ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಹಾನರ್ ಹೊಸ ಫೋನ್ನೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಕ್ಯಾಮೆರಾ ಪ್ರಿಯರನ್ನು ದಂಗುಗೊಳಿಸುವ ಎರಡು ಮೊಬೈಲ್ಗಳನ್ನು ಪರಿಚಯಿಸಿದೆ. ಹಾನರ್ ತನ್ನ ಮ್ಯಾಜಿಕ್ ಸರಣಿ ಅಡಿಯಲ್ಲಿ ಹೊಸ ಹಾನರ್ ಮ್ಯಾಜಿಕ್ 6 ಮತ್ತು ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಪ್ರೊ ರೂಪಾಂತರವು OIS ಬೆಂಬಲದೊಂದಿಗೆ ಬರೋಬ್ಬರಿ 180 ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಸಂವೇದಕದೊಂದಿಗೆ ಬರುತ್ತದೆ. ಈ ಫೋನುಗಳ ಬೆಲೆ ಮತ್ತು ಫೀಚರ್ಸ್ ಕುರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಾನರ್ ಮ್ಯಾಜಿಕ್ 6 ಫೋನ್ 12GB + 256GB ರೂಪಾಂತರಕ್ಕೆ CNY 4,399 (ಅಂದಾಜು ರೂ 51,399) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. 16GB + 256GB ಆವೃತ್ತಿಗೆ CNY 4,699 (ಸುಮಾರು ರೂ. 54,906) ಮತ್ತು 16GB + 512GB ಕಾನ್ಫಿಗರೇಶನ್‌ಗಾಗಿ CNY 4,999 (ಸುಮಾರು ರೂ. 58,412) ಇದೆ.
Samsung Galaxy A25 5G: ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಫೋನ್ ಪರಿಚಯಿಸಿದ ಸ್ಯಾಮ್ಸಂಗ್
ಮತ್ತೊಂದೆಡೆ, ಹಾನರ್ ಮ್ಯಾಜಿಕ್ 6 ಪ್ರೊ ಬೇಸ್ 12GB + 256GB ಮಾದರಿಗೆ CNY 5,699 (ಸುಮಾರು ರೂ 66,591) ಯಿಂದ ಪ್ರಾರಂಭವಾಗುತ್ತದೆ. 16GB + 512GB ಮಾದರಿಯ ಬೆಲೆ CNY 6,199 (ಅಂದಾಜು ರೂ 72,434), 16GB + 1TB ಆವೃತ್ತಿಯ ಬೆಲೆ CNY 6,699 (ಸುಮಾರು ರೂ 79,686).
ಈ ಫೋನ್‌ಗಳು ಸೀ ಲೇಕ್ ಗ್ರೀನ್, ಕಿಲಿಯನ್ ಸ್ನೋ, ವೀಟ್ ವೇವ್ ಗ್ರೀನ್, ವೆಲ್ವೆಟ್ ಬ್ಲ್ಯಾಕ್ ಮತ್ತು ಫ್ಲೋಯಿಂಗ್ ಕ್ಲೌಡ್ ಪರ್ಪಲ್ ಬಣ್ಣಗಳಲ್ಲಿ ಬರುತ್ತವೆ. ಹಾನರ್ ಮ್ಯಾಜಿಕ್ 6, ಹಾನರ್ ಮ್ಯಾಜಿಕ್ 6 ಪ್ರೊ ಪ್ರೊ ಪ್ರಸ್ತುತ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ-ಬುಕ್ಕಿಂಗ್ಗೆ ಲಭ್ಯವಿದೆ. ಭಾರತದಲ್ಲಿ ಹಾನರ್ ಮ್ಯಾಜಿಕ್ 6 ಸರಣಿಯ ಬಿಡುಗಡೆಯ ಬಗ್ಗೆ ಕಂಪನಿಯು ಇನ್ನೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಡಿಸ್‌ಪ್ಲೇ: ಹಾನರ್ ಮ್ಯಾಜಿಕ್ 6 ಫೋನ್ 6.78-ಇಂಚಿನ ಪೂರ್ಣ-HD+ OLED ಡಿಸ್‌ಪ್ಲೇಯನ್ನು ಹೊಂದಿದ್ದು, 1Hz ನಿಂದ 120Hz ವರೆಗಿನ ವೇರಿಯಬಲ್ ರಿಫ್ರೆಶ್ ದರದಿಂದ ಕೂಡಿದೆ.
