WhatsApp Tricks: ವಾಟ್ಸ್​ಆ್ಯಪ್​ನಿಂದ ಫುಲ್ ಆಗುವ ಫೋನ್ ಸ್ಟೋರೇಜ್ ಅನ್ನು ಸರಿಪಡಿಸುವುದು ಹೇಗೆ?: ಈ ಟ್ರಿಕ್ ಫಾಲೋ ಮಾಡಿ

|

Updated on: Jun 22, 2023 | 12:23 PM

Tech Tips: ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್​ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತಿದೆ. ಇದನ್ನು ತಡೆಯಲು ಟ್ರಿಕ್ ಇದೆ.

WhatsApp Tricks: ವಾಟ್ಸ್​ಆ್ಯಪ್​ನಿಂದ ಫುಲ್ ಆಗುವ ಫೋನ್ ಸ್ಟೋರೇಜ್ ಅನ್ನು ಸರಿಪಡಿಸುವುದು ಹೇಗೆ?: ಈ ಟ್ರಿಕ್ ಫಾಲೋ ಮಾಡಿ
WhatsApp
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಇಂದು ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸ್​ಆ್ಯಪ್​ನ (WhatsApp) ಒಂದು ಗ್ರೂಪ್​ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್​ಗಳು ಬರುತ್ತಲೇ ಇರುತ್ತದೆ. ಇದು ಡೌನ್​ಲೋಡ್ ಆಗಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ (Smartphone) ಸೇವ್ ಆಗುತ್ತದೆ. ಹೀಗೆ ಸೇವ್ ಆದ ಫೋಟೋಗಳಿಗೆ ಲೆಕ್ಕವಿರುವುದಿಲ್ಲ. ಇದರಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಆಗ ಒಂದೊಂದೆ ಫೋಟೋವನ್ನು ಹುಡುಕಿಕೊಂಡು ಡಿಲೀಟ್ ಮಾಡುವ ಪಾಡು ಯಾರಿಗೂ ಬೇಡ. ಆದರೆ, ವಾಟ್ಸ್​ಆ್ಯಪ್​ನಲ್ಲಿ ಬಂದ ಅನಗತ್ಯ ಫೋಟೋವನ್ನು ಡೌನ್​ಲೋಡ್ ಮಾಡದೆ ಇರುವುದಕ್ಕೆ ಟ್ರಿಕ್ ಇದೆ.

ಅಟೋ-ಡೌನ್​ಲೋಡ್ ಆಯ್ಕೆ ಆಫ್ ಮಾಡಿ:

ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್​ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್​ಆ್ಯಪ್ ಸೆಟ್ಟಿಂಗ್ಸ್​ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್​ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್​ಗಳು ನೀವು ಡೌನ್​ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ. ಮೊಬೈಲ್​ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್​ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್​ನಲ್ಲಿ ಸೇವ್ ಮಾಡಬಹುದು.

ಇದನ್ನೂ ಓದಿ
Samsung Galaxy A73: 10 ಸಾವಿರ ರೂ. ಡಿಸ್ಕೌಂಟ್​ನಲ್ಲಿ ಲಭ್ಯ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್
Pebble Cosmos Vogue: ಸ್ಟೈಲಿಶ್ ಆಗಿ ಬರುತ್ತಿದೆ ಹೊಸ ಪೆಬಲ್ ಸ್ಮಾರ್ಟ್​ವಾಚ್
Instagram Reels: ಇನ್‌ಸ್ಟಾಗ್ರಾಮ್​​ನಲ್ಲಿ ಸಾರ್ವಜನಿಕರು ಹಂಚಿಕೊಂಡ ರೀಲ್ಸ್​​ಗಳನ್ನು ಡೌನ್‌ಲೋಡ್ ಮಾಡಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಕಾವೇರಿ 2.0 ಜಾರಿ, ಆಸ್ತಿ ನೋಂದಾಣಿ ಸರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಅನುಕೂಲಗಳೇನು?

Best Smartphones: 15,000 ರೂ. ಒಳಗಿನ ಅತ್ಯುತ್ತಮ ಕ್ಯಾಮೆರಾವುಳ್ಳ ಅದ್ಭುತ ಸ್ಮಾರ್ಟ್‌ಫೋನ್‌ ಇಲ್ಲಿದೆ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಿಗ್‌ ಸೈಜ್‌ ಪೈಲ್‌ಗಳನ್ನು ಸರ್ಚ್‌ ಮಾಡಿ ಅವುಗಳನ್ನು ಡಿಲೀಟ್‌ ಮಾಡಬಹುದು. ನಿಮಗೆ ಅನಗತ್ಯ ಎನಿಸುವ ಬಿಗ್‌ ಸೈಜ್‌ ಫೈಲ್‌ಗಳನ್ನು ಡಿಲೀಟ್‌ ಮಾಡಿದಾಗ ನಿಮಗೆ ಹೆಚ್ಚಿನ ಸ್ಟೋರೇಜ್‌ ಸ್ಪೇಸ್‌ ಉಳಿಯುತ್ತದೆ. 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್​ಫೋನುಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್​ನಲ್ಲಿರುವ ಅಪ್ಲಿಕೇಷನ್​ಗಳನ್ನು ತೆರೆದಂತೆ ಮೊಬೈಲ್​ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ. ಅದನ್ನು ನೀವು ಫೋನ್ ಸೆಟ್ಟಿಂಗ್​ನಲ್ಲಿ ಅಪ್ಲಿಕೇಶನ್​ಗೆ ಹೋಗಿ ಸುಲಭವಾಗಿ ತೆಗೆಯಬಹುದು.

ಇನ್ನು ನಮ್ಮ ಮೊಬೈಲ್​ನಲ್ಲಿರುವ ಕೆಲವು ಅಪ್ಲಿಕೇಷನ್​ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್​ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್​ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ. ಈ ಮೂಲಕ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್‌ ಫುಲ್‌ ಆದ ನೀವು ಸ್ಪೇಸ್‌ ಫ್ರೀ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