Phone Storage Full: ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಸುವುದು ಹೇಗೆ?: ಈ ಟ್ರಿಕ್ ಫಾಲೋ ಮಾಡಿ
ನಿಮ್ಮ ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಸಲು ನೀವು ಅನುಸರಿಸಬೇಕಾದ ಕೆಲ ಸಿಂಪಲ್ ಕ್ರಮಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ನೋಡಿ.
ಕಾಲ ಬದಲಾದಂತೆ ಮೊಬೈಲ್ಗಳು (Mobile) ಕೂಡ ಅಪ್ಡೇಟ್ ಆಗುತ್ತಿವೆ. ನಾನಾ ಬಗೆಯ ಹೊಸ ಹೊಸ ಸ್ಮಾರ್ಟ್ ಫೋನುಗಳು (Smartphone) ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಎಲ್ಲ ಆಂಡ್ರಾಯ್ಡ್ (Android), ಐಫೋನ್ಗಳ ಪ್ರೊಸೆಸರ್, RAM ಮತ್ತು ಅಧಿಕ ಸ್ಟೋರೆಜ್ ಸಾಮರ್ಥ್ಯದಿಂದಾಗಿ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್‌ಫೋನ್‌ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ಗಳು, ಫೋಲ್ಡರ್ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ (Phone Storage) ಅನ್ನೂ ಫುಲ್ ಮಾಡಿಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ನೀವು ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೂ ಕೂಡ ನಿಮಗೆ ಸ್ಪೇಸ್ ಸಾಕಾಗದೆ ಕಿರಿಕಿರಿ ಆಗುವ ಸಂಭವ ಕೂಡ ಇದೆ. ಫೋನ್ ಸ್ಟೋರೇಜ್ ಸ್ಪೇಸ್ ಉಳಿದಷ್ಟು ನಿಮ್ಮ ಫೋನ್ ಹ್ಯಾಂಗ್ ಆಗುವುದನ್ನು ತಪ್ಪಿಸಬಹುದು. ಹಾಗಾದ್ರೆ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಸಲು ನೀವು ಅನುಸರಿಸಬೇಕಾದ ಕ್ರಮಗಳು ಏನು ಅನ್ನೊದನ್ನ ಈ ಲೇಖನದಲ್ಲಿ ಹೇಳುತ್ತೇವೆ ಓದಿರಿ.
ಆನ್ ಲೈನ್ ಫೋಟೋ ಮತ್ತು ವಿಡಿಯೋಗಳನ್ನು ಸೇವ್ ಮಾಡಬೇಡಿ. ಮೊಬೈಲ್ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ನಲ್ಲಿ ಸೇವ್ ಮಾಡಬಹುದು. ಎಲ್ಲ ಗೂಗಲ್ ಅಕೌಂಟ್ ಜೊತೆ ಬಳಕೆದಾರರಿಗೆ 15 ಜಿಬಿ ಫ್ರೀ ಸ್ಟೊರೇಜ್ ವ್ಯವಸ್ಥೆ ಇರುತ್ತದೆ. ಹಾಗಾಗಿ ನೀವು ಅಲ್ಲಿ ಫೋಟೋ, ವಿಡಿಯೋವನ್ನು ಸೇವ್ ಮಾಡಬಹುದು.
ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸ್ಆ್ಯಪ್ ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ವಾಟ್ಸ್ಆ್ಯಪ್ನ ಬಳಕೆಯಿಂದಲೂ ಕೂಡ ನಿಮ್ಮ ಸ್ಟೋರೇಜ್ ಸ್ಪೇಸ್ ಫುಲ್ ಆಗುತ್ತಾ ಬರುತ್ತದೆ. ಆದರಿಂದ ನೀವು ವಾಟ್ಸ್ಆ್ಯಪ್ ಬಳಸುವಾಗ ವಾಟ್ಸ್ಆ್ಯಪ್ ಸ್ಟೋರೇಜ್ ಮ್ಯಾನೇಜರ್ ಬಳಸುವುದು ಉತ್ತಮ. ಇದರಿಂದ ನಿಮ್ಮ ವಾಟ್ಸ್ಆ್ಯಪ್ಗೆ ಬರುವ ಫೋಟೋ, ಫೈಲ್‌ಗಳನ್ನು ಇನ್ಸಟಂಟ್ ಆಗಿ ಡಿಲೀಟ್ ಮಾಡಲು ಅನುಕೂಲವಾಗಲಿದೆ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಿಗ್ ಸೈಜ್ ಪೈಲ್‌ಗಳನ್ನು ಸರ್ಚ್ ಮಾಡಿ ಅವುಗಳನ್ನು ಡಿಲೀಟ್ ಮಾಡಬಹುದು. ನಿಮಗೆ ಅನಗತ್ಯ ಎನಿಸುವ ಬಿಗ್ ಸೈಜ್ ಫೈಲ್‌ಗಳನ್ನು ಡಿಲೀಟ್ ಮಾಡಿದಾಗ ನಿಮಗೆ ಹೆಚ್ಚಿನ ಸ್ಟೋರೇಜ್ ಸ್ಪೇಸ್ ಉಳಿಯಲಿದೆ. 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ಫೋನುಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್ನಲ್ಲಿರುವ ಅಪ್ಲಿಕೇಷನ್ಗಳನ್ನು ತೆರೆದಂತೆ ಮೊಬೈಲ್ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ. ಅದನ್ನು ನೀವು ಫೋನ್ ಸೆಟ್ಟಿಂಗ್ನಲ್ಲಿ ಅಪ್ಲಿಕೇಶನ್ಗೆ ಹೋಗಿ ಸುಲಭವಾಗಿ ತೆಗೆಯಬಹುದು.
ಇನ್ನು ನಮ್ಮ ಮೊಬೈಲ್ನಲ್ಲಿರುವ ಕೆಲವು ಅಪ್ಲಿಕೇಷನ್ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ. ಈ ಮೂಲಕ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್ ಫುಲ್ ಆದ ನೀವು ಸ್ಪೇಸ್ ಫ್ರೀ ಮಾಡಬಹುದು.
Amazon Great Republic Day Sale: ಅಮೇಜಾನ್ನಲ್ಲಿ ಲೈವ್ ಆಗಿದೆ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಆಫರ್ಗಳ ಸುರಿಮಳೆ
OnePlus 9RT: ಮೊದಲ ಸೇಲ್ನಲ್ಲೇ ಧೂಳೆಬ್ಬಿಸುತ್ತಿರುವ ಒನ್‌ಪ್ಲಸ್ 9RT ಫೋನ್: ಆಫರ್ನಲ್ಲಿ ಇಂದೇ ಖರೀದಿಸಿ
Published On - 2:41 pm, Mon, 17 January 22