Smart Water Bottle: ನೀರು ಕುಡಿಯಲೂ ಕೂಡ ಬಂತು ಆ್ಯಪಲ್ ಸ್ಮಾರ್ಟ್​ ಬಾಟಲ್

| Updated By: ಝಾಹಿರ್ ಯೂಸುಫ್

Updated on: Apr 27, 2022 | 3:34 PM

Apple Smart Water Bottle: ಸದ್ಯ ಈ ಸ್ಮಾರ್ಟ್​ ವಾಟರ್​ ಬಾಟಲ್​ ಅನ್ನು ಅಮೆರಿಕಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಅದರಂತೆ ಆ್ಯಪಲ್ ಸೈಟ್‌ನಲ್ಲಿ ಇದರ ಬೆಲೆ US $ 59.95.

Smart Water Bottle: ನೀರು ಕುಡಿಯಲೂ ಕೂಡ ಬಂತು ಆ್ಯಪಲ್ ಸ್ಮಾರ್ಟ್​ ಬಾಟಲ್
Smart Water Bottle
Follow us on

ಐಫೋನ್, ಐಪ್ಯಾಡ್, ಐಮ್ಯಾಕ್ ಮೂಲಕ ಸಂಚಲನ ಸೃಷ್ಟಿಸಿದ್ದ ವಿಶ್ವದ ದೈತ್ಯ ಟೆಕ್ ಕಂಪೆನಿ ಆ್ಯಪಲ್ ಇದೀಗ ಸ್ಮಾರ್ಟ್​ ಬಾಟಲ್ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ. HidrateSpark ಕಂಪೆನಿ ವಿನ್ಯಾಸಗೊಳಿಸಿರುವ ಹೊಸ ಸ್ಮಾರ್ಟ್​ ವಾಟರ್ ಬಾಟಲಿಯನ್ನು ಆ್ಯಪಲ್ ಕಂಪೆನಿ ಮಾರಾಟ ಮಾಡಲಿದೆ. ವಿಶೇಷ ಎಂದರೆ ಈ ಸ್ಮಾರ್ಟ್​ ವಾಟರ್ ಬಾಟಲಿ ಆ್ಯಪಲ್ ಆ್ಯಪ್​ ಅನ್ನು ಸಪೋರ್ಟ್ ಮಾಡಲಿದೆ. ಅಲ್ಲದೆ ನಿಮ್ಮ ಐಫೋನ್ , ಐಪ್ಯಾಡ್ ಮತ್ತು ಆ್ಯಪಲ್ ವಾಚ್​ಗೆ ನೀರು ಕುಡಿಯುವಂತೆ ನೋಟಿಫಿಕೇಶನ್ ಕಳುಹಿಸಲಿದೆ. ಇದರಿಂದ ನೀವು ಒಂದು ದಿನ ಎಷ್ಟು ನೀರು ಕುಡಿದಿದ್ದೀರಿ, ಮತ್ತಷ್ಟು ಕುಡಿಯಬೇಕು, ಆರೋಗ್ಯ ದೃಷ್ಟಿಯಿಂದ ಏನು ಮಾಡಬೇಕು ಎಂಬುದೆಲ್ಲಾ ತಿಳಿಯಲಿದೆ. ಅಂದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸ್ಮಾರ್ಟ್​ ವಾಟರ್​ ಬಾಟಲಿ ಕೂಡ ಬಂದಿದೆ ಎನ್ನಬಹುದು.

ಹೈಡ್ರೇಟ್ ಸ್ಪಾರ್ಕ್ ಸ್ಮಾರ್ಟ್​ ಬಾಟಲ್​ನ ವೈಶಿಷ್ಟ್ಯಗಳೇನು?

– ಈ ಸ್ಮಾರ್ಟ್ ವಾಟರ್ ಬಾಟಲ್ ಪ್ರತಿದಿನ ನೀವು ಕುಡಿಯಬೇಕಾದ ನೀರಿನ ಗುರಿಗಳನ್ನು ನಿರ್ಧರಿಸಲಿದೆ. ಪ್ರತಿಯೊಬ್ಬ ಬಳಕೆದಾರರ ದೇಹಕ್ಕೆ ಅನುಗುಣವಾಗಿ ಅದರನ್ನು ನಿರ್ಧರಿಸಲಾಗುತ್ತದೆ.

