ಇನ್‌ಸ್ಟಾಗ್ರಾಮ್ (Instagram) ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ತನ್ನ ಆಕರ್ಷಕ ಫೀಚರ್ಸ್‌ನಿಂದ ಬಳಕೆದಾರರ ನೆಚ್ಚಿನ ವಿಡಿಯೋ ಶೇರಿಂಗ್, ಚಾಟಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿರುವ ಇನ್‌ಸ್ಟಾಗ್ರಾಮ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಪ್ರೈವೆಸಿ ಆಯ್ಕೆಯನ್ನು ಕೂಡ ನೀಡಿದೆ. ಇದರಲ್ಲಿ ಕೆಲವೇ ಜನರೊಂದಿಗೆ ಅಂದರೆ ನಿಮಗೆ ಇಷ್ಟವಿರುವ ಜನರೊಂದಿಗೆ ಮಾತ್ರ ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು (Inst Story) ಹಂಚಿಕೊಳ್ಳುವ ಆಯ್ಕೆ ಕೂಡ ಇದೆ. ಹಾಗಾದರೆ, ಇನ್ಸ್ಟಾಗ್ರಾಮ್ನಲ್ಲಿ ನೀವು ಅನೇಕ ಸ್ನೇಹಿತರನ್ನು ಒಳಗೊಂಡಿದ್ದರೆ ಇದರಲ್ಲಿ ಆಯ್ದ ಫಾಲೋವರ್ಸ್ಗೆ ಮಾತ್ರ ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು ಅಥವಾ ಸ್ಟೇಟಸ್ ಅನ್ನು ಹಂಚಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟ್ರಿಕ್ (Tricks).
ಲಾಸ್ಟ್ ಸೀನ್ ನೋಡುವುದು ಹೇಗೆ?:
ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ನೀವು ಚಾಟ್ ಮಾಡುವಾಗ ಅವರು ಯಾವಾಗ ಆನ್ಲೈನ್ನಲ್ಲಿದ್ದರು ಎಂಬುದನ್ನು ಸಹ ತಿಳಿಯಲು ಅವಕಾಶ ನೀಡಲಿದೆ. ಹಾಗಂತ ನೀವು ಸ್ಟೇಟಸ್ ನೋಡುವುದಕ್ಕೆ ಇಬ್ಬರೂ ಒಬ್ಬರನ್ನೊಬ್ಬರು ಅನುಸರಿಸುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಆದರೆ ಎರಡೂ ಕಡೆಯವರು ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವಾಗ ಮಾತ್ರ ಲಾಸ್ಟ್ ಸೀನ್ ನೋಡುವುದಕ್ಕೆ ಸಾದ್ಯವಾಗಲಿದೆ.
Samsung Galaxy A14: ಸ್ಯಾಮ್ಸಂಗ್ ಲೇಟೆಸ್ಟ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಹಾಗೆಯೇ ಒಂದು ವೇಳೆ ನೀವು ನಿಮ್ಮ ಲಾಸ್ಟ್ ಸೀನ್ ಆಕ್ಟಿವಿಟಿಯನ್ನು ಬೇರೆಯವರು ನೋಡದಂತೆ ಮಾಡುವ ಅವಕಾಶ ಕೂಡ ಇದೆ. ಇದಕ್ಕಾಗಿ ನೀವು ನಿಮ್ಮ ಪ್ರೊಫೈಲ್ ಟ್ಯಾಬ್‌ಗೆ ಹೋಗಬೇಕು, ಇದರಲ್ಲಿ ಕಾಗ್ವೀಲ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಆಯ್ಕೆಗಳ ಸ್ಕ್ರೀನ್‌ಗೆ ಹೋಗಬೇಕಾಗುತ್ತದೆ. ಈ ಟ್ಯಾಬ್ ಒಳಗೆ, ಸೆಟ್ಟಿಂಗ್‌ಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಶೋ ಆಕ್ಟಿವಿಟಿ ಸ್ಟೇಟಸ್” ಆಯ್ಕೆಯನ್ನು ಆಫ್ ಮಾಡಿದರೆ ನಿಮ್ಮ ಲಾಸ್ಟ್ ಸೀನ್ ಯಾರಿಗೂ ಕಾಣಿಸುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