Kannada News Technology How to get verified on instagram and obtain the blue tick technology Kannada News
ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ಗೂ ಬ್ಲೂ ಟಿಕ್ ಬೇಕಾ, ಹಾಗಿದ್ರೆ ಈ ಸುಲಭ ಹಂತಗಳನ್ನು ಅನುಸರಿಸಿ
ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿರುತ್ತದೆ. ಇನ್‌ಸ್ಟಾಗ್ರಾಮ್ ಇದಾಗಲೇ ಬ್ಲೂ ಟಿಕ್ ಪಡೆಯುವ ಫೀಚರ್ ಅನ್ನು ಕೂಡಾ ಪರಿಚಯಸಿದೆ. ಆದರೆ ಹೆಚ್ಚಿನವರಿಗೆ ಬ್ಲೂ ಟಿಕ್ ಪಡೆಯುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಹಾಗಿರುವಾಗ ಈ ಕೆಲವೊಂದು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲೂ ಬ್ಲೂ ಟಿಕ್ ಪಡೆಯಬಹುದು.
ಪ್ರತಿಷ್ಠಿತ ಸೋಷಿಯಲ್ ಮೀಡಿಯಾದ ಫ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್ ಒಂದಲ್ಲ ಒಂದು ಹೊಸ ಹಾಗೆಯೇ ವಿಭಿನ್ನ ಫೀಚರ್‌ಗಳನ್ನು ತನ್ನ ಬಳಕೆದಾರರ ಸಲುವಾಗಿ ಪರಿಚಯಿಸುತ್ತಲೇ ಇರುತ್ತವೆ. ಈ ಹಿಂದೆ ಸೆಲೆಬ್ರಿಟಿ ಮತ್ತು ಪ್ರತಿಷ್ಠಿತ ಬ್ರಾಂಡ್‌ಗಳ ಇನ್‌ಸ್ಟಾಗ್ರಾಮ್ ಅಕೌಂಟ್‌ಗಳಿಗೆ ಮಾತ್ರ ಬ್ಲೂ ಟಿಕ್ ನೀಡಲಾಗುತ್ತಿತ್ತು. ಆದರೆ ಕೆಲ ಸಮಯಗಳ ಹಿಂದೆ ಸಾಮಾನ್ಯರು ಕೂಡಾ ತನ್ನ ಅಕೌಂಟ್‌ನಲ್ಲಿ ಬ್ಲೂ ಟಿಕ್ ಪಡೆಯುವ ಫೀಚರ್ ಅನ್ನು ಇನ್‌ಸ್ಟಾಗ್ರಾಮ್ ಪರಿಚಯಿಸಿತ್ತು. ಆದರೆ ಹೆಚ್ಚಿನವರಿಗೆ ಬ್ಲೂ ಟಿಕ್ ಪಡೆಯುವುದು ಹೇಗೆ ಎಂಬುವುದು ತಿಳಿದಿರುವುದಿಲ್ಲ. ಈ ಕೆಲವು ಸಿಂಪಲ್ ಸ್ಟೆಪ್ಸ್‌ಗಳನ್ನು ಅನುಸರಿಸುವ ಮೂಲಕ ನಿಮ್ಮ ಖಾತೆಯಲ್ಲೂ ಬ್ಲೂ ಟಿಕ್ ಪಡೆಯಬಹುದಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲೂ ಟಿಕ್ ಪಡೆಯುವುದು ಹೇಗೆ:
ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ತೆರೆದು, ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಬಲ ಮೇಲ್ಭಾಗದಲ್ಲಿರುವ ಸೆಟ್ಟಿಂಗ್ ಬಟನ್ (ಹ್ಯಾಂಬರ್ಗರ್ ಐಕಾನ್) ಕ್ಲಿಕ್ ಮಾಡಿ.
ಹೀಗೆ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಬಟನ್ ಓಪನ್ ಮಾಡಿದ ಬಳಿಕ ಅಲ್ಲಿ ಕೆಳ ಭಾಗದದಲ್ಲಿ ಅಕೌಂಟ್ ಎಂಬ ಆಪ್ಷನ್ ಕಾಣಿಸುತ್ತದೆ.