– ಚಟುವಟಿಕೆ ಮತ್ತು ದೇಹದ ಪ್ರಕಾರ, ಈ ಸ್ಮಾರ್ಟ್ ಬಾಟಲ್ ನಿಮಗೆ ನೀರು ಕುಡಿಯಲು ಸೂಚನೆಗಳನ್ನು ಕಳುಹಿಸುತ್ತದೆ.

– ಈ ಸ್ಮಾರ್ಟ್ ಬಾಟಲ್‌ನಲ್ಲಿರುವ ಸೆನ್ಸರ್‌ಗಳು ನೀವು ದಿನವಿಡೀ ಎಷ್ಟು ಮಿಲಿಲೀಟರ್ ನೀರು ಕುಡಿದಿದ್ದೀರಿ ಎಂಬುದನ್ನು ದಾಖಲಿಸುತ್ತದೆ.

– ಈ ಬಾಟಲಿಯಿಂದ ರೆಕಾರ್ಡ್ ಮಾಡಲಾದ ಎಲ್ಲಾ ಮಾಹಿತಿಯನ್ನು ನಿಮ್ಮ iPhone ಅಥವಾ iPad, Apple Watch ನಲ್ಲಿನ ಅಪ್ಲಿಕೇಶನ್‌ಗೆ ಅಪ್​ಡೇಟ್ ಮಾಡಲಾಗುತ್ತದೆ.

– ಈ ಬಾಟಲಿಯು 3 ವಿಭಿನ್ನ ಬಣ್ಣವನ್ನು ಹೊಂದಿದ್ದು, ಇದು ನಿಮ್ಮನ್ನು ನೀರು ಕುಡಿಯಲು ಪ್ರೇರೇಪಿಸುತ್ತದೆ.

– ಇನ್ನು ಬಾಟಲಿ ಕಳೆದುಹೋದರೆ ಕೂಡ ಅದರ ಲೊಕೋಷನ್ ಅನ್ನು ಕೂಡ ನೀವು ತಿಳಿದುಕೊಳ್ಳಬಹುದು.

ನೀರು ಕುಡಿದ ಸಂಪೂರ್ಣ ಡೇಟಾ:
ಉಚಿತ ಹೈಡ್ರೇಟ್ ಸ್ಮಾರ್ಟ್ ಬಾಟಲ್ ಅಪ್ಲಿಕೇಶನ್ ಸ್ಪಾರ್ಕ್ 3 ನೊಂದಿಗೆ ಸಿಂಕ್ ಆಗುತ್ತದೆ. ಒಮ್ಮೆ ನೀವು ಅದರಲ್ಲಿ ಖಾತೆಯನ್ನು ರಚಿಸಿದರೆ, ನಿಮ್ಮ ವೈಯಕ್ತಿಕ ಡೇಟಾವನ್ನು ಆ ಅಪ್ಲಿಕೇಶನ್‌ಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ನೀವು ಕುಡಿಯಬೇಕಾದ ನೀರಿನ ಟಾರ್ಗೆಟ್, ಹಾಗೂ ಇನ್ನಿತರ ಡೇಟಾ ಮತ್ತು ವೈಯಕ್ತಿಕ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಈ ಅಪ್ಲಿಕೇಶನ್ ಮೂಲಕ, ಬಳಕೆದಾರರ ಪ್ರತಿ ಸಿಪ್​ನ ದಾಖಲೆಯನ್ನು ಸಹ ದಾಖಲಿಸಲಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಈ ಅಪ್ಲಿಕೇಶನ್‌ನಲ್ಲಿ ಒಂದೇ ಸ್ಥಳದಿಂದ ಪಡೆಯಬಹುದು. ಅಲ್ಲದೆ ಈ ಡೇಟಾದ ಪ್ರಕಾರ ನಿಮ್ಮ ಆರೋಗ್ಯವನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ಬೆಲೆ ಎಷ್ಟು?
ಸದ್ಯ ಈ ಸ್ಮಾರ್ಟ್​ ವಾಟರ್​ ಬಾಟಲ್​ ಅನ್ನು ಅಮೆರಿಕಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಅದರಂತೆ ಆ್ಯಪಲ್ ಸೈಟ್‌ನಲ್ಲಿ ಇದರ ಬೆಲೆ US $ 59.95. ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ, ಸುಮಾರು 4600 ರೂ. ಆಗಿರಲಿದೆ.

 

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

 

Published On - 3:34 pm, Wed, 27 April 22