ಇಂದಿನ ವೇಗದ ಜಗತ್ತಿನಲ್ಲಿ ಬಹುತೇಕ ಜನರು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳನ್ನು (Smartphones) ಬಳಸುತ್ತಿದ್ದಾರೆ. ಇವುಗಳು ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಣ ಅವುಗಳ ಕಾಳಜಿಯನ್ನು ಹೆಚ್ಚಿನವರು ಮಾಡುವುದಿಲ್ಲ. ತಮ್ಮ ಕೈಗಳನ್ನು ಸ್ವಚ್ಛಗೊಳಿಸದೆ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ ಬೇಗನೆ ಕೊಳಕು ಆಗುತ್ತವೆ. ಅನೇಕ ಬಾರಿ ಜನರು ತಮ್ಮ ಟಚ್ ಸ್ಕ್ರೀನ್ (Touch Screen) ಸ್ಮಾರ್ಟ್‌ಫೋನ್‌ಗಳನ್ನು ಯಾವುದೇ ಕಾಳಜಿಯಿಲ್ಲದೆ ಬೇಕಾಬಿಟ್ಟಿ ಸ್ವಚ್ಛಗೊಳಿಸುತ್ತಾರೆ. ಹೀಗೆ ಮಾಡುವುದರಿಂದ ಫೋನ್‌ನ ಡಿಸ್ ಪ್ಲೇ, ಕ್ಯಾಮೆರಾ (Camera), ಸ್ಪೀಕರ್ ಮತ್ತು ಚಾರ್ಜಿಂಗ್ ಪೋರ್ಟ್ಗಳು ಹಾನಿಯಾಗುತ್ತದೆ. ಅದಕ್ಕಾಗಿಯೇ ನೀವು ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸುವಾಗ ಜಾಗರೂಕರಾಗಿರಬೇಕು. ಕನಿಷ್ಠ ತಿಂಗಳಿಗೆ ಒಮ್ಮೆಯಾದರು ನಿಮ್ಮ ಮೊಬೈಲ್ ಅನ್ನು ನೀವು ಕ್ಲೀನ್ ಮಾಡಲೇಬೇಕು.
ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದರಲ್ಲಿ ಫೋನಿನ ಸ್ಕ್ರೀನ್, ಸ್ಪೀಕರ್ ಮತ್ತು ಚಾರ್ಜಿಂಗ್ ಪೋರ್ಟ್ ಅನ್ನು ಕ್ಲೀನ್ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಮೊಬೈಲ್ ಕ್ಯಾಮೆರಾದ ಲೆನ್ಸ್ ಬಗ್ಗೆ ಹೇಗೆ ಜಾಗರೂಕರಾಗಿರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Nothing Phone 2: ನಥಿಂಗ್ ಫೋನ್ 2 ಭಾರತದ ಬೆಲೆ ಸೋರಿಕೆ: ಖರೀದಿಗೆ ಕ್ಯೂ ಗ್ಯಾರೆಂಟಿ
ಸ್ಮಾರ್ಟ್‌ಫೋನ್ ಡಿಸ್ ಪ್ಲೇ ಸ್ವಚ್ಛಗೊಳಿಸಲು ನೀವು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ಈ ಬಟ್ಟೆಯ ದೊಡ್ಡ ವೈಶಿಷ್ಟ್ಯವೆಂದರೆ ಮೊಬೈಲ್ ಪರದೆಯಲ್ಲಿರುವ ಸಣ್ಣ ಸಣ್ಣ ಧೂಳುಗಳನ್ನು ಕೂಡ ಸ್ವಚ್ಛಗೊಳಿಸುತ್ತದೆ.
ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಲ್ಲಿ ಧೂಳುಗಳು ಹೆಚ್ಚು ಶೇಖರಣೆಯಾಗಿರುತ್ತದೆ. ನೀವು ಅದನ್ನು ತೀಕ್ಷ್ಣವಾದ ವಸ್ತುವಿನಿಂದ ಸ್ವಚ್ಛಗೊಳಿಸಿದರೆ ಹಾನಿಗೊಳಗಾಗಬಹುದು. ಆದ್ದರಿಂದ ಫೋನ್‌ನ ಸ್ಪೀಕರ್ ಅನ್ನು ಸ್ವಚ್ಛಗೊಳಿಸಬೇಕಾದರೆ ಸಣ್ಣ ಬ್ರಷ್ ಅಥವಾ ಟೂತ್ ಬ್ರಷ್‌ನಿಂದ ಕ್ಲೀನ್ ಮಾಡಿ. ಇದಲ್ಲದೇ ಸ್ಮಾರ್ಟ್‌ಫೋನ್ ರಿಪೇರಿ ಅಂಗಡಿಗೆ ಹೋಗಿ ಏರ್ ಕಂಪ್ರೆಸರ್ನಿಂದ ಕೂಡ ಸ್ವಚ್ಛ ಮಾಡಬಹುದು.
ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಸ್ವಚ್ಛಗೊಳಿಸಲು, ನೀವು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ಅಥವಾ ಹತ್ತಿ, ಯಾವುದೇ ಮೃದುವಾದ ಬಟ್ಟೆಯನ್ನು ಸಹ ಬಳಸಬಹುದು. ಕ್ಯಾಮೆರಾವನ್ನು ಗಟ್ಟಿಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿದರೆ, ಹಾನಿಗೊಳಗಾಗಬಹುದು. ಲೆನ್ಸ್ ಕ್ಲೀನರ್ ಅನ್ನು ಎಂದಿಗೂ ನೇರವಾಗಿ ಕ್ಯಾಮೆರಾಗೆ ಅನ್ವಯಿಸಬೇಡಿ, ಇದು ಕ್ಯಾಮರಾ ಮತ್ತು ಫೋನ್ ಅನ್ನು ಹಾನಿಗೊಳಿಸಬಹುದು. ಅಲ್ಲದೆ, ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ, ನಿಮ್ಮ ಕೈಗಳಿಂದ ಹೆಚ್ಚು ಒತ್ತಡವನ್ನು ಹಾಕಬೇಡಿ. ಬಟ್ಟೆ ಇಲ್ಲದೆ ಕ್ಯಾಮೆರಾವನ್ನು ಮುಟ್ಟಬೇಡಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