ಚಿಪ್‌ಸೆಟ್: ಈ ಫೋನ್ 4nm ಕ್ವಾಲ್ಕಂ ಸ್ನಾಪ್‌ಡ್ರಾಗನ್ 8 Gen 3 SoC ಜೊತೆಗೆ ಅಡ್ರಿನೋ 750 GPU ನೊಂದಿಗೆ ಜೋಡಿಸಲ್ಪಟ್ಟಿದೆ.
ಹಿಂಬದಿಯ ಕ್ಯಾಮೆರಾಗಳು: ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ f/1.9 ಅಪರ್ಚರ್ ಮತ್ತು OIS ಜೊತೆಗೆ 50MP ವೈಡ್-ಆಂಗಲ್ ಕ್ಯಾಮೆರಾ, OIS ಜೊತೆಗೆ 32MP ಟೆಲಿಫೋಟೋ ಕ್ಯಾಮೆರಾ ಮತ್ತು ಆಟೋಫೋಕಸ್‌ನೊಂದಿಗೆ 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ.
ಸೆಲ್ಫಿ ಕ್ಯಾಮೆರಾ: ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮ್ಯಾಜಿಕ್ 6 50MP ವೈಡ್-ಆಂಗಲ್ ಕ್ಯಾಮೆರಾದೊಂದಿಗೆ f/2.0 ಅಪರ್ಚರ್ ಅನ್ನು ಹೊಂದಿದೆ.
ಸಾಫ್ಟ್‌ವೇರ್: ಹಾನರ್ ಮ್ಯಾಜಿಕ್ 6 ಆಂಡ್ರಾಯ್ಡ್ 14 ಅನ್ನು ಆಧರಿಸಿದ MagicOS 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: ಈ ಫೋನ್ 5,450mAh ಬ್ಯಾಟರಿಯನ್ನು ಹೊಂದಿದ್ದು, 66W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಡಿಸ್‌ಪ್ಲೇ: ಹಾನರ್ ಮ್ಯಾಜಿಕ್ 6 ಪ್ರೊ 6.8-ಇಂಚಿನ ಪೂರ್ಣ-HD+ OLED ಡಿಸ್‌ಪ್ಲೇ ಜೊತೆಗೆ 120Hz ವರೆಗಿನ ರಿಫ್ರೆಶ್ ದರವನ್ನು ನೀಡುತ್ತದೆ.
ಚಿಪ್‌ಸೆಟ್: ಮ್ಯಾಜಿಕ್ 6 ಪ್ರೊ 4nm ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಜೊತೆಗೆ ಅಡ್ರಿನೋ 750 GPU ನೊಂದಿಗೆ ಸಂಯೋಜಿಸಲ್ಪಟ್ಟಿದೆ.
ಹಿಂಬದಿಯ ಕ್ಯಾಮೆರಾಗಳು: ಪ್ರೊ ರೂಪಾಂತರವು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ, 50MP ವೈಡ್-ಆಂಗಲ್ ಕ್ಯಾಮೆರಾದೊಂದಿಗೆ f/1.4 ರಿಂದ f/2.0 ವರೆಗೆ ವೇರಿಯಬಲ್ ಅಪರ್ಚರ್, 180MP 2.5x OIS ಪೆರಿಸ್ಕೋಪ್ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಆಟೋಫೋಕಸ್ ನೀಡಲಾಗಿದೆ.
ಸೆಲ್ಫಿ ಕ್ಯಾಮೆರಾ: ಮ್ಯಾಜಿಕ್ 6 ಪ್ರೊ 50MP ವೈಡ್-ಆಂಗಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 3D ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.
ಸಾಫ್ಟ್‌ವೇರ್: ಪ್ರೊ ರೂಪಾಂತರವು ಮ್ಯಾಜಿಕ್ಓಎಸ್ 8.0 ನಲ್ಲಿಯೂ ಕಾರ್ಯನಿರ್ವಹಿಸುತ್ತದೆ, ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ.
ಬ್ಯಾಟರಿ: ಫೋನ್ 5,600mAh ಬ್ಯಾಟರಿಯನ್ನು ಹೊಂದಿದ್ದು ಅದು 80W ವೈರ್ಡ್ ಚಾರ್ಜಿಂಗ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