ಇಂದಿನ ಮಾರುಕಟ್ಟೆಯಲ್ಲಿ 15,000 ರೂ. ಗಿಂತ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ನೀವು ಕಾಣಬಹುದು. ಈ ಫೋನುಗಳು ಆಕರ್ಷಕವಾದ ಡಿಸ್ ಪ್ಲೇ, ಬಲಿಷ್ಠ ಪ್ರೊಸೆಸರ್‌ಗಳು ಮತ್ತು ಕನಿಷ್ಠ 4GB RAM ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತದಲ್ಲಿ ಈರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡಲು ವಿವಿಧ ಬ್ರ್ಯಾಂಡ್ಗಳಿವೆ. ಇವುಗಳಲ್ಲಿ, ಸ್ಯಾಮ್ಸಂಗ್ ಗ್ಯಾಲಕ್ಸಿ M14 5G ಯಿಂದ ಹಿಡಿದು ಐಕ್ಯೂ Z6 ಲೈಟ್ 5G ವರೆಗೆ ಇದೆ. ಹಾಗಾದರೆ, ಸದ್ಯ ಅಮೆಜಾನ್‌ನಲ್ಲಿ (Amazon) 15,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.
ರೆಡ್ಮಿ 12 5G (6GB 128GB) ಪ್ರಸ್ತುತ ಅಮೆಜಾನ್‌ನಲ್ಲಿ 13,499ರೂ. ಗೆ ಸೇಲ್ ಆಗುತ್ತಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್ ಅನ್ನು ಹೊಂದಿದೆ. 6.71-ಇಂಚಿನ FHD+ ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ದರ ಇದೆ. ಜೊತೆಗೆ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ, ನೀವು ಎಷ್ಟೇ ಉಪಯೋಗಿಸಿದರೂ ಈ ಫೋನ್ ಪೂರ್ಣ ದಿನ ಬ್ಯಾಟರಿ ಪವರ್ ನೀಡುತ್ತದೆ. ಕ್ಯಾಮೆರಾ ಸಾಮರ್ಥ್ಯಗಳ ವಿಷಯದಲ್ಲಿ, ರೆಡ್ಮಿ 12 5G ಹಿಂಭಾಗ ಡ್ಯುಯಲ್-ಕ್ಯಾಮೆರಾ ಸೆಟಪ್ ಇದ್ದು 50MP ಪ್ರಾಥಮಿಕ ಸಂವೇದಕದೊಂದಿಗೆ ಬರುತ್ತದೆ.
ವಿವೋದಿಂದ ಬಲಿಷ್ಠ ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ: ಪ್ರೊಸೆಸರ್, ಕ್ಯಾಮೆರಾ ಯಾವುದು ನೋಡಿ
ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ 14,990 ರೂ. ಗೆ ಲಭ್ಯವಿದೆ. ಇದು ಎಕ್ಸಿನೊಸ್ 1330 SoC ನಿಂದ ನಡೆಸಲ್ಪಡುತ್ತದೆ ಮತ್ತು 4GB ಯ RAM ಮತ್ತು 128GB ಸಂಗ್ರಹಣೆಯ ಆಯ್ಕೆಯೊಂದಿಗೆ ಬರುತ್ತದೆ. ಇದರ ಡಿಸ್ ಪ್ಲೇ 6.6-ಇಂಚಿನ FHD+ ಪ್ಯಾನೆಲ್ ಆಗಿದ್ದು 90Hz ರಿಫ್ರೆಶ್ ದರವನ್ನು ಹೊಂದಿದೆ. 6,000mAh ಬ್ಯಾಟರಿಯನ್ನು ಸಹ ಹೊಂದಿದೆ, 25W ನಲ್ಲಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ 2MP ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳ ಜೊತೆಗೆ 50MP ಪ್ರಾಥಮಿಕ ಸಂವೇದಕವನ್ನು ಹೊಂದಿದೆ.
ವಿವೋ T2x 5G ಅನ್ನು ಅಮೆಜಾನ್‌ನಲ್ಲಿ ನೀವು 14,990 ರೂ. ಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ನಿಂದ ಚಾಲಿತವಾಗಿದೆ. FHD+ ರೆಸಲ್ಯೂಶನ್‌ನೊಂದಿಗೆ 6.58-ಇಂಚಿನ FHD+ IPS LCD ಡಿಸ್ ಪ್ಲೇ ಹೊಂದಿದೆ. ಮುಂಭಾಗದಲ್ಲಿ ಇದು 50MP ಪ್ರಾಥಮಿಕ ಸಂವೇದಕ ಮತ್ತು 2MP ಬೊಕೆ ಸೆಕೆಂಡರಿ ಸಂವೇದಕವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ರಿಯಲ್ ಮಿ 9i ಸ್ಮಾರ್ಟ್‌ಫೋನ್ ಬೆಲೆ 12,399 ರೂ ಆಗಿದೆ. ಈ ಫೋನ್ 90Hz IPS LCD ಡಿಸ್ ಪ್ಲೇ ಹೊಂದಿದ್ದು, 5,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಕ್ವಾಲ್ಕಂ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್, 50MP ಪ್ರಾಥಮಿಕ ಕ್ಯಾಮೆರಾ ಆಯ್ಕೆ ಅಳವಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಬೆಲೆ 13,999 ರೂ. ಇದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆ 5G-ಸಾಮರ್ಥ್ಯದ ಮೊಬೈಲ್ನಲ್ಲಿ ಒಂದಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4-ಸರಣಿ SoC ಪ್ರೊಸೆಸರ್ ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