ಮೈಕ್ರೋಸಾಫ್ಟ್ ತಾಂತ್ರಿಕ ದೋಷ: ಭಾರತದ ಎನ್​ಐಸಿ ನೆಟ್ವರ್ಕ್ ಮೇಲೆ ಪರಿಣಾಮ ಆಗಿಲ್ಲ: ಸಚಿವ ಎ ವೈಷ್ಣವ್ ಸ್ಪಷ್ಟನೆ

CERT technical advisory on Microsoft outage: ಇಂದು ಜುಲೈ 19ರಂದು ಕ್ರೌಡ್​ಸ್ಟ್ರೈಕ್ ಅಪ್​ಡೇಟ್ ಇರುವ ವಿಂಡೋಸ್ ಕಂಪ್ಯೂಟರ್​ಗಳು ಕ್ರ್ಯಾಷ್ ಆಗುತ್ತಿವೆ. ಜಾಗತಿಕವಾಗಿ ಹಲವು ಸೇವೆಗಳು ಸ್ಥಗಿತಗೊಂಡಿವೆ. ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಎ ವೈಷ್ಣವ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಇಆರ್​ಟಿ ಸಂಸ್ಥೆ ಅಡ್ವೈಸರಿ ಬಿಡುಗಡೆ ಮಾಡಿದ್ದು, ಈ ತಾಂತ್ರಿಕ ದೋಷದ ಸಮಸ್ಯೆಗೆ ಪರಿಹಾರಕ್ಕೆ ಮಾರ್ಗೋಪಾಯ ಕೂಡ ನೀಡಿದೆ.

ಮೈಕ್ರೋಸಾಫ್ಟ್ ತಾಂತ್ರಿಕ ದೋಷ: ಭಾರತದ ಎನ್​ಐಸಿ ನೆಟ್ವರ್ಕ್ ಮೇಲೆ ಪರಿಣಾಮ ಆಗಿಲ್ಲ: ಸಚಿವ ಎ ವೈಷ್ಣವ್ ಸ್ಪಷ್ಟನೆ
ಅಶ್ವಿನಿ ವೈಷ್ಣವ್

Updated on: Jul 19, 2024 | 4:49 PM

ನವದೆಹಲಿ, ಜುಲೈ 19: ಮೈಕ್ರೋಸಾಫ್ಟ್ ತಂತ್ರಾಂಶದ ಕಂಪ್ಯೂಟರ್​ಗಳಲ್ಲಿ ಇಂದು ಬಗ್ ಸಮಸ್ಯೆ ತಲೆದೋರಿ ಜಾಗತಿಕವಾಗಿ ವಿವಿಧ ಸೇವೆಗಳು ವ್ಯತ್ಯಯಗೊಂಡಿದೆ. ಈ ಬೆಳವಣಿಗೆ ಬಗ್ಗೆ ಭಾರತದ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋಸಾಫ್ಟ್ ಹಾಗೂ ಅದರ ಸಹಸಂಸ್ಥೆಗಳ ಜೊತೆ ತಮ್ಮ ಸಚಿವಾಲಯ ಸಂಪರ್ಕದಲ್ಲಿದೆ. ಈ ಜಾಗತಿಕ ತಾಂತ್ರಿಕ ದೋಷಕ್ಕೆ ಕಾರಣ ಏನೆಂದು ಗುರುತಿಸಲಾಗಿದೆ. ಸಮಸ್ಯೆ ಬಗೆಹರಿಸಲು ಅಪ್​ಡೇಟ್​​ಗಳನ್ನು ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಸಿಇಆರ್​ಟಿಯಿಂದ ಈ ಸಂಬಂಧ ಟೆಕ್ನಿಕಲ್ ಅಡ್ವೈಸರಿ ಹೊರಡಿಸಲಾಗುವುದು ಎಂದಿದ್ದಾರೆ. ಹಾಗೆಯೇ, ಸರ್ಕಾರದ ಎನ್​ಐಸಿ ನೆಟ್ವರ್ಕ್​ಗೆ ಈ ಮೈಕ್ರೋಸಾಫ್ಟ್ ಔಟೇಜ್ ಸಮಸ್ಯೆ ಬಾಧಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸಿಇಆರ್​ಟಿ ಅಡ್ವೈಸರಿ ಇದು…

ಸೈಬರ್ ದಾಳಿ ಇತ್ಯಾದಿ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲೆಂದು ರೂಪಿಸಲಾಗಿರುವ ಸಿಇಆರ್​ಟಿ ಸಂಸ್ಥೆ ಈಗ ಮೈಕ್ರೋಸಾಫ್ಟ್ ಔಟೇಜ್ ಸಮಸ್ಯೆ ಬಗ್ಗೆ ಇಂದು ಶುಕ್ರವಾರ ಅಡ್ವೈಸರಿ ಬಿಡುಗಡೆ ಮಾಡಿದೆ.

