Tech Tips: ಫೋನ್​ನಲ್ಲಿ ಮಾತನಾಡುತ್ತಿರುವಾಗ ದಿಢೀರ್ ಕಾಲ್ ಕಟ್ ಆಗುತ್ತಾ?: ಅಲ್ಲೊಂದು ಸಮಸ್ಯೆ ಇದೆ

|

Updated on: Feb 13, 2024 | 12:26 PM

Call Drop Problem: ನೀವು ಸ್ಮಾರ್ಟ್​ಫೋನ್​ನಲ್ಲಿ ಯಾರೊಂದಿಗಾದರು ಮಾತನಾಡುತ್ತಿರುವಾಗ ದಿಢೀರ್ ಕಾಲ್ ಕಟ್ ಆದರೆ ಸಮಸ್ಯೆ ಇದೆ ಎಂದು ಅರ್ಥ. ಇದನ್ನು ಕಾಲ್ ಡ್ರಾಪ್ ಎಂದು ಕರೆಯುತ್ತಾರೆ. ಈ ಸಮಸ್ಯೆಗೆ ಪರಿಹಾರ ಕೂಡ ಇದೆ. ಇದರ ಕುರಿತು ನಿಮಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Tech Tips: ಫೋನ್​ನಲ್ಲಿ ಮಾತನಾಡುತ್ತಿರುವಾಗ ದಿಢೀರ್ ಕಾಲ್ ಕಟ್ ಆಗುತ್ತಾ?: ಅಲ್ಲೊಂದು ಸಮಸ್ಯೆ ಇದೆ
Call Drop Problem
Follow us on

ಸ್ಮಾರ್ಟ್​ಫೋನ್‌ನಲ್ಲಿ (Smartphone) ತುರ್ತಾಗಿ ಒಂದು ಕರೆಯಲ್ಲಿ ಇರುತ್ತೇವೆ, ಆಗ ಇದ್ದಕ್ಕಿದ್ದಂತೆ ಫೋನ್ ಕಟ್ ಆಗುತ್ತದೆ. ಏನಾಯಿತು ಎಂದು ಅರ್ಥವಾಗುವುದಿಲ್ಲ. ಫೋನ್‌ನ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಕರೆ ಕಟ್ ಮಾಡಿರಬಹುದು ಎಂದು ಭಾವಿಸುತ್ತೇವೆ. ಪುನಃ ಕರೆ ಮಾಡಿ ಕೇಳಿದಾಗ ಆತ ಕೂಡ ಕಾಲ್ ಕಟ್ ಮಾಡಿಲ್ಲ ಎಂದು ಹೇಳುತ್ತಾನೆ. ಇದು ಆಗಾಗ್ಗೆ ಸಂಭವಿಸುತ್ತದೆ. ಫೋನ್ ಮಾತನಾಡುತ್ತಿರುವ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗುವ ಸಮಸ್ಯೆಯನ್ನು ಕಾಲ್ ಡ್ರಾಪ್ ಎಂದು ಕರೆಯಲಾಗುತ್ತದೆ. ನಿಮಗೆ ಕೂಡ ಈ ಸಮಸ್ಯೆ ಆಗುತ್ತಿದ್ದೆಯಾ?.

ಈ ಸಮಸ್ಯೆಗೆ ಪರಿಹಾರವಿದೆ. ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ, ಇದರಿಂದಾಗಿ ಈ ಸಮಸ್ಯೆ ಏಕೆ ಸಂಭವಿಸುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಐಫೋನ್ 15 ಪ್ರೊ ನಿಂದ ಪೋಕೋ X6 ವರೆಗೆ, ಅಮೆಜಾನ್​ನಲ್ಲಿ ಭಾರೀ ರಿಯಾಯಿತಿ

ಸಿಮ್ ಕಾರ್ಡ್ ಸಮಸ್ಯೆ:

ಮೊದಲಿಗೆ, ನಿಮ್ಮ ಪ್ರದೇಶದಲ್ಲಿ ಉತ್ತಮ ನೆಟ್‌ವರ್ಕ್ ಇರುವ ಸಿಮ್ ಕಾರ್ಡ್ ಅನ್ನು ಆಯ್ಕೆಮಾಡಿ. ನೀವು ವಿವಿಧ ಆಪರೇಟರ್‌ಗಳ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಹೋಲಿಸಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಫುಲ್ ನೆಟ್​ವಾರ್ಕ್ ಇರುವ ಸಿಮ್ ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಕಾಲ್ ಡ್ರಾಪ್ ಸಮಸ್ಯೆ ಹೆಚ್ಚಾಗಿ ನೆಟ್‌ವರ್ಕ್‌ನಿಂದ ಉಂಟಾಗುತ್ತದೆ.

