AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Number One Camera Phone: ಇದುವೇ ನೋಡಿ ವಿಶ್ವದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು: ಐಫೋನ್ ನಂಬರ್ ಒನ್ ಅಲ್ಲ

World Best Camera Phone in 2025: ಇಂದು ಡಿಎಸ್ಎಲ್ಆರ್ ಕ್ಯಾಮೆರಾಕ್ಕೆ ಸ್ಪರ್ಧೆ ಕೊಡುವಂತಹ ಸ್ಮಾರ್ಟ್ಫೋನ್ ಕ್ಯಾಮೆರಾಗಳು ಮಾರುಕಟ್ಟೆಗೆ ಬರುತ್ತಿವೆ. ಬಲಿಷ್ಠ ಕ್ಯಾಮೆರಾ ಸಂವೇದಕದೊಂದಿಗೆ ಕೆಲ ಕಂಪನಿಗಳು ಮೊಬೈಲ್ ಅನ್ನು ಬಿಡುಗಡೆ ಮಾಡುತ್ತಿವೆ. ಹಾಗಾದರೆ ಸದ್ಯ ವಿಶ್ವದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್ ಯಾವುದು?, ಅಚ್ಚರಿ ಎಂದರೆ ಇದರಲ್ಲಿ ಆಪಲ್ ಐಫೋನ್ ನಂಬರ್ ಒನ್ ಸ್ಥಾನದಲ್ಲಿಲ್ಲ.

Number One Camera Phone: ಇದುವೇ ನೋಡಿ ವಿಶ್ವದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು: ಐಫೋನ್ ನಂಬರ್ ಒನ್ ಅಲ್ಲ
Iphone 17 Pro And Huawei Pura 80 Ultra
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 01, 2025 | 12:58 PM

Share

ಬೆಂಗಳೂರು (ಅ. 01): ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಈಗ ವೃತ್ತಿಪರ ಕ್ಯಾಮೆರಾಗಳೊಂದಿಗೆ ಸ್ಪರ್ಧಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಅನೇಕ ಸ್ಮಾರ್ಟ್‌ಫೋನ್ ಕಂಪನಿಗಳು ಈಗ ಶಕ್ತಿಶಾಲಿ ಕ್ಯಾಮೆರಾ ಸಂವೇದಕಗಳನ್ನು ನೀಡುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಐಫೋನ್‌ನ (Apple iPhone) ಕ್ಯಾಮೆರಾ ಅತ್ಯುತ್ತಮ ಎಂದು ಹಲವರು ನಂಬಿದ್ದಾರೆ. ಆದರೆ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಐಫೋನ್ ವಿಶ್ವದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ. ವಿಶ್ವದ ಟಾಪ್ 5 ಕ್ಯಾಮೆರಾ ಫೋನ್‌ಗಳ ಪಟ್ಟಿಯನ್ನು ನೋಡುವುದಾದರೆ..

ಹುವೈ ಪ್ಯೂರ್ 80 ಅಲ್ಟ್ರಾ

ಹುವೈ ಪ್ಯೂರ್ 80 ಅಲ್ಟ್ರಾ (Huawei Pura 80 Ultra) ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಫೋನ್ ಆಗಿದೆ. ಇದು DXOMARK ನ ಉನ್ನತ ಕ್ಯಾಮೆರಾ ಫೋನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹುವೈ ಪ್ಯೂರ್ 80 ಅಲ್ಟ್ರಾ 1 ಇಂಚಿನ ಸಂವೇದಕದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, 40MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 3.7x ಮತ್ತು 9.4x ಆಪ್ಟಿಕಲ್ ಜೂಮ್‌ನೊಂದಿಗೆ ಡ್ಯುಯಲ್ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಸಿಸ್ಟಮ್ ಅನ್ನು ಒಳಗೊಂಡಿದೆ. ಪ್ರಾಥಮಿಕ ಕ್ಯಾಮೆರಾವು 1 ಇಂಚಿನ ದೊಡ್ಡ ಸಂವೇದಕ ಮತ್ತು ಅಡ್ಜಸ್ಟ್​ಟೆಬಲ್ ಇಮೇಜ್ ಕಂಟ್ರೋಲ್ ವೇರಿಯಬಲ್ ಅಪರ್ಚರ್ ಅನ್ನು ಹೊಂದಿದೆ, ಟೆಲಿಫೋಟೋ ಸೆಟಪ್ ವಿಸ್ತೃತ ಆಪ್ಟಿಕಲ್ ಜೂಮ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಈ ಫೋನ್ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಒಪ್ಪೋ ಫೈಂಡ್ X8 ಅಲ್ಟ್ರಾ

