Smartphones: ಹಬ್ಬದ ಪ್ರಯುಕ್ತ ಈ ತಿಂಗಳು ಬಿಡುಗಡೆ ಆಗಲಿರುವ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ

| Updated By: Vinay Bhat

Updated on: Oct 01, 2022 | 3:01 PM

ಅಕ್ಟೋಬರ್ ತಿಂಗಳಲ್ಲಿ ಹಬ್ಬದ ಪ್ರಯುಕ್ತ ಆಕರ್ಷಕ ಮೊಬೈಲ್​ಗಳು ಬಿಡುಗಡೆ ಆಗುವುದರಲ್ಲಿದೆ. ಮುಖ್ಯವಾಗಿ ದೀಪಾವಳಿ ಹಬ್ಬ ಇರುವುದರಿಂದ ಪ್ರಸಿದ್ಧ ಮೊಬೈಲ್ ಕಂಪನಿಗಳು ಕಡಿಮೆ ಬೆಲೆಗೆ ಫೋನನ್ನು ಲಾಂಚ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

Smartphones: ಹಬ್ಬದ ಪ್ರಯುಕ್ತ ಈ ತಿಂಗಳು ಬಿಡುಗಡೆ ಆಗಲಿರುವ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ
google pixel 7
Follow us on

ನೀವು ಹೊಸ ಸ್ಮಾರ್ಟ್​ಫೋನ್ (Smartphone) ಖರೀದಿಸುವ ಪ್ಲಾನ್​ನಲ್ಲಿದ್ದರೆ ಕೊಂಚ ದಿನ ಕಾಯಿರಿ. ಯಾಕೆಂದರೆ ಅಕ್ಟೋಬರ್ ತಿಂಗಳಲ್ಲಿ ಹಬ್ಬದ ಪ್ರಯುಕ್ತ ಆಕರ್ಷಕ ಮೊಬೈಲ್​ಗಳು ಬಿಡುಗಡೆ ಆಗುವುದರಲ್ಲಿದೆ. ಮುಖ್ಯವಾಗಿ ದೀಪಾವಳಿ (Diwali 2022) ಹಬ್ಬ ಇರುವುದರಿಂದ ಪ್ರಸಿದ್ಧ ಮೊಬೈಲ್ ಕಂಪನಿಗಳು ಕಡಿಮೆ ಬೆಲೆಗೆ ಫೋನನ್ನು ಲಾಂಚ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಇಂದು ನಾವು ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆಗಲಿರುವ ಸ್ಮಾರ್ಟ್‌ಫೋನ್ ಬಗ್ಗೆ ಹೇಳಲಿದ್ದೇವೆ. ಇದರಲ್ಲಿ ಹಾಟೆಸ್ಟ್ ಸ್ಮಾರ್ಟ್‌ಫೋನ್ ಗೂಗಲ್ ಪಿಕ್ಸೆಲ್ 7 ಸರಣಿಯಾಗಿದೆ. ಕ್ಯಾಮೆರಾದಿಂದಲೇ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಫೋನ್ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದಲ್ಲದೆ, ವಿವೋ, ಶವೋಮಿ ಮತ್ತು ಒಪ್ಪೋ (OPPO) ನಂತಹ ಬ್ರ್ಯಾಂಡ್‌ಗಳು ಕೂಡ ಬಿಡುಗಡೆ ಆಗಲಿದೆ.

ಗೂಗಲ್ ಪಿಕ್ಸೆಲ್ 7 ಸರಣಿ ಇದೇ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದರ ಸಂಭವನೀಯ ಬೆಲೆ 70 ಸಾವಿರ ರೂಪಾಯಿ. ಪಿಕ್ಸೆಲ್ 7 ಸರಣಿಯ ಅಡಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಇವೆ. ಅವುಗಳಲ್ಲಿ ಒಂದು ಗೂಗಲ್ ಪಿಕ್ಸೆಲ್ 7 ಮತ್ತು ಇನ್ನೊಂದು ಪಿಕ್ಸೆಲ್ 7 ಪ್ರೊ. ಈ ಫೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಇದು ಅತ್ಯದ್ಭುತ ಫೋಟೋವನ್ನು ಸೆರೆ ಹಿಡಿಯುತ್ತದೆ. 11-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ನಿರೀಕ್ಷಿಸಲಾಗಿದೆ. ಅಲ್ಲದೆ, ಇದು 6.3-ಇಂಚಿನ 90Hz ಡಿಸ್ ಪ್ಲೇಯನ್ನು ಹೊಂದಿದೆ. ಗೂಗಲ್ ನ ಟೆನ್ಸರ್ ಜಿ2 ಪ್ರೊಸೆಸರ್ ಅಳವಡಿಸಲಾಗಿದೆ.

