Android KitKat: ಆಗಸ್ಟ್ 1 ರಿಂದ ಕಾರ್ಯನಿರ್ವಹಿಸುವುದಿಲ್ಲ ಈ ಸ್ಮಾರ್ಟ್​ಫೋನ್​ಗಳು: ನಿಮ್ಮ ಬಳಿ ಇದೆಯೇ ನೋಡಿ

ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ (Android KitKat) ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ ಎನ್ನಲಾಗಿದೆ.

Android KitKat: ಆಗಸ್ಟ್ 1 ರಿಂದ ಕಾರ್ಯನಿರ್ವಹಿಸುವುದಿಲ್ಲ ಈ ಸ್ಮಾರ್ಟ್​ಫೋನ್​ಗಳು: ನಿಮ್ಮ ಬಳಿ ಇದೆಯೇ ನೋಡಿ
Android Smartphone

Updated on: Jul 27, 2023 | 12:22 PM

ಮುಖ್ಯಾಂಶಗಳು

  • ಆಗಸ್ಟ್ 1 ರಿಂದ ಕಾರ್ಯನಿರ್ವಹಿಸುವುದಿಲ್ಲ ಈ ಸ್ಮಾರ್ಟ್​ಫೋನ್​
  • ನಿಮ್ಮ ಬಳಿ ಇದೆಯೇ ಈ ಸ್ಮಾರ್ಟ್​ಫೋನ್​
  • ಯಾವುದೇ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ

ನೀವು ಸ್ಮಾರ್ಟ್​ಫೋನ್ (Smartphone) ಬಳಕೆದಾರರಾಗಿದ್ದರೆ, ಆಘಾತಕಾರಿ ಸುದ್ದಿಯೊಂದಿದೆ. ಮುಂದಿನ ತಿಂಗಳು ಆಗಸ್ಟ್ 1 ರಿಂದ ಕೆಲವು ಸ್ಮಾರ್ಟ್‌ಫೋನ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಕೆಲ ಆಂಡ್ರಾಯ್ಡ್ ಸ್ಮಾರ್ಟ್​ಫೋನುಗಳಿಗೆ ಗೂಗಲ್ (Google) ಬೆಂಬಲಿಸುವುದಿಲ್ಲ. ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ (Android KitKat) ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ ಎನ್ನಲಾಗಿದೆ. ಇದರಿಂದ ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಬಳಿಕ ಯಾವುದೇ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಡಾಟಾ ಸುರಕ್ಷತೆಯಲ್ಲಿ ಇರುವುದಿಲ್ಲ.

ಈ ಫೋನ್ ಸ್ಕ್ರ್ಯಾಪ್ ಆಗುತ್ತದೆ:

ಕಿಟ್‌ಕ್ಯಾಟ್ ಆಂಡ್ರಾಯ್ಡ್ ಆವೃತ್ತಿಯನ್ನು 2013 ರಲ್ಲಿ ಪ್ರಾರಂಭಿಸಲಾಯಿತು. ನಿಮ್ಮ ಸ್ಮಾರ್ಟ್‌ಫೋನ್ ಕಿಟ್‌ಕ್ಯಾಟ್ ಅಥವಾ ಆಂಡ್ರಾಯ್ಡ್‌ನ ಹಿಂದಿನ ಆವೃತ್ತಿಯ ಮೂಲಕ ಕೆಲಸ ಮಾಡುತ್ತಿದ್ದರೆ, ಗೂಗಲ್ ತನ್ನ ಬೆಂಬಲವನ್ನು ನಿಲ್ಲಿಸಲಿದೆ. ಸರಳವಾಗಿ ಹೇಳುವುದಾದರೆ, ಸುಮಾರು 10 ವರ್ಷಗಳಷ್ಟು ಹಳೆಯದಾದ ಸ್ಮಾರ್ಟ್​ಫೋನ್​ಗಳನ್ನು ಗೂಗಲ್ ಸಿಸ್ಟಮ್ ಕಾರ್ಯನಿರ್ವಹಿಸುವುದಿಲ್ಲ. ವರದಿಗಳ ಪ್ರಕಾರ, ಆಗಸ್ಟ್ 1 ರಿಂದ ದೇಶಾದ್ಯಂತ ಗೂಗಲ್ ಬೆಂಬಲವನ್ನು ನಿಲ್ಲಿಸಲಿದೆ.

Twitter New Logo: ಹಕ್ಕಿ ಹೋಯ್ತು, ಎಕ್ಸ್ ಬಂತು.. ಟ್ವಿಟರ್ ಹೊಸ ಲೋಗೊ ನೋಡಿ!

ಇದನ್ನೂ ಓದಿ
Samsung Galaxy Z Fold 5 vs Galaxy Z Flip 5: ಸ್ಯಾಮ್​ಸಂಗ್ ಈವೆಂಟ್​ನಲ್ಲಿ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಬಿಡುಗಡೆ: ಬೆಚ್ಚಿ ಬೀಳಿಸುವ ಫೀಚರ್ಸ್
Realme C51: ಸ್ಟೈಲಿಶ್ ಮಾತ್ರವಲ್ಲ, ಬೆಲೆಯೂ ಕಡಿಮೆ.. ಮತ್ತೊಂದು ಲೇಟೆಸ್ಟ್ ರಿಯಲ್​ಮಿ ಫೋನ್
Xiaomi Smart TV: ಲೇಟೆಸ್ಟ್ ಟೆಕ್ನಾಲಜಿ ಶಓಮಿ ಸ್ಮಾರ್ಟ್ ಟಿವಿ ಬಿಡುಗಡೆ
Tecno Pova Neo 3: ಹೊಸ ವಿನ್ಯಾಸದಲ್ಲಿ ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇರಿಸಿದ ಟೆಕ್ನೋ ಫೋನ್

ಇದು ಯಾರಿಗೆ ಅನ್ವಯವಾಗುತ್ತದೆ?:

ವರದಿಯ ಪ್ರಕಾರ, ಪ್ರಸ್ತುತ ಕೇವಲ ಶೇ. 1 ರಷ್ಟು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆಂಡ್ರಾಯ್ಡ್ ಸಿಸ್ಟಮ್ ಅನ್ನು ಆಧರಿಸಿವೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್​ನ ಯಾವ ಸೇವೆಗಳು ಕೆಲಸ ಮಾಡುವುದಿಲ್ಲ. ಗೂಗಲ್ ಪ್ಲೇ ಸ್ಟೋರ್ ಕೂಡ ಓಪನ್ ಆಗುವುದಿಲ್ಲ.

ಸುರಕ್ಷಿತವಾಗಿರುವುದಿಲ್ಲ:

ಗೂಗಲ್ ಪ್ಲೇ ಬೆಂಬಲವನ್ನು ನಿಲ್ಲಿಸಿದಾಗ, ಆಪರೇಟಿಂಗ್ ಸಿಸ್ಟಮ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ಆಫ್ ಆಗಿ ಬಿಡುತ್ತದೆ. ನಿಮ್ಮ ಫೋನ್ ಆ ಸಮಯದಲ್ಲಿ ಸುರಕ್ಷಿತ ಅಲ್ಲ ಎನ್ನಬಹುದು. ಬಳಕೆಯ ವಿಷಯದಲ್ಲಿ ಈ ಫೋನ್ ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ. ಹೀಗಿದ್ದಾಗ ನಿಮ್ಮ ಫೋನ್ ಅನ್ನು ಬದಲಾಯಿಸುವುದು ಉತ್ತಮ ಆಯ್ಕೆಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us