WhatsApp Backups: ಗೂಗಲ್​ನಿಂದ ವಾಟ್ಸ್​ಆ್ಯಪ್ ಬಳಕೆದಾರರಿಗೆ ಶಾಕ್: ಇನ್ನುಂದೆ ಈ ಸೇವೆ ಸ್ಥಗಿತ

| Updated By: Vinay Bhat

Updated on: Oct 14, 2021 | 2:37 PM

Google Drive: WaBetaInfo ವರದಿಯ ಪ್ರಕಾರ, ವಾಟ್ಸ್​ಆ್ಯಪ್​​ ಬ್ಯಾಕಪ್‌ಗಳಿಗಾಗಿ ಗೂಗಲ್ ಅನಿಯಮಿತ ಸಂಗ್ರಹಣೆಯನ್ನು ನೀಡುವುದನ್ನು ನಿಲ್ಲಿಸಬಹುದು ಎಂದು ಹೇಳಿದೆ.

WhatsApp Backups: ಗೂಗಲ್​ನಿಂದ ವಾಟ್ಸ್​ಆ್ಯಪ್ ಬಳಕೆದಾರರಿಗೆ ಶಾಕ್: ಇನ್ನುಂದೆ ಈ ಸೇವೆ ಸ್ಥಗಿತ
Whatsapp
Follow us on

ವಾಟ್ಸ್​ಆ್ಯಪ್​​ ಬ್ಯಾಕಪ್‌ಗಳಿಗಾಗಿ (WhatsApp Backups) ಗೂಗಲ್ ಅನಿಯಮಿತ ಸಂಗ್ರಹಣೆ ನೀಡುವುದನ್ನು ಸದ್ಯದಲ್ಲೇ ಸ್ಥಗಿತಗೊಳಿಸಲಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ವಾಟ್ಸ್​ಆ್ಯಪ್ (WhatsApp)​​ ಬಳಕೆದಾರರಿಗೆ ಗೂಗಲ್ ಡ್ರೈವ್‌ನಲ್ಲಿ (Google Drive) ಬ್ಯಾಕಪ್ ಚಾಟ್ ಮಾಡಲು ಅನುಮತಿಸುತ್ತದೆ. ಅಂದರೆ ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಬ್ಯಾಕಪ್​ ಬದಲಾಯಿಸಲು ಗೂಗಲ್​ ಡ್ರೈವ್​ ಸಹಾಯ ಮಾಡುತ್ತಿತ್ತು. ಇದು ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸುಲಭ ಮತ್ತು ಸರಳ ಮಾರ್ಗವಾಗಿತ್ತು. ಆದರೆ ಇನ್ಮುಂದೆ ಉಚಿತ ಸಂಗ್ರಹಣೆ ಲಭ್ಯವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ.

WaBetaInfo ವರದಿಯ ಪ್ರಕಾರ, ವಾಟ್ಸ್​ಆ್ಯಪ್​​ ಬ್ಯಾಕಪ್‌ಗಳಿಗಾಗಿ ಗೂಗಲ್ ಅನಿಯಮಿತ ಸಂಗ್ರಹಣೆಯನ್ನು ನೀಡುವುದನ್ನು ನಿಲ್ಲಿಸಬಹುದು. ಬದಲಾಗಿ, ವಾಟ್ಸ್​ಆ್ಯಪ್​​ ಬಳಕೆದಾರರನ್ನು ಸೀಮಿತ ಯೋಜನೆಗೆ ಬದಲಾಯಿಸಲು ಕೇಳಬಹುದು- ಪ್ರತಿ ಬಳಕೆದಾರರಿಗೆ 2000MB ಸಂಗ್ರಹ ಸಾಮರ್ಥ್ಯ ಸಿಗಬಹುದು ಎಂದು ಅಂದಾಜಿಸಿದೆ. ಅಂದಹಾಗೆಯೇ, ವಾಬೇಟಾ ಇನ್ಫೋ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ವಾಟ್ಸ್​ಆ್ಯಪ್ ಮುಂಬರುವ ವೈಶಿಷ್ಟ್ಯಗಳು ಮತ್ತು ನವೀಕರಣಗಳನ್ನು ಟ್ರ್ಯಾಕ್ ಮಾಡುತ್ತದೆ.

