ಗೂಗಲ್ (Google) ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 6 (Google Pixel 6) ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಸಜ್ಜಾಗಿವೆ. ಈ ಸರಣಿಯಲ್ಲಿ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಫೋನ್‌ಗಳು ಒಳಗೊಂಡಿವೆ. ಇದರ ಪ್ರಚಾರಕ್ಕಾಗಿ ಗೂಗಲ್ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಜಪಾನ್ನಲ್ಲಿ ಗೂಗಲ್ ತನ್ನ ಪಿಕ್ಸೆಲ್ 6 ಸರಣಿಯ ಸ್ಮಾರ್ಟ್ಫೋನ್ನ ಪ್ರಚಾರಕ್ಕಾಗಿ 10,000 ಆಲೂ ಚಿಪ್ಸ್ಗಳನ್ನು (Potato Chips) ಮಾರಾಟ ಮಾಡಿದೆ. ವಿವಿಧ ಬಣ್ಣಗಳ ಪಕೆಟ್ನಲ್ಲಿ ಚಿಪ್ಸ್ ಅನ್ನು ಮಾರಾಟ ಮಾಡುತ್ತಿರುವ ಗೂಗಲ್ ಇದೇ ಕಲರ್ನಲ್ಲಿ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಕೂಡ ಬರಲಿದೆ.
ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್‌ಗಳು ಈ ಹಿಂದೆ ಬಿಡುಗಡೆಯಾಗಿದ್ದ ಪಿಕ್ಸೆಲ್ ಫೋನುಗಳಿಗೆ ಹೋಲಿಸಿದರೆ ತುಂಬ ವಿಭಿನ್ನವಾಗಿವೆ. ಹೊಸ ವಿನ್ಯಾಸದ ಜೊತೆಗೆ ಕಂಪನಿಯು ಈ ಫೋನುಗಳಿಗೆ ಆ್ಯಪಲ್ ರೂಟ್ ಮತ್ತು ಫೋನ್‌ಗೆ ಶಕ್ತಿ ಒದಗಿಸುವ ತನ್ನದೇ ಆದ ಸ್ವಂತ ಟೆನ್ಸಾರ್ ಎಂಬ ಎಸ್ಒಎಸ್ ಸೇರಿಸಿದೆ.
ಈ ಹೊಸ ಫೋನ್‌ಗಳ ವಿನ್ಯಾಸದಲ್ಲಿ ಮತ್ತೊಂದು ಗಮನಿಸಬಹುದಾದ ಸಂಗತಿ ಎಂದರೆ, ಕ್ಯಾಮೆರಾ ಸೆಟ್‌ಅಪ್. ಗೂಗಲ್ ಫೋನ್ ಹಿಂಬದಿಯಲ್ಲಿ ಸ್ಟ್ರಿಪ್‌ವೊಂದನ್ನು ಸೇರಿಸಲಾಗಿದೆ. ಇದೇ ಸ್ಟ್ರಿಪ್‌ನಲ್ಲಿ ಕ್ಯಾಮೆರಾಗಳನ್ನು ಪಿಕ್ಸ್ ಮಾಡಲಾಗಿದೆ. ಕಂಪನಿಯು ಈ ಸ್ಟ್ರಿಪ್ ಅನ್ನು ಕ್ಯಾಮೆರಾ ಬಾರ್ ಎಂದು ಕರೆದಿದೆ.
ಪಿಕ್ಸೆಲ್ ಫೋನುಗಳು ಡುಯಲ್ ಟೋನ್ ವಿನ್ಯಾಸವನ್ನು ಹೊಂದಿದ್ದು, ಬಲ ಬದಿಯಲ್ಲಿ ಪವರ್ ಮತ್ತು ವಾಲೂಮ್ ಬಟನ್‌ಗಳಿದ್ದರೆ, ಎಡು ಬದಿ ಸಂಪೂರ್ಣವಾಗಿ ಖಾಲಿ ಬಿಡಲಾಗಿದೆ. ಪಿಕ್ಸೆಲ್ 6 ಪ್ರೋ ಮಾಡೆಲ್, ಪಾಲಿಸ್ಡ್ ಅಲ್ಯುಮಿನಿಯಂ ಫ್ರೇಮ್ ಹೊಂದಿದರೆ, ನಾನ್ ಪ್ರೋ ಮಾಡೆಲ್ ಪಿಕ್ಸೆಲ್ ಮೇಟ್ ಅಲ್ಯುಮಿನಿಯಂ ಫಿನಿಶ್‌ನೊಂದಿಗೆ ಬರುತ್ತದೆ. ಸೆಲ್ಫಿ ಕ್ಯಾಮೆರಾಗಾಗಿ ಕೇಂದ್ರ ಭಾಗದಲ್ಲಿ ಸಿಂಗಲ್ ಹೋಲ್ ಪಂಚ್ ಕಟೌಟ್ ಇದೆ.
ಟೆನ್ಸರ್ ಎಂಬ ಎಸ್‌ಒಎಸ್ ಅನ್ನು ಗೂಗಲ್ ಅಭಿವೃದ್ಧಿಪಡಿಸಿದ್ದು, ಇದೇ ಎಸ್ಒಎಸ್ ಅನ್ನು ಕಂಪನಿಯು ಹೊಸ ಪಿಕ್ಸೆಲ್ ಫೋನುಗಳಲ್ಲಿ ಬಳಸಿದೆ. ಟೆನ್ಸರ್ ಕಂಪ್ಯೂಟೇಶನಲ್ ಫೋಟೋಗ್ರಫಿ ಮಾದರಿಗಳಿಗೆ ಬಂದಾಗ ಸಂಪೂರ್ಣವಾಗಿ ಹೊಸ ವೈಶಿಷ್ಟ್ಯಗಳು, ಜೊತೆಗೆ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳಿಗೆ ಸುಧಾರಣೆಗಳನ್ನು ಅನುಮತಿಸುತ್ತದೆ. ಇದು ಹೊಸ ಸೆಕ್ಯುರಿಟಿ ಕೋರ್ ಮತ್ತು ಟೈಟಾನ್ ಎಂ 2 ಸೆಕ್ಯುರಿಟಿ ಚಿಪ್‌ನೊಂದಿಗೆ ಬರುತ್ತದೆ.
ಪಿಕ್ಸೆಲ್ 6 ಫೋನು 6.7 ಇಂಚ್ ಕ್ಯೂಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಿಂಬದಿಯಲ್ಲಿ ಸೆಟಪ್ ಹೊಸ ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿರುವ ಸೆಕೆಂಡರಿಕ್ಯಾಮೆರಾ ಮತ್ತು 4X ಆಪ್ಟಿಕಲ್-ಜೂಮ್ ಮಡಿಸಿದ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಖ್ಯ ವೈಡ್-ಆಂಗಲ್ ಕ್ಯಾಮೆರಾ150 ಪ್ರತಿಶತ ಹೆಚ್ಚು ಬೆಳಕನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
Jio: 3GB ಡೇಟಾ ಸಿಗುವ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
Airtel vs BSNL vs Jio: ಪ್ರತಿದಿನ 1.5 GB ಡೇಟಾ ಸಿಗುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್
(Google Sold 10000 potato chips in Japan to promotion for Pixel 6 series smartphones)