ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಸ್ಮಾರ್ಟ್‌ಫೋನ್‌ಗಳಿಗೆ (Smartphone) ಭಾರಿ ಡಿಸ್ಕೌಂಟ್ ಮೇಳ ಹಮ್ಮಿಕೊಳ್ಳಲಾಗಿದೆ. ಅದುವೇ ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾನ್ಜಾ ಸೇಲ್ (Mobiles Bonanza sale). ಏಪ್ರಿಲ್ 6ಕ್ಕೆ ಆರಂಭವಾಗಿರುವ ಈ ಆಫರ್‌ಗಳ ಮೇಳವು ಏಪ್ರಿಲ್ 10ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರಿ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ನೊ-ಕಾಸ್ಟ್ ಇಎಂಐ ಮುಂತಾದ ಸೌಲಭ್ಯಗಳು ದೊರೆಯುತ್ತಿದೆ. ಈ ಸೇಲ್‌ನಲ್ಲಿ ಸ್ಯಾಮ್ಸಂಗ್, ಗೂಗಲ್ ಪಿಕ್ಸೆಲ್, ಐಕ್ಯೂ, ಮೋಟೋರೊಲಾ ಹೀಗೆ ಜನಪ್ರಿಯ ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾನ್ಜಾ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿಗೆ ದೊರಕುತ್ತಿರುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಯಾವುವು?, ಇಲ್ಲಿದೆ ನೋಡಿ.
ಸ್ಯಾಮ್ಸಂಗ್ ಗ್ಯಾಲಕ್ಸಿ A34: ಇತ್ತೀಚೆಗಷ್ಟೆ ಬಿಡುಗಡೆ ಆದ ಗ್ಯಾಲಕ್ಸಿ A34 ಸ್ಮಾರ್ಟ್ಫೋನ್ ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ. ಇದರ ಮೂಲಬೆಲೆ 30.999 ರೂ. ಆದರೆ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಕೇವಲ 28,999 ರೂ. ಗೆ ಸೇಲ್ ಆಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಅನ್ನು ಹೊಂದಿದೆ. ಆಕರ್ಷಕ ಕ್ಯಾಮೆರಾ, ಬ್ಯಾಟರಿ ಕೂಡ ನೀಡಲಾಗಿದೆ.
ಐಕ್ಯೂ ನಿಯೋ 7 5G: ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಬಲಿಷ್ಠವಾದ ಪ್ರೊಸೆಸರ್ ಮತ್ತು 120W ಫ್ಲ್ಯಾಷ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿರುವ ಐಕ್ಯೂ ನಿಯೋ 7 ಸ್ಮಾರ್ಟ್ಫೋನ್ ಅನ್ನು 29,990 ರೂ. ಖರೀದಿಸಬಹುದು. ಇದರ ಜೊತೆಗೆ ಬ್ಯಾಂಕ್ ಆಪರ್ ಮೂಲಕ 1000 ರೂ. ರಿಯಾಯಿತಿ ಪಡೆಯಬಹುದು.
Moto G13: ಬೆಲೆ ಇಳಿಕೆ: ಕೈಗೆಟಕುವ ದರಕ್ಕೆ ಮಾರಾಟ ಆಗುತ್ತಿದೆ ಮೋಟೋ G13 ಸ್ಮಾರ್ಟ್ಫೋನ್
ಗೂಗಲ್ ಪಿಕ್ಸೆಲ್ 6a: ಕ್ಯಾಮೆರಾ ಮೂಲಕವೇ ಸ್ಮಾರ್ಟ್ಪ್ರೋನ್ ಪ್ರಿಯರ ನಿದ್ದೆ ಕೆಡಿಸಿರುವ ಗೂಗಲ್ ಪಿಕ್ಸೆಲ್ 6a ಫೋನ್ ಅತ್ಯಂತ ಕಡಿಮೆ ದರಕ್ಕೆ ಸೇಲ್ ಆಗುತ್ತಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12MP ಸೋನಿ ಸಂವೇದಕವನ್ನು ಹೊಂದಿದೆ. 12MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 29,999 ರೂ. ಗೆ ನಿಮ್ಮದಾಗಿಸಬಹುದು.
ನಥಿಂಗ್ ಫೋನ್ 1: ಕಳೆದ ವರ್ಷ ಬಿಡುಗಡೆ ಆದ ನಥಿಂಗ್ ಫೋನ್ 1 ಈಗಲೂ ಟ್ರೆಂಡಿಂಗ್ನಲ್ಲಿದೆ. ಈ ಫೋನಿನ ಹಿಂಭಾಗದಲ್ಲಿ ಅದ್ಭುತವಾದ ಎರಡು ಕ್ಯಾಮೆರಾಗಳಿವೆ. ಇದರ 8GB RAM ಮತ್ತು 128GB ಸಂಗ್ರಹಣೆಯ ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾನ್ಜಾ ಸೇಲ್‌ನಲ್ಲಿ 29,999 ರೂ. ಗೆ ಮಾರಾಟ ಆಗುತ್ತಿದೆ.
ಒಪ್ಪೋ ರೆನೊ 8T: ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 695 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 67W ವೇಗದ ಚಾರ್ಜಿಂಗ್ ಜೊತೆಗೆ 4800mAh ಬ್ಯಾಟರಿ ನೀಡಲಾಗದೆ. 108 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾ, 2MP ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಸೆಲ್ಫೀಗಾಗಿ 32MP ಅಳವಡಿಸಲಾಗಿದೆ. ಪ್ರಸ್ತುತ, ಈ ಫೋನ್ 29999 ರೂ. ಗೆ ನಿಮ್ಮದಾಗಿಸಬಹುದು. ಜೊತೆಗೆ, HDFC, ICICI, Kotak ಮತ್ತು SBI ಬ್ಯಾಂಕ್ ಕಾರ್ಡ್‌ಗಳ ಮೇಲೆ 3000 ರಿಯಾಯಿತಿ ಘೋಷಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sun, 9 April 23