ನಿಮ್ಮ ಸ್ಮಾರ್ಟ್‌ಫೋನ್ (Smartphone) ಹಳೆಯದಾದ ಕಾರಣ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಹೊರಟಿದ್ದೀರಾ?. ಹಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ. ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಅತ್ತುತ್ತಮ ಬೆಲೆಗೆ ಸೇಲ್ ಮಾಡಬಹುದು. ಇದಕ್ಕಾಗಿ ನೀವು ಈ ಅಂಗಡಿಯಿಂದ ಆ ಅಂಗಡಿಗೆ ಅಲೆಯಬೇಕಿಲ್ಲ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡುವುದು ತುಂಬಾ ಸುಲಭ. ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮಾಹಿತಿಯನ್ನು ಒಮ್ಮೆ ಆ್ಯಡ್ ಮಾಡಿದರೆ, ಅದರ ಬೆಲೆಯನ್ನು ಕೂಡ ಅಂದಾಜು ಮಾಡಬಹುದು. ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಇರುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿವರ ಇಲ್ಲಿದೆ ನೋಡಿ.
OLX : ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಮೊಬೈಲ್ ಅನ್ನು ಮಾರಾಟ ಮಾಡಲು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಿಂದಲೇ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಬಹುದು. ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಅನೇಕ ಜನರ ಮೊದಲ ಆಯ್ಕೆ ಒಎಲ್ಎಕ್ಸ್ ಆಗಿದೆ. ಇದರಲ್ಲಿ ಜಾಹೀರಾತಿನ ವಿಧಾನವೂ ಸರಳವಾಗಿದೆ.
ಕ್ಯಾಶಿಫೈ: ಇದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದೆ. ಇಲ್ಲಿ ಹಳೆಯ ಮೊಬೈಲ್‌ಗಳನ್ನು ಮಾರಾಟ ಮಾಡಬಹುದು. ಈ ವೇದಿಕೆಯಲ್ಲಿ ಗ್ರಾಹಕರು ತಮ್ಮ ಮೊಬೈಲ್‌ಗೆ ಸರಿಯಾದ ಬೆಲೆಯನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಕೂಡ ನೀವು ನಿಮ್ಮ ಫೋನ್ ಅನ್ನು ಮನೆಯಿಂದಲೇ ಮಾರಾಟ ಮಾಡಬಹುದು. ಈ ಪ್ಲಾಟ್‌ಫಾರ್ಮ್ ಉಚಿತ ಪಿಕಪ್ ಅನ್ನು ಕೂಡ ನೀಡುತ್ತದೆ.
100W ಫಾಸ್ಟ್ ಚಾರ್ಜರ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ರಿಯಲ್ ಮಿ ಜಿಟಿ 5 ಪ್ರೊ: ಬೆಲೆ ಎಷ್ಟು?
Quikr: ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನೀವು ನಿಮ್ಮ ಸೆಕಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಸುಲಭವಾಗಿ ಜಾಹೀರಾತು ಕೊಡಬಹುದು. ಈ ವೇದಿಕೆಯು ನಿಮಗೆ ಉತ್ತಮ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಸುರಕ್ಷಿತ ಪಾವತಿ ಗೇಟ್‌ವೇ ಕೂಡ ಇಲ್ಲಿ ಲಭ್ಯವಿದೆ. ಆದ್ದರಿಂದ ನೀವು ಸುಲಭವಾಗಿ ಹಣವನ್ನು ಪಡೆಯಬಹುದು.
Budli.in : ಹಳೆಯ ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲು ಇದು ವಿಶೇಷ ವೆಬ್‌ಸೈಟ್ ಆಗಿದೆ. ಬಳಸಿದ ಮೊಬೈಲ್ ಫೋನ್‌ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ನಿಮ್ಮ ಫೋನ್ಗೆ ಉಚಿತ ಪಿಕಪ್ ಸೇವೆ ಕೂಡ ಲಭ್ಯವಿದೆ.
Cashkar : ಈ ವೆಬ್‌ಸೈಟ್‌ನ ಮುಖ್ಯ ಉದ್ದೇಶವೆಂದರೆ ವಸ್ತುಗಳನ್ನು ಮರುಬಳಕೆ ಮಾಡುವುದು. ಈ ಪ್ಲಾಟ್‌ಫಾರ್ಮ್‌ನಲ್ಲಿ, ಗ್ರಾಹಕರು ಹಳೆಯ ಸ್ಮಾರ್ಟ್‌ಫೋನ್ ಅಥವಾ ಇತರೆ ಯಾವುದೇ ಸಾಧನವನ್ನು ಸುಲಭವಾಗಿ ಮಾರಾಟ ಮಾಡಬಹುದು. ಇದರಲ್ಲಿ ಉತ್ತಮವಾದ ಬೆಲೆಯನ್ನು ಪಡೆಯುತ್ತೀರಿ.
ಅಮೆಜಾನ್-ಫ್ಲಿಪ್ಕಾರ್ಟ್: ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಾದ ಫ್ಲಿಪ್ಕಾರ್ಟ್- ಅಮೆಜಾನ್ ಹಳೆಯ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಸಹ ನೀಡುತ್ತವೆ. ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಮೊಬೈಲ್‌ನ ಬೆಲೆಯನ್ನು ಪರಿಶೀಲಿಸಿದನಂತರ, ಬ್ರಾಂಡ್, ಮಾದರಿ, ಸ್ಥಿತಿ ಮತ್ತು ಆದ್ಯತೆಗಳ ಆಧಾರದ ಮೇಲೆ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ ಎಂಬುದು ನೆನಪಿರಲಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Fri, 8 December 23