Google Pixel 7 Pro ಬೆಲೆ 75,000 ರೂ. ಇರಬಹುದೆಂದು ಹೇಳಲಾಗಿದೆ. ಈ ಫೋನ್ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ಹಿಂಭಾಗ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದುಕೂಡ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುತ್ತದೆ, ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 48-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅಳವಡಿಸಲಾಗಿದೆ. ಇದು 6.7-ಇಂಚಿನ QHD+ OLED ಡಿಸ್ ಪ್ಲೇ ಪ್ಯಾನೆಲ್ ಅನ್ನು ಹೊಂದಿದೆ. 120 Hz ನ ರಿಫ್ರೆಶ್ ದರ, ಟೆನ್ಸರ್ G2 ಪ್ರೊಸೆಸರ್, 12 GB RAM ಮತ್ತು 128 GB ಮತ್ತು 256 GB ಆಂತರಿಕ ಸಂಗ್ರಹಣೆಯೊಂದಿಗೆ ಅನಾವರಣಗೊಳ್ಳಲಿದೆ.

ಇದನ್ನೂ ಓದಿ
Infinix Note 12i: ಅತಿ ಕಡಿಮೆ ಬೆಲೆಗೆ ಇನ್ಫಿನಿಕ್ಸ್‌ ನೋಟ್ 12i 2022 ಸ್ಮಾರ್ಟ್‌ಫೋನ್‌ ಬಿಡುಗಡೆ: ಏನು ವಿಶೇಷತೆ?
5G in India: ಭಾರತ 5ಜಿ ಸೇವೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ
5G Service: ಭಾರತದಲ್ಲಿ 5G ಯುಗ ಆರಂಭ: ನಿಮ್ಮ ಮೊಬೈಲ್​ಗೆ 5G ಸಪೋರ್ಟ್ ಆಗುತ್ತಾ? ಹೀಗೆ ಪರಿಶೀಲಿಸಿ
5G Service: ನೀವು 5ಜಿ ಸೇವೆ ಬಳಕೆ ಮಾಡಲು SIM ಬದಲಿಸುವ ಅವಶ್ಯಕತೆ ಇಲ್ಲ; ಯಾಕೆ ಎಂಬುದು ಇಲ್ಲಿದೆ ನೋಡಿ

OnePlus Nord 3 ಕೂಡ ಇದೇ ತಿಂಗಳು ಲಾಂಚ್ ಆಗಲಿದೆ. ಇದರ ಸಂಭವನೀಯ ಬೆಲೆ 33 ಸಾವಿರ ರೂಪಾಯಿಗಳು. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು 6.7-ಇಂಚಿನ OLED ಡಿಸ್ ಪ್ಲೇಯನ್ನು ಹೊಂದಿದೆ. 120 Hz ನ ರಿಫ್ರೆಶ್ ದರದಿಂದ ಕೂಡಿದೆ. ಈ ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದು 50 ಮೆಗಾಪಿಕ್ಸೆಲ್‌ಗಳ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. 16 ಅಥವಾ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಬಹುದು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 8100 ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇನ್ನು OPPO A77s ಕೂಡ ಲಾಂಚ್ ಆಗಲು ತಯಾರಾಗಿದ್ದು ಇದರ ಬೆಲೆ ಅಂದಾಜಿ 20 ಸಾವಿರ ರೂಪಾಯಿ ಇರಬಹುದು. ಇದುಕೂಡ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು ಮೀಡಿಯಾ ಟೆಕ್ ಹೀಲಿಯೊ G35 ಪ್ರೊಸೆಸರ್‌ನೊಂದಿಗೆ ಬರುತ್ತದೆ. 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ, ಇದು 33 ವ್ಯಾಟ್ ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ. 6.5-ಇಂಚಿನ HD+ IPS LCD ಪ್ಯಾನೆಲ್ ಅನ್ನು ಹೊಂದಿದೆ.

POCO M5s ಬೆಲೆ 16 ಸಾವಿರ ರೂಪಾಯಿ ಇರಬಹುದು. ಈ ಫೋನ್ ಕುರಿತು ಪೋಸ್ಟರ್ ಕಾಣಿಸಿಕೊಂಡಿದ್ದು, ಇದರಲ್ಲಿ 1 TB ವರೆಗಿನ SD ಕಾರ್ಡ್ ಅನ್ನು ಬಳಸಬಹುದಾಗಿದೆ. ಅಲ್ಲದೆ, ಅಮೋಲ್ಡ್ ಪ್ಯಾನಲ್ ನೀಡಲಾಗಿದೆ. ಮೀಡಿಯಾ ಟೆಕ್ ಹೀಲಿಯೊ G95 ಚಿಪ್‌ಸೆಟ್ ಅನ್ನು ಇದರಲ್ಲಿ ಬಳಸಲಾಗಿದೆ. 5000 mAh ಬ್ಯಾಟರಿ ಇರಲಿದೆಯಂತೆ.

Published On - 3:01 pm, Sat, 1 October 22