Android Tips: ಫೋನ್ನಲ್ಲಿರುವ ಈ ಕೋಡ್ಗಳ ಬಗ್ಗೆ ತಿಳಿದುಕೊಳ್ಳಿ: ಸುಲಭವಾಗಿ ಸಮಸ್ಯೆ ಸರಿಪಡಿಸಬಹುದು
ಕೆಲವೊಂದು ಕೋಡ್ಗಳನ್ನು ಬಳಸಿ ಮೊಬೈಲ್ನಲ್ಲಿ ಉಂಟಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಎಲ್ಲಾ ಕೋಡ್ಗಳು ಆರಂಭವಾಗುವುದು # ನಿಂದಲೇ ಆಗಿದೆ.
ಸ್ಮಾರ್ಟ್ಫೋನ್ (Smart Phone) ಗಳು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ನಮ್ಮ ಬಳಿಯೇ ಬೆಲೆಬಾಳುವ ಮೊಬೈಲ್ ಫೋನ್ಗಳಿದ್ದರೂ ಕೆಲವೊಂದು ಟ್ರಿಕ್ಸ್ (Tricks) ಗಳು ತಿಳಿದೇ ಇರುವುದಿಲ್ಲ. ಮೊಬೈಲ್ನಲ್ಲಿ ಸಮಸ್ಯೆಯಾದಾಗ ಏನು ಮಾಡಬೇಕೆಂದು ತೋಚದೆ ಸರ್ವೀಸ್ ಸೆಂಟರ್ಗಳಿಗೆ ಹೋಗುತ್ತೇವೆ. ಸಣ್ಣ ಸಣ್ಣ ಸಮಸ್ಯೆಗಳಿಗೂ ಸರ್ವೀಸ್ ಸೆಂಟರ್ಗೆ ತೆಗೆದುಕೊಂಡು ಹೋಗದೆ ಕೆಲವೊಂದು ಕೋಡ್ಗಳನ್ನು ಬಳಸಿ ಮೊಬೈಲ್ನಲ್ಲಿ ಉಂಟಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಎಲ್ಲಾ ಕೋಡ್ (Code)ಗಳು ಆರಂಭವಾಗುವುದು # ನಿಂದಲೇ ಆಗಿದೆ. ಆದರೆ ನೆನಪಿಡಿ ವಿಭಿನ್ನ ಹಾರ್ಡ್ವೇರ್ ತಯಾರಕರು ಬೇರೆ ಬೇರೆ ಕಾನ್ಫಿಗರೇಷನ್ಅನ್ನು ಬಳಸುವುದರಿಂದ ಈ ಎಲ್ಲಾ ಕೋಡ್ಗಳು ನಿಮ್ಮ ಫೋನ್ನಲ್ಲಿ ಇರಲು ಸಾಧ್ಯವಿಲ್ಲ. ಅಲ್ಲದೇ ಎಲ್ಲಾ ಫೋನ್ಗಳಿಗೂ ಸರಿಹೊಂದುವ ಒಂದೇ ಕೋಡ್ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಸಾಮಾನ್ಯವಾಗಿ ಮೊಬೈಲ್ನ ಕೆಲವು ಸಮಸ್ಯೆಗಳಿಗೆ ಬಳಸುವ ಕೋಡ್ಗಳನ್ನು ಇಲ್ಲಿ ತಿಳಿಸಲಾಗಿದೆ.
ಫೋನ್ ಸ್ವಿಚ್ಡ್ ಆಫ್ ಮಾಡಲು ಕೆಲವೊಮ್ಮೆ ನಿಮ್ಮ ಫೋನ್ಗಳ ಸ್ಕ್ರೀನ್ ಬ್ಲಿಂಕ್ ಆಗುತ್ತದೆ. ಅಂಥಹ ಸಂದರ್ಭಗಳಲ್ಲಿ ಯಾವಾಗಲೂ ಸ್ವಿಚ್ ಆಫ್ ಮಾಡುವಂತೆ ಕೀ ಬಟನ್ ಅಥವಾ ಸ್ಕ್ರೀನ್ ಮೇಲೆ ಕಾಣಿಸುವ ಆಯ್ಕೆಯನ್ನು ಬಳಸಿ ಸ್ವಿಚ್ ಆಫ್ ಮಾಡಲು ಯತ್ನಿಸಿ. ಮೊಬೈಲ್ಗೆ ವೈರಸ್ ಅಟ್ಯಾಕ್ ಅದಾಗ ಅಥವಾ ಬಟನ್ಗಳು ಕಾರ್ಯನಿರ್ವಹಿಸದೇ ಇದ್ದಾಗ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆಗ ಈ ಕೋಡ್ಅನ್ನು ಬಳಸಿ ಫೋನ್ ಅನ್ನು ಸ್ವಿಚ್ ಆಫ್ ಮಾಡಬಹುದು. *#*#7594#*#* ಕೋಡ್ ಉಪಯೋಗಿಸುವ ಮೂಲಕ ಫೋನ್ ಅನ್ನು ಸ್ವಿಚ್ ಮಾಡಬಹುದು. ಫೋನ್ ಸ್ವಿಚ್ ಮಾಡುವುದು ಅಥವಾ ರೀ ಸ್ಟಾರ್ಟ್ ಮಾಡುವುದು ಅನೇಕ್ ಫೋನ್ಗಳ ಸಾಪ್ಟವೇರ್ಗಳ ಸಮಸ್ಯೆಯನ್ನು ನಿವಾರಿಸುತ್ತದೆ.
