Realme GT 2: ಇಂದು ರಿಯಲ್ ಮಿ GT 2 ಮಾರಾಟ: ಮೊದಲ ಸೇಲ್ನಲ್ಲಿ ಬರೋಬ್ಬರಿ 5,000 ರೂ. ಡಿಸ್ಕೌಂಟ್
ರಿಯಲ್ ಮಿ GT 2 ಸ್ಮಾರ್ಟ್‌ಫೋನ್ ಇಂದು ಫ್ಲಿಪ್‌ಕಾರ್ಟ್ ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಿದೆ. ಮೊದಲ ಸೇಲ್ನಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಕೂಡ ನೀಡಲಾಗಿದೆ. ಹಾಗಾದ್ರೆ ಏನದು ಆಫರ್?, ಬೆಲೆ, ಫೀಚರ್ಸ್ ಏನೇನು ಎಂಬುದನ್ನು ನೋಡೋಣ.
ಪ್ರಸಿದ್ಧ ರಿಯಲ್ ಮಿ (Realme) ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ಅತ್ಯಂತ ಬಲಿಷ್ಠವಾದ ತನ್ನ ಬಹುನಿರೀಕ್ಷಿತ ರಿಯಲ್ ಮಿ ಜಿಟಿ 2 (Realme GT 2) ಸ್ಮಾರ್ಟ್‌ಫೋನ್ ಅನಾವರಣ ಮಾಡಿತ್ತು. ಸಾಕಷ್ಟು ವಿಶೇಷಗಳಿಂದ ಕೂಡಿರುವ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಅಲ್ಲದೆ ಆಕರ್ಷಕವಾದ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 65W ವೇಗದ ಚಾರ್ಜ್ ಅನ್ನು ಪ್ಯಾಕ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಇಂದು (ಏ 28) ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ (Flipkart) ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಿದೆ. ಮೊದಲ ಸೇಲ್ನಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಕೂಡ ನೀಡಲಾಗಿದೆ. ಹಾಗಾದ್ರೆ ಏನದು ಆಫರ್?, ಬೆಲೆ, ಫೀಚರ್ಸ್ ಏನೇನು ಎಂಬುದನ್ನು ನೋಡೋಣ.
ಬೆಲೆ-ಆಫರ್ ಏನು?:
ರಿಯಲ್ ಮಿ GT 2 ಸ್ಮಾರ್ಟ್‌ಫೋನ್ ಭಾರತದಲ್ಲಿ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 34,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಯ ಬೆಲೆ 38,999 ರೂ. ಆಗಿದೆ. ಇದು ಪೇಪರ್ ಗ್ರೀನ್, ಪೇಪರ್ ವೈಟ್ ಮತ್ತು ಸ್ಟೀಲ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಲಾಂಚ್ ಆಫರ್‌ನಲ್ಲಿ ನೀವು HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 5,000ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಸೇರಿದಂತೆ ರಿಯಲ್ ಮಿಯ ಅಧಿಕೃತ ವೆಬ್ಸೈಟ್ ಇಂದಿನಿಂದ ಈ ಫೋನ್ ನಿಮ್ಮದಾಗಿಸಬಹುದು.
ಏನು ವಿಶೇಷತೆ?:
ರಿಯಲ್ ಮಿ GT 2 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.62 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 888SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
Amazon Summer Sale: ಭರ್ಜರಿ ಆಫರ್ನೊಂದಿಗೆ ಮತ್ತೆ ಬರಲಿದೆ ಅಮೆಜಾನ್ ಸಮ್ಮರ್ ಸೇಲ್