Smart Water Bottle: ನೀರು ಕುಡಿಯಲೂ ಕೂಡ ಬಂತು ಆ್ಯಪಲ್ ಸ್ಮಾರ್ಟ್ ಬಾಟಲ್
Apple Smart Water Bottle: ಸದ್ಯ ಈ ಸ್ಮಾರ್ಟ್ ವಾಟರ್ ಬಾಟಲ್ ಅನ್ನು ಅಮೆರಿಕಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಅದರಂತೆ ಆ್ಯಪಲ್ ಸೈಟ್‌ನಲ್ಲಿ ಇದರ ಬೆಲೆ US $ 59.95.
ಐಫೋನ್, ಐಪ್ಯಾಡ್, ಐಮ್ಯಾಕ್ ಮೂಲಕ ಸಂಚಲನ ಸೃಷ್ಟಿಸಿದ್ದ ವಿಶ್ವದ ದೈತ್ಯ ಟೆಕ್ ಕಂಪೆನಿ ಆ್ಯಪಲ್ ಇದೀಗ ಸ್ಮಾರ್ಟ್ ಬಾಟಲ್ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ. HidrateSpark ಕಂಪೆನಿ ವಿನ್ಯಾಸಗೊಳಿಸಿರುವ ಹೊಸ ಸ್ಮಾರ್ಟ್ ವಾಟರ್ ಬಾಟಲಿಯನ್ನು ಆ್ಯಪಲ್ ಕಂಪೆನಿ ಮಾರಾಟ ಮಾಡಲಿದೆ. ವಿಶೇಷ ಎಂದರೆ ಈ ಸ್ಮಾರ್ಟ್ ವಾಟರ್ ಬಾಟಲಿ ಆ್ಯಪಲ್ ಆ್ಯಪ್ ಅನ್ನು ಸಪೋರ್ಟ್ ಮಾಡಲಿದೆ. ಅಲ್ಲದೆ ನಿಮ್ಮ ಐಫೋನ್ , ಐಪ್ಯಾಡ್ ಮತ್ತು ಆ್ಯಪಲ್ ವಾಚ್ಗೆ ನೀರು ಕುಡಿಯುವಂತೆ ನೋಟಿಫಿಕೇಶನ್ ಕಳುಹಿಸಲಿದೆ. ಇದರಿಂದ ನೀವು ಒಂದು ದಿನ ಎಷ್ಟು ನೀರು ಕುಡಿದಿದ್ದೀರಿ, ಮತ್ತಷ್ಟು ಕುಡಿಯಬೇಕು, ಆರೋಗ್ಯ ದೃಷ್ಟಿಯಿಂದ ಏನು ಮಾಡಬೇಕು ಎಂಬುದೆಲ್ಲಾ ತಿಳಿಯಲಿದೆ. ಅಂದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸ್ಮಾರ್ಟ್ ವಾಟರ್ ಬಾಟಲಿ ಕೂಡ ಬಂದಿದೆ ಎನ್ನಬಹುದು.
ಹೈಡ್ರೇಟ್ ಸ್ಪಾರ್ಕ್ ಸ್ಮಾರ್ಟ್ ಬಾಟಲ್ನ ವೈಶಿಷ್ಟ್ಯಗಳೇನು?
– ಈ ಸ್ಮಾರ್ಟ್ ವಾಟರ್ ಬಾಟಲ್ ಪ್ರತಿದಿನ ನೀವು ಕುಡಿಯಬೇಕಾದ ನೀರಿನ ಗುರಿಗಳನ್ನು ನಿರ್ಧರಿಸಲಿದೆ. ಪ್ರತಿಯೊಬ್ಬ ಬಳಕೆದಾರರ ದೇಹಕ್ಕೆ ಅನುಗುಣವಾಗಿ ಅದರನ್ನು ನಿರ್ಧರಿಸಲಾಗುತ್ತದೆ.
– ಚಟುವಟಿಕೆ ಮತ್ತು ದೇಹದ ಪ್ರಕಾರ, ಈ ಸ್ಮಾರ್ಟ್ ಬಾಟಲ್ ನಿಮಗೆ ನೀರು ಕುಡಿಯಲು ಸೂಚನೆಗಳನ್ನು ಕಳುಹಿಸುತ್ತದೆ.