ಆ ಅಕೌಂಟ್‌ಗೆ ಹೋಗಿ ರಿಕ್ವೆಸ್ಟ್ ವೇರಿಫಿಕೇಶನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಹೀಗೆ ವೇರಿಫಿಕೇಶನ್ ಆಪ್ಷನ್ ಕ್ಲಿಕ್ ಮಾಡಿದಾಗ ಅಪ್ಲೈ ಫಾರ್ ಇನ್‌ಸ್ಟಾಗ್ರಾಮ್ ವೇರಿಫಿಕೇಷನ್ ಎಂದು ಬರುತ್ತೆ. ಅಲ್ಲಿ ನೀವು ನಿಮ್ಮ ಧೃಡೀಕರಣವನ್ನು ಧೃಢೀಕರಿಸಬೇಕಾಗುತ್ತದೆ.
ಇಲ್ಲಿ ಮೊದಲ ಹಂತದಲ್ಲಿ ನಿಮ್ಮ ಇನ್‌ಸ್ಟಾಗ್ರಾಮ್ ಯೂಸರ್ ನೇಮ್, ಬಳಿಕ ನಿಮ್ಮ ಅಧೀಕೃತ ಹೆಸರನ್ನು ಬರೆದು ಡ್ರೈವಿಂಗ್ ಲೈಸನ್ಸ್ ಅಥವಾ ಪಾಸ್‌ಪೋರ್ಟ್ ಅಥವಾ ಯುಟಿಲಿಟಿ ಬಿಲ್ ಹೀಗೆ ಯಾವುದಾದರೂ ಡಾಕ್ಯುಮೆಂಟ್ ಕಾಪಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಎರಡನೇ ಹಂತದಲ್ಲಿ ನೀವು ಸ್ಪೋರ್ಟ್ಸ್, ಫ್ಯಾಶನ್, ಡಿಜಿಟಲ್ ಕ್ರಿಯೇಟರ್, ಇನ್ಫುಯೆನ್ಸರ್, ಬ್ರಾಂಡ್ ಇತ್ಯಾದಿ ಆಯ್ಕೆಯಲ್ಲಿ ಯಾವುದಾದರು ಒಂದು ಕೆಟಗರಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ನಂತರ ನೀವು ನಿಮ್ಮ ದೇಶ ಅಥವಾ ಸ್ಥಳವನ್ನು ಕೂಡಾ ಆಯ್ಕೆ ಮಾಡಬಹುದು. ಇದು ಐಚ್ಛಿಕವಾಗಿದೆ.
ಮೂರನೇ ಹಂತದಲ್ಲಿ ನಿಮ್ಮ ಖಾತೆಯು ಸಾರ್ವಜನಿಕ ಹಿತಾಸಕ್ತಿಯಲ್ಲಿದೆ ಎಂದು ತೋರಿಸುವ 3 ಲಿಂಕ್‌ಗಳನ್ನು ಸೇರಿಬಹುದು.
ಕೊನೆಯದಾಗಿ ಕೆಳಭಾಗದಲ್ಲಿರುವ ಸಬ್‌ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಹೀಗೆ ಮಾಡಿದ ಬಳಿಕ ಇನ್‌ಸ್ಟಾಗ್ರಾಮ್ ಟೀಮ್ ನಿಮ್ಮ ಖಾತೆಯನ್ನು ಪರಿಶೀಲಿಸುತ್ತದೆ ಹಾಗೂ 30 ದಿನ ಅಥವಾ ಕೆಲವು ವಾರದೊಳಗೆ ನಿಮ್ಮ ಖಾತೆಗೆ ಬ್ಲೂ ಟಿಕ್ ನೀಡುತ್ತದೆ.
ಪರ್ಸನಲ್ ಅಥವಾ ಪ್ರೈವೇಟ್ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಬ್ಲೂ ಟಿಕ್ ಪಡೆಯಬಹುದು:
ಮೊದಲಿಗೆ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆದು, ಹ್ಯಾಂಬರ್ಗರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಅಲ್ಲಿ ಕೆಳಭಾಗದಲ್ಲಿ Meta Verified ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಬಳಿಕ ಅಲ್ಲಿ ಯುವರ್ ಪರ್ಸನಲ್ ಪ್ರೊಫೈಲ್ ಅಥವಾ ಯುವರ್ ಬ್ಯುಸಿನೆಸ್ ಪ್ರೊಫೈಲ್ ಆಯ್ಕೆ ಮಾಡಿ.
ನಂತರ ಕನ್ಫರ್ಮ್ ಮತ್ತು ಪೇ ಆಪ್ಷನ್ ಮೇಲೆ ಕ್ಲಿಕ್ ಮಾಡಿ ತಿಂಗಳಿಗೆ 639 ರೂ. ಪೇ ಮಾಡಿ ಬ್ಲೂ ಟಿಕ್ ಪಡೆಯಬಹುದು.