ಎಲ್ಲಾದರೂ ವಾಟ್ಸ್​ಆ್ಯಪ್ ಬ್ಯಾಕಪ್‌ ಮಿತಿಯನ್ನು ಮೀರಿದರೆ, ಅದು ನಿಮ್ಮ ಡ್ರೈವ್ ಕೋಟಾದ ವಿರುದ್ಧವಾಗಬಹುದು. ಮುಂಬರುವ ಬ್ಯಾಕಪ್ ಸೈಜ್ ಮ್ಯಾನೇಜರ್ ನಿಮ್ಮ ವಾಟ್ಸ್​ಆ್ಯಪ್ ಚಾಟ್ ಬ್ಯಾಕಪ್‌ನಲ್ಲಿ ಫೋಟೋಗಳು, ಆಡಿಯೋ, ವಿಡಿಯೋಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಮಾಧ್ಯಮಗಳನ್ನು ಸೇರಿಸಲು ಅಥವಾ ಹೊರಗಿಡಲು ಆಯ್ಕೆ ಮಾಡುತ್ತದೆ. ಆಂಡ್ರಾಯ್ಡ್‌ನಲ್ಲಿ ವಾಟ್ಸ್​ಆ್ಯಪ್ ಬೀಟಾ 2.21.21.7 ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. ಇದು ಇನ್ನೂ ಬೀಟಾ ಪರೀಕ್ಷಕರಿಗೆ ಲಭ್ಯವಿಲ್ಲದಿರಬಹುದು. ಆದರೆ, ಶೀಘ್ರದಲ್ಲೇ ಇತಂಹ ಬದಲಾವಣೆಯು ವಾಟ್ಸ್ಆಪ್ ಬಳಕೆದಾರರಿಗೆ ಕಾಣಲಿದೆ ಎಂದು ವರದಿಯಾಗಿದೆ,

ವಾಟ್ಸ್​ಆ್ಯಪ್ ಚಾಟ್​​ ಬ್ಯಾಕಪ್​ ಸಮಸ್ಯೆ ನಿರ್ವಹಣೆಗಾಗಿ ಕೆಲಸ ಮಾಡುತ್ತಿದೆ. ಮಾತ್ರವಲ್ಲದೆ, ಅದಕ್ಕೆಂದೇ ಹೊಸ ವಿಭಾಗವೊಂದನ್ನು ಪರಿಚಯಿಸಲಿದೆ. ಅದರ ಮೂಲಕ ಬ್ಯಾಕಪ್​ ಗಾತ್ರವನ್ನು ನಿರ್ವಹಿಸಲು ಅನುಮತಿಸಲಿದೆ. ಮತ್ತೊಂದು ವಿಚಾರವೆಂದರೆ ವಾಟ್ಸ್​ಆ್ಯಪ್​ ಬ್ಯಾಕಪ್​ಗಾಗಿ ಗೂಗಲ್​ ಡ್ರೈವ್​ ಬೆಂಬಲ ಪಡೆದಿತ್ತು. ಆದರೆ ಒಂದು ವೇಳೆ ವಾಟ್ಸ್​ಆ್ಯಪ್​ ತನ್ನದೇ ಹೊಸ ವಿಭಾಗ ತೆರೆದರೆ ಈ ಸಮಸ್ಯೆ ನಿವಾರಣೆಯಾಗಲಿದೆ.

ವಾಟ್ಸ್​ಆ್ಯಪ್ ಬ್ಯಾಕಪ್‌ಗಳು ಆರಂಭದಲ್ಲಿ ಗೂಗಲ್ ಡ್ರೈವ್ ಶೇಖರಣಾ ಕೋಟಾದ ಒಂದು ಭಾಗವಾಗಿತ್ತು. ಆದರೆ 2018 ರಲ್ಲಿ ಫೇಸ್‌ಬುಕ್ ಒಡೆತನದ ಪ್ಲಾಟ್‌ಫಾರ್ಮ್ ಗೂಗಲ್‌ನೊಂದಿಗೆ ಪಾಲುದಾರಿಕೆ ಹೊಂದಿದಾಗ ಗೂಗಲ್ ಡ್ರೈವ್‌ನಲ್ಲಿ ಶೇಖರಣಾ ಕೋಟಾದಿಂದ ಸ್ವತಂತ್ರವಾಗಿ ವಾಟ್ಸ್​ಆ್ಯಪ್ ಬ್ಯಾಕಪ್‌ಗಳನ್ನು ನೀಡುತ್ತ ಬರುತ್ತಿದೆ.

OnePlus 9RT: ಭರ್ಜರಿ ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ಬಿಡುಗಡೆ ಆಯಿತು ಬಲಿಷ್ಠ ಒನ್‌ಪ್ಲಸ್‌ 9RT ಸ್ಮಾರ್ಟ್​ಫೋನ್

Best SmartPhones: 10,000 ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

(Google could soon limit WhatsApp backups for WhatsApp users)