– ಈ ಸ್ಮಾರ್ಟ್ ಬಾಟಲ್‌ನಲ್ಲಿರುವ ಸೆನ್ಸರ್‌ಗಳು ನೀವು ದಿನವಿಡೀ ಎಷ್ಟು ಮಿಲಿಲೀಟರ್ ನೀರು ಕುಡಿದಿದ್ದೀರಿ ಎಂಬುದನ್ನು ದಾಖಲಿಸುತ್ತದೆ.
– ಈ ಬಾಟಲಿಯಿಂದ ರೆಕಾರ್ಡ್ ಮಾಡಲಾದ ಎಲ್ಲಾ ಮಾಹಿತಿಯನ್ನು ನಿಮ್ಮ iPhone ಅಥವಾ iPad, Apple Watch ನಲ್ಲಿನ ಅಪ್ಲಿಕೇಶನ್‌ಗೆ ಅಪ್ಡೇಟ್ ಮಾಡಲಾಗುತ್ತದೆ.
– ಈ ಬಾಟಲಿಯು 3 ವಿಭಿನ್ನ ಬಣ್ಣವನ್ನು ಹೊಂದಿದ್ದು, ಇದು ನಿಮ್ಮನ್ನು ನೀರು ಕುಡಿಯಲು ಪ್ರೇರೇಪಿಸುತ್ತದೆ.
– ಇನ್ನು ಬಾಟಲಿ ಕಳೆದುಹೋದರೆ ಕೂಡ ಅದರ ಲೊಕೋಷನ್ ಅನ್ನು ಕೂಡ ನೀವು ತಿಳಿದುಕೊಳ್ಳಬಹುದು.
ನೀರು ಕುಡಿದ ಸಂಪೂರ್ಣ ಡೇಟಾ: ಉಚಿತ ಹೈಡ್ರೇಟ್ ಸ್ಮಾರ್ಟ್ ಬಾಟಲ್ ಅಪ್ಲಿಕೇಶನ್ ಸ್ಪಾರ್ಕ್ 3 ನೊಂದಿಗೆ ಸಿಂಕ್ ಆಗುತ್ತದೆ. ಒಮ್ಮೆ ನೀವು ಅದರಲ್ಲಿ ಖಾತೆಯನ್ನು ರಚಿಸಿದರೆ, ನಿಮ್ಮ ವೈಯಕ್ತಿಕ ಡೇಟಾವನ್ನು ಆ ಅಪ್ಲಿಕೇಶನ್‌ಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ನೀವು ಕುಡಿಯಬೇಕಾದ ನೀರಿನ ಟಾರ್ಗೆಟ್, ಹಾಗೂ ಇನ್ನಿತರ ಡೇಟಾ ಮತ್ತು ವೈಯಕ್ತಿಕ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಈ ಅಪ್ಲಿಕೇಶನ್ ಮೂಲಕ, ಬಳಕೆದಾರರ ಪ್ರತಿ ಸಿಪ್ನ ದಾಖಲೆಯನ್ನು ಸಹ ದಾಖಲಿಸಲಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಈ ಅಪ್ಲಿಕೇಶನ್‌ನಲ್ಲಿ ಒಂದೇ ಸ್ಥಳದಿಂದ ಪಡೆಯಬಹುದು. ಅಲ್ಲದೆ ಈ ಡೇಟಾದ ಪ್ರಕಾರ ನಿಮ್ಮ ಆರೋಗ್ಯವನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ಬೆಲೆ ಎಷ್ಟು? ಸದ್ಯ ಈ ಸ್ಮಾರ್ಟ್ ವಾಟರ್ ಬಾಟಲ್ ಅನ್ನು ಅಮೆರಿಕಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಅದರಂತೆ ಆ್ಯಪಲ್ ಸೈಟ್‌ನಲ್ಲಿ ಇದರ ಬೆಲೆ US $ 59.95. ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ, ಸುಮಾರು 4600 ರೂ. ಆಗಿರಲಿದೆ.
ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
Published On - 3:34 pm, Wed, 27 April 22