಇದೇ ತಂಡ ನ್ಯೂನತೆಯನ್ನು ಸರಿ ಪಡಿಸಿದೆ.
ಭದ್ರತಾ ಸಂಸ್ಥೆ ನ್ಯೂನತೆಯನ್ನು ನವೆಂಬರ್ 10, 2020 ರಂದು ವಾಟ್ಸ್ಆ್ಯಪ್ ಗೆ ತಿಳಿಸಿದೆ. ವಾಟ್ಸ್ಆ್ಯಪ್ ನಂತರ ಈ ಸಮಸ್ಯೆಯನ್ನು ಒಪ್ಪಿಕೊಂಡಿತು. ಈ ವರ್ಷ ಜನವರಿಯಲ್ಲಿ ಲಭ್ಯವಾದ ವಾಟ್ಸ್ಆ್ಯಪ್ ಆವೃತ್ತಿ 2.21.1.13 ರಲ್ಲಿ ನ್ಯೂನತೆ ಕಾಣಿಸಿಕೊಂಡಿತು. ಆದರೆ ವಾಟ್ಸ್ಆ್ಯಪ್ ಇತ್ತೀಚಿನ ಆವೃತ್ತಿಯನ್ನು ನ್ಯೂನತೆಯನ್ನು ಸರಿಪಡಿಸಿಕೊಂಡಿದ್ದು, ಬಳಕೆದಾರರು ಈ ನ್ಯೂನತೆಯಿಂದ ರಕ್ಷಿಸಲ್ಪಟ್ಟಿದ್ದಾರೆ.
ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ಡಿಸ್ಕೌಂಟ್: ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಅವಕಾಶ
Amazon Quiz: ಅಮೆಜಾನ್ನ ಈ 5 ಪ್ರಶ್ನೆಗಳಿಗೆ ಉತ್ತರಿಸಿದ್ರೆ 20 ಸಾವಿರ ರೂ. ಬಹುಮಾನ: ಇಲ್ಲಿದೆ ಉತ್ತರ
(WhatsApp Hacks THIS WhatsApp bug allows hackers to steal sensitive details from your phone)
Published On - 12:55 pm, Mon, 6 September 21