ಎರಡನೇ ಸ್ಥಾನದಲ್ಲಿ ಒಪ್ಪೋ ಫೈಂಡ್ X8 ಅಲ್ಟ್ರಾ ಇದೆ. ಒಪ್ಪೋ ಫೈಂಡ್ X8 ಅಲ್ಟ್ರಾ ಐದು ಸೆನ್ಸರ್‌ಗಳೊಂದಿಗೆ ಬಹುಮುಖ ಕ್ವಾಡ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ: 50MP 1-ಇಂಚಿನ ಪ್ರಾಥಮಿಕ ಸಂವೇದಕ, 50MP ಅಲ್ಟ್ರಾ-ವೈಡ್ ಕ್ಯಾಮೆರಾ, 50MP 3x ಪೆರಿಸ್ಕೋಪ್ ಟೆಲಿಫೋಟೋ, 50MP 6x ಪೆರಿಸ್ಕೋಪ್ ಟೆಲಿಫೋಟೋ ಮತ್ತು ಬಣ್ಣ ತಾಪಮಾನವನ್ನು ನಿಯಂತ್ರಿಸಲು ಕ್ರೋಮಾ ಸೆನ್ಸರ್ ಇದೆ. ಈ ಫೋನ್ ಕೂಡ ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ
Image
ನಿಮ್ಮ ಐಫೋನ್‌ನ ಬ್ಯಾಟರಿ ಯಾವಾಗ ಬದಲಾಯಿಸಬೇಕು?
Image
ನಿಮ್ಮ ಸಿಮ್ ಕಾರ್ಡ್ ಅನ್ನು ಇ-ಸಿಮ್ ಆಗಿ ಪರಿವರ್ತಿಸುವುದು ಹೇಗೆ?
Image
ವಾಟ್ಸ್ಆ್ಯಪ್​ನಲ್ಲಿ ಒಂದೇ ದಿನ ಅನೇಕ ಫೀಚರ್ಸ್ ಬಿಡುಗಡೆ
Image
ಏನಿದು ಅರಟ್ಟೈ ಆ್ಯಪ್: ಇದು ಭಾರತದ ನಂ. 1 ಮೆಸೇಜಿಂಗ್ ಆ್ಯಪ್ ಆಗಿದ್ದು ಹೇಗೆ?

Tech Tips: ನಿಮ್ಮ ಐಫೋನ್‌ನ ಬ್ಯಾಟರಿ ಯಾವಾಗ ಬದಲಾಯಿಸಬೇಕು?: ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ

ಆಪಲ್ ಐಫೋನ್ 17 ಪ್ರೊ

ಈ ಪಟ್ಟಿಯಲ್ಲಿ ಆಪಲ್ ಐಫೋನ್ 17 ಪ್ರೊ ಮೂರನೇ ಸ್ಥಾನದಲ್ಲಿದೆ. ಇದು 5x ಟೆಲಿಫೋಟೋ ಜೂಮ್ ಮತ್ತು ಸುಧಾರಿತ ಕಂಪ್ಯೂಟೇಶನಲ್ ಫೋಟೋಗ್ರಫಿ ವೈಶಿಷ್ಟ್ಯಗಳೊಂದಿಗೆ ಟ್ರಿಪಲ್ 48MP ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ವಿಡಿಯೋ ರೆಕಾರ್ಡಿಂಗ್‌ನಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ 134,900 ರೂ.

ವಿವೋ X200 ಅಲ್ಟ್ರಾ

ಈ ಪಟ್ಟಿಯಲ್ಲಿ ವಿವೋ X200 ಅಲ್ಟ್ರಾ ನಾಲ್ಕನೇ ಸ್ಥಾನದಲ್ಲಿದೆ. ವಿವೋ X200 ಅಲ್ಟ್ರಾ ZEISS ಆಪ್ಟಿಕ್ಸ್‌ನೊಂದಿಗೆ 50MP ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 35mm ಪ್ರಾಥಮಿಕ ಲೆನ್ಸ್, 14mm ಅಲ್ಟ್ರಾ-ವೈಡ್ ಲೆನ್ಸ್ ಮತ್ತು 200-ಮೆಗಾಪಿಕ್ಸೆಲ್ ಟೆಲಿಫೋಟೋ ಸ್ಯಾಮ್‌ಸಂಗ್ HP9 ಸೆನ್ಸಾರ್ ಅನ್ನು ಒಳಗೊಂಡಿದೆ. 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ನಲ್ಲಿ ಅತ್ಯುತ್ತಮ ಕಡಿಮೆ-ಬೆಳಕಿನ ಛಾಯಾಗ್ರಹಣಕ್ಕಾಗಿ ಕಂಪನಿಯು ಸೋನಿ LYT-818 ಸೆನ್ಸರ್ ಅನ್ನು ಗಿಂಬಲ್ ಸ್ಟೆಬಿಲೈಸೇಶನ್‌ನೊಂದಿಗೆ ಬಳಸಿದೆ. ಈ ಫೋನ್ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್

ಈ ಪಟ್ಟಿಯಲ್ಲಿ ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್ ಐದನೇ ಸ್ಥಾನದಲ್ಲಿದೆ. ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್, 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 100x ಪ್ರೊರೆಸಲ್ಯೂಷನ್ ಜೂಮ್ ಹೊಂದಿರುವ 48-ಮೆಗಾಪಿಕ್ಸೆಲ್ 5x ಟೆಲಿಫೋಟೋ ಲೆನ್ಸ್ ಸೇರಿವೆ. ಇದರ ಬೆಲೆ ಭಾರತದಲ್ಲಿ 124,999 ರೂ. ಆಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