OnePlus 9RT: ಮೊದಲ ಸೇಲ್​ನಲ್ಲೇ ಧೂಳೆಬ್ಬಿಸುತ್ತಿರುವ ಒನ್‌ಪ್ಲಸ್‌ 9RT ಫೋನ್: ಆಫರ್​ನಲ್ಲಿ ಇಂದೇ ಖರೀದಿಸಿ

Aamazon Great Republic Day Sale: ಬಿಡುಗಡೆಗೂ ಮುನ್ನವೇ ಟೆಕ್ ಪ್ರಿಯರ ನಿದ್ದೆ ಕದ್ದಿದ್ದ ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್ ಈಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್​ನಲ್ಲಿ ಮಧ್ಯಾಹ್ನ 12ಕ್ಕೆ ಮಾರಾಟ ಪ್ರಾರಂಭಿಸಿದೆ.

OnePlus 9RT: ಮೊದಲ ಸೇಲ್​ನಲ್ಲೇ ಧೂಳೆಬ್ಬಿಸುತ್ತಿರುವ ಒನ್‌ಪ್ಲಸ್‌ 9RT ಫೋನ್: ಆಫರ್​ನಲ್ಲಿ ಇಂದೇ ಖರೀದಿಸಿ
OnePlus 9RT
Follow us
TV9 Web
| Updated By: Vinay Bhat

Updated on: Jan 17, 2022 | 1:01 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ಒನ್​ಪ್ಲಸ್ ಕಂಪನಿ ಇದೀಗ ಭಾರತದಲ್ಲಿ ಬಿಡುಗಡೆ ಮಾಡಿರುವ 2022ರ ಮೊದಲ ಫೋನ್ ಒನ್​ಪ್ಲಸ್ 9ಆರ್​ಟಿ (OnePlus 9RT) ಇಂದು ಮೊದಲ ಸೇಲ್ ಕಾಣುತ್ತಿದೆ. ಬಿಡುಗಡೆಗೂ ಮುನ್ನವೇ ಟೆಕ್ ಪ್ರಿಯರ ನಿದ್ದೆ ಕದ್ದಿದ್ದ ಈ ಫೋನ್ ಈಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್​ನಲ್ಲಿ (Aamazon Great Republic Day Sale) ಮಧ್ಯಾಹ್ನ 12ಕ್ಕೆ ಮಾರಾಟ ಪ್ರಾರಂಭಿಸಿದೆ. ಇದರಲ್ಲಿರುವ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ನಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌, 65W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಅಮೋಘ ಫೀಚರ್​ಗಳಿಂದ ಒನ್‌ಪ್ಲಸ್‌ 9RT ಕೂಡಿದೆ.

ಬೆಲೆ ಎಷ್ಟು?:

ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯಕ್ಕೆ 42,999 ರೂ. ನಿಗದಿ ಮಾಡಲಾಗಿದೆ. 12GB RAM ಮತ್ತು 256GB ಇಂಟರ್‌ ಸ್ಟೋರೇಜ್​ಗೆ 46,999 ರೂ. ಇದೆ. ಬ್ಲಾಕ್ ಮತ್ತು ಸಿಲ್ವರ್​ನ ಎರಡು ಬಣ್ಣಗಳಲ್ಲಿ ಇದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಏನು ವಿಶೇಷತೆ?:

ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.62-ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಯಾಮ್‌ಸಂಗ್‌ E4 ಅಮೋಲೆಡ್‌ ಡಿಸ್‌ಪ್ಲೇ ಆಗಿದೆ. ಈ ಡಿಸ್‌ಪ್ಲೇ 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಜೊತೆಗೆ ಈ ಡಿಸ್‌ಪ್ಲೇ 1,300Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಕ್ಸಿಜನ್‌ OS 11 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ ಬರುತ್ತದೆ ಮತ್ತು 60fps ನಲ್ಲಿ 4K ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಎರಡನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಮೂಲಕ ಕಂಪನಿಯ ವಾರ್ಪ್ ಚಾರ್ಜ್ 65T ತಂತ್ರಜ್ಞಾನದ ಬಳಸಿ 65W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಮತ್ತು ಬ್ಲೂಟೂತ್ v5.2 ಸಂಪರ್ಕವನ್ನು ನೀಡುತ್ತದೆ. ಜೊತೆಗೆ GPS/ A-GPS ಮತ್ತು NFC ಬೆಂಬಲವನ್ನು ನೀಡುತ್ತದೆ.

Android Tips: ಫೋನ್​ನಲ್ಲಿರುವ ಈ ಕೋಡ್​ಗಳ ಬಗ್ಗೆ ತಿಳಿದುಕೊಳ್ಳಿ: ಸುಲಭವಾಗಿ ಸಮಸ್ಯೆ ಸರಿಪಡಿಸಬಹುದು

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