Garmin Instinct 2X Solar: ಸೋಲಾರ್ ಪವರ್ ಮೂಲಕ ಚಾರ್ಜಿಂಗ್ ಗಾರ್ಮಿನ್ ಸ್ಮಾರ್ಟ್ವಾಚ್
ಗಾರ್ಮಿನ್, ಸೋಲಾರ್ ಪವರ್ ಬಳಸಿಕೊಂಡು ಚಾರ್ಜ್ ಆಗುವ ನೂತನ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ಹೊಸ ವಾಚ್ ಕುರಿತ ವೈಶಿಷ್ಟ್ಯಗಳು ಇಲ್ಲಿವೆ. ಗಾರ್ಮಿನ್ ಇನ್ಸ್ಟಿಂಕ್ಟ್ 2X ಸೋಲಾರ್ ವಾಚ್, ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಸ್ಪೋರ್ಟ್ಸ್, ಟ್ರೆಕ್ಕಿಂಗ್, ಫಿಸಿಕಲ್ ಆ್ಯಕ್ಟಿವಿಟಿ, ಫಿಟ್ನೆಸ್ ಬಗ್ಗೆ ನಿಮಗೆ ಹೆಚ್ಚಿನ ಕಾಳಜಿ ಇದೆ ಎಂದಾದರೆ, ಗಾರ್ಮಿನ್ ಕಂಪನಿ ಕುರಿತು ಕೇಳಿರುತ್ತೀರಿ. ಜಿಪಿಎಸ್, ಮ್ಯಾಪಿಂಗ್, ಸ್ಮಾರ್ಟ್ವಾಚ್ ತಯಾರಿಸುವ ಗಾರ್ಮಿನ್ ಕಂಪನಿ, ಹೊಸ ಹೊಸ ವಿನ್ಯಾಸ, ಅತ್ಯಾಧುನಿಕ ಮತ್ತು ನಿಖರ ಫಲಿತಾಂಶ ನೀಡುವ ಸ್ಮಾರ್ಟ್ವಾಚ್, ಗ್ಯಾಜೆಟ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಬಾರಿ ಗಾರ್ಮಿನ್, ಸೋಲಾರ್ ಪವರ್ ಬಳಸಿಕೊಂಡು ಚಾರ್ಜ್ ಆಗುವ ನೂತನ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ಹೊಸ ವಾಚ್ ಕುರಿತ ವೈಶಿಷ್ಟ್ಯಗಳು ಇಲ್ಲಿವೆ. ಗಾರ್ಮಿನ್ ಇನ್ಸ್ಟಿಂಕ್ಟ್ 2X ಸೋಲಾರ್ ವಾಚ್, ವಿಶೇಷತೆಗಳನ್ನು ತಿಳಿಯೋಣ ಬನ್ನಿ. ಸೋಲಾರ್ ಚಾರ್ಜಿಂಗ್ ಪವರ್ ಗ್ಲಾಸ್ ಹೊಂದಿರುವ ಗಾರ್ಮಿನ್ ಇನ್ಸ್ಟಿಂಕ್ಟ್ 2X ಸೋಲಾರ್ ಸ್ಮಾರ್ಟ್ವಾಚ್, 10ATM ವಾಟರ್ ರೆಸಿಸ್ಟ್, ಥರ್ಮಲ್ ಶಾಕ್ ರೆಸಿಸ್ಟ್ ಫೀಚರ್ಸ್ ಹೊಂದಿದೆ. 40mm, 45mm ಮತ್ತು 50mm ಎಂಬ ಮೂರು ಗಾತ್ರಗಳ ಮಾದರಿಗಳು ಲಭ್ಯವಿದ್ದು, ಕಪ್ಪು, ನೀಲಿ ಮತ್ತು ಬೂದು ಬಣ್ಣಗಳಲ್ಲಿ ದೊರೆಯಲಿದೆ. ನೂತನ ಸ್ಮಾರ್ಟ್ವಾಚ್, ಅಮೆರಿಕದ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ₹37,000 ದರವಿದೆ. 40 ದಿನದ ಬ್ಯಾಟರಿ, ಸೋಲಾರ್ ಪವರ್ ಇದ್ದರೆ ನಿರಂತರ ಬ್ಯಾಟರಿ ಬಾಳಿಕೆ ಇದ್ದು, ಸ್ಮಾರ್ಟ್ ನೋಟಿಫಿಕೇಶನ್, ಅಪ್ಡೇಟ್, ಬ್ಲೂಟೂತ್, ಜಿಪಿಎಸ್ ಸೌಲಭ್ಯ ಹೊಂದಿದೆ. ವಿವಿಧ ಹೆಲ್ತ್ ಮತ್ತು ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಫೀಚರ್ಸ್
ಎಲ್ಇಡಿ ಫ್ಲ್ಯಾಶ್ಲೈಟ್, ಜಂಪ್ ಮಾಸ್ಟರ್ ಮೋಡ್ ವೈಶಿಷ್ಟ್ಯ ಹೊಂದಿದೆ.