“ಕ್ರೌಡ್ ಸ್ಟ್ರೈಕ್​ನ ಫಾಲ್ಕನ್ ಸೆನ್ಸಾರ್ ಹೊಂದಿರುವ ವಿಂಡೋಸ್ ಸಿಸ್ಟಂಗಳಿಗೆ ಸಮಸ್ಯೆ ಆಗಿದೆ. ಈ ಫಾಲ್ಕನ್ ಸೆನ್ಸಾರ್​ನ ಇತ್ತೀಚಿನ ಅಪ್​ಡೇಟ್​ನಿಂದ ಈ ಸಮಸ್ಯೆ ಆಗಿದೆ. ಫಾಲ್ಕನ್ ಸೆನ್ಸಾರ್​ಗೆ ಸಂಬಂಧಿಸಿದ ಬ್ಲೂ ಸ್ಕ್ರಿನ್ ಆಫ್ ಡೆತ್ ದೋಷ ಕಾಣಿಸಿಕೊಂಡಿದೆ” ಎಂದು ಸಿಇಆರ್​ಟಿ ವಿವರಿಸಿದೆ.

ಇದನ್ನೂ ಓದಿ: ನಿಮಗೂ ಬಂತಾ ಈ ಬ್ಲೂ ಸ್ಕ್ರೀನ್ ಎರರ್? ಕಂಪ್ಯೂಟರ್ ದಿಢೀರ್ ರೀಸ್ಟಾರ್ಟ್ ಆಗ್ತಿದ್ಯಾ? ಹೀಗೆ ಮಾಡಿ…

“ಕ್ರೌಡ್​ಸ್ಟ್ರೈಕ್​ನ ಇತ್ತೀಚಿನ ಅಪ್​ಡೇಟ್​ನಿಂದ ಸಮಸ್ಯೆಗಳಾಗಿವೆ. ಇದು ಕ್ರೌಡ್ ಸ್ಟ್ರೈಕ್ ಗಮನಕ್ಕೆ ಹೋಗಿದೆ. ಹೊಸ ಅಪ್​ಡೇಟ್ ಬಿಡುಗಡೆ ಮಾಡಲಾಗಿದೆ. ವಿಂಡೋಸ್ ಬಳಕೆದಾರರು ಈಗಲೂ ಕೂಡ ಸಮಸ್ಯೆ ಎದುರಿಸುತ್ತಿದ್ದರೆ ಈ ಕೆಳಗಿನ ಕ್ರಮ ತೆಗೆದುಕೊಳ್ಳಬೇಕು:

  • ನಿಮ್ಮ ವಿಂಡೋಸ್ ಅನ್ನು ಸ್ಟಾರ್ಟ್ ಮಾಡಿ ಸೇಫ್ ಮೋಡ್ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್​ನಲ್ಲಿ ಬೂಟ್ ಮಾಡಿ.
  • C:\Windows\System32\drivers\CrowdStrike directory ಇಲ್ಲಿಗೆ ಹೋಗಿ
  • ಇಲ್ಲಿ ‘C-00000291*.sys’ ಎಂಬ ಹೆಸರಿನ ಫೈಲ್ ಅನ್ನು ಹುಡುಕಿರಿ.
  • ಈ ಫೈಲ್ ಅನ್ನು ಡಿಲೀಟ್ ಮಾಡಿ.
  • ಈಗ ನಿಮ್ಮ ವಿಂಡೋಸ್ ಅನ್ನು ಮಾಮೂಲಿಯ ರೀತಿಯಲ್ಲಿ ಬೂಟ್ ಮಾಡಿ.”

ಎಂದು ಸಿಇಆರ್​ಟಿ ತನ್ನ ಅಡ್ವೈಸರಿಯಲ್ಲಿ ಕ್ರಮಗಳನ್ನು ವಿವರಿಸಿದೆ. ಹಾಗೆಯೇ, ಕ್ರೌಡ್ ಸ್ಟ್ರೈಕ್ ಪೋರ್ಟಲ್​ಗೆ ಹೋಗಿ ಹೊಸ ಅಪ್​ಡೇಟ್​ಗಳಿದ್ದರೆ ಡೌನ್​ಲೋಡ್ ಮಾಡಿ ಇನ್​ಸ್ಟಾಲ್ ಮಾಡಬೇಕೆಂದೂ ಅದು ಸಲಹೆ ನೀಡಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us