ಸಿಗ್ನಲ್ ಕಾರಣ:

ಕರೆ ಮಾಡಲು ಯಾವಾಗಲೂ ಉತ್ತಮ ಸಂಪರ್ಕ ಅಥವಾ ಸಿಗ್ನಲ್ ಅಗತ್ಯವಿರುತ್ತದೆ. ನೀವು ಫೋನ್​ನಲ್ಲಿ ಮನೆಯೊಳಗೆ ಮಾತನಾಡುವಾಗ ಮಾತ್ರ ಈ ಸಮಸ್ಯೆ ಆಗುತ್ತಿದ್ದರೆ, ನಿಮ್ಮ ಮನೆಯ ಒಳಗೆ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ ಎಂದರ್ಥ. ಆದ್ದರಿಂದ ಫೋನ್ ಸಂಪರ್ಕ ಕಡಿತಗೊಳ್ಳುತ್ತಿದೆ. ಹಾಗಾಗಿ ಫೋನ್ ಬಂದ ಸಂದರ್ಭ ಮನೆಯಿಂದ ಹೊರಗೆ ಬನ್ನಿ ಅಥವಾ ಟೆಲಿಕಾಂ ಆಪರೇಟರ್ ಅವರಿಗೆ ದೂರು ನೀಡಿ.

ಯಾರಾದರು ನಿಮಗೆ ತಪ್ಪಾಗಿ ಹಣ ಕಳುಹಿಸಿದರೆ ಖುಷಿ ಪಡಬೇಡಿ: ಇದರ ಹಿಂದಿದೆ ಅತಿ ದೊಡ್ಡ ಜಾಲ

ಫೋನ್ ಕವರ್ ತೆಗೆದುಹಾಕಿ:

ಕೆಲವೊಮ್ಮೆ ಫೋನಿನ ಹಿಂಬದಿಯ ಕವರ್ ನಿಂದಾಗಿಯೂ ಈ ಸಮಸ್ಯೆ ಎದುರಾಗಬಹುದು. ಈ ರೀತಿಯ ಕಾಲ್ ಡ್ರಾಪ್ ಸಮಸ್ಯೆ ಉಂಟಾದರೆ, ಫೋನ್ ಕವರ್ ತೆರೆದು ಕರೆ ಮಾಡಲು ಪ್ರಯತ್ನಿಸಿ. ಲಭ್ಯವಿದ್ದರೆ ನೀವು ವೈ-ಫೈ ಕರೆಯನ್ನು ಸಹ ಬಳಸಬಹುದು. ಆದರೆ ಎಲ್ಲಾ ಫೋನ್‌ಗಳು ಈ ವೈಶಿಷ್ಟ್ಯವನ್ನು ಹೊಂದಿರುವುದಿಲ್ಲ.

TRAI MyCall ಅಪ್ಲಿಕೇಶನ್:

TRAI MyCall ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ನೀವು ಕರೆ ಡ್ರಾಪ್ ಸಮಸ್ಯೆಗಳನ್ನು ವರದಿ ಮಾಡಬಹುದು. ನಿಮ್ಮ ಕರೆ ಗುಣಮಟ್ಟದ ಡೇಟಾವನ್ನು ರೆಕಾರ್ಡ್ ಮಾಡಲು ಮತ್ತು ಅದನ್ನು TRAI ಗೆ ಕಳುಹಿಸಲು ಈ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ವರದಿ ಮಾಡಿದ ನಂತರ TRAI ನಿಮ್ಮ ನೆಟ್‌ವರ್ಕ್ ಅನ್ನು ಸುಧಾರಿಸಲು ಸೇವಾ ಪೂರೈಕೆದಾರರನ್ನು ಸಂಪರ್ಕಿಸುತ್ತದೆ. ಈ ಮೂಲಕ ಸಮಸ್ಯೆ ಬಹಳ ಸುಲಭವಾಗಿ ಪರಿಹರಿಯುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