ಫೋನ್ ರೀಸೆಟ್ ಮಾಡಲು ನಿಮ್ಮ ಫೋನ್ ಸರಿಯಾಗಿ ಕೆಲಸ ಮಾಡದಿದ್ದಾಗ ಅಥವಾ ಸ್ಲೋ ಆದಾಗ ಸಮಸ್ಯೆಗಳು ಉಲ್ಬಣಿಸುತ್ತದೆ. ಫೋನ್ ಸರಿಯಾಗಿ ಕೆಲಸ ಮಾಡದಿದ್ದಾಗ ನಿಮ್ಮ ತಾಳ್ಮೆಯೂ ಕುಸಿಯುತ್ತದೆ. ನಿಮ್ಮ ಫೊನ್ ಎಷ್ಟೇ ಹೊಸದಾಗಿದ್ದರೂ ಮಾರುವ ಮನಸ್ಥಿತಿ ನಿಮಗೆ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಫ್ಯಾಕ್ಟರಿ ರೀ ಸೆಟ್ ಮಾಡುವ ಅಗತ್ಯವಿದೆ. ಇದಕ್ಕಾಗಿ ನಿಮಗೆ ನೀಡಿದ ಪಿನ್ಗಳ ಅಗತ್ಯವಿದೆ. ಅದು ಸಿಗಿದ್ದರೆ ಈ ಈಸಿ ಕೋಡ್ ಪ್ರಯತ್ನಿಸಿ. *2767*3855# ಇದು ಫೋನ್ನ ಫ್ಯಾಕ್ಟರಿ ರಿಸೆಟ್ ಮಾಡುವ ಸರಳ ಕೋಡ್ ಆಗಿದೆ.
ಡಾಟಾ SMS ಮೆಸೇಜ್ಗಳನ್ನು ಪರೀಕ್ಷಿಸಿಲು ಇಂದಿನ ದಿನಗಳಲ್ಲಿ ಇಂಟರ್ನೆಟ್ ಅತೀ ಅಗತ್ಯವಾಗಿದೆ. ಪ್ರತಿದಿನದ ಇಂಟರ್ನೆಟ್ ಕೋಟಾಗಳನ್ನು ಹೊರತುಪಡಿಸಿಯೂ ಎಕ್ಸ್ಟಾ ಡಾಟಾ ಬಳಕೆ ಮಾಡುವವರೂ ಇದ್ದಾರೆ. ಕೆಲವೊಮ್ಮ ನಿಮ್ಮ ಡೇಟಾ ಅಥವಾ ಇಂಟರ್ನೆಟ್ ಖಾಲಿಯಾಗಿದೆ ಎಂದು ಗೊತ್ತಾಗುವುದೇ SMS ಬಂದ ಬಳಿಕ. ಅಷ್ಟರಲ್ಲಿ ನಿಮ್ಮ ಇಂಟರ್ನೆಟ್ ಖಾಲಿಯಾಗಿರುತ್ತದೆ. ಅದರ ಬದಲು ಈ ಸರಳ ವಿಧಾನದ ಮೂಲಕ ನಿಮ್ಮ ಡಾಟಾ ಎಷ್ಟಿದೆ ಎನ್ನುವುದನ್ನು ತಿಳಿಯಿರಿ. ನಿಮ್ಮ ಡಯಲ್ ಪ್ಯಾಡ್ನಲ್ಲಿ *3282# ಅನ್ನು ಹಾಕಿದಾಗ ನಿಮ್ಮ ದೈನಂದಿನ ಡಾಟಾ ಹಾಗೂ ಆ ಕ್ಷಣದಲ್ಲಿ ಉಳಿದಿರುವ ಇಂಟರ್ನೆಟ್ಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಇದನ್ನೂ ಓದಿ:
WhatsApp: ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ಫೀಚರ್ ಬಗ್ಗೆ ಫಿದಾ ಆದ ಟೆಕ್ ಪ್ರಿಯರು
Published On - 8:33 am, Mon, 17 January 22