AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day gift: ಐಫೋನ್ 15 ಪ್ರೊ ನಿಂದ ಪೋಕೋ X6 ವರೆಗೆ, ಅಮೆಜಾನ್​ನಲ್ಲಿ ಭಾರೀ ರಿಯಾಯಿತಿ

Amazon Valentine's Day Offer: ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಪ್ರೀತಿ ಪಾತ್ರರಿಗೆ ಒಂದೊಳ್ಳೆ ಗಿಫ್ಟ್ ನೀಡಬೇಕೆಂದು ನೀವು ಹುಡುಕುತ್ತಿದ್ದರೆ ಅಮೆಜಾನ್ ವಿಶೇಷ ಆಫರ್ ಘೊಷಣೆ ಮಾಡಿದೆ. ಅಮೆಜಾನ್​ನಲ್ಲಿ ಟಾಪ್ ಸ್ಮಾರ್ಟ್‌ಫೋನ್‌ಗಳಾದ ಐಫೋನ್ 15 ಪ್ರೊ, ಐಫೋನ್ 15, ಪೋಕೋ X6 ಮತ್ತು ಹೆಚ್ಚಿನ ಫೋನುಗಳ ಮೇಲೆ ಭಾರಿ ಬೆಲೆ ಕಡಿತವನ್ನು ಘೋಷಿಸಿದೆ.

Valentine's Day gift: ಐಫೋನ್ 15 ಪ್ರೊ ನಿಂದ ಪೋಕೋ X6 ವರೆಗೆ, ಅಮೆಜಾನ್​ನಲ್ಲಿ ಭಾರೀ ರಿಯಾಯಿತಿ
Apple iPhone
Vinay Bhat
|

Updated on:Feb 13, 2024 | 12:12 PM

Share

ಪ್ರೇಮಿಗಳ ದಿನಕ್ಕೆ (Valentine’s Day) ಕೇವಲ ಒಂದು ದಿನ ಮಾತ್ರ ಉಳಿದಿದೆ. ನಿಮ್ಮ ಪ್ರೀತಿಪಾತ್ರರಿಗೆ ಸ್ಮರಣೀಯ ಉಡುಗೊರೆಯನ್ನು ಖರೀದಿಸಲು ನಿಮಗೆ ಕೆಲವೇ ಗಂಟೆಗಳಿವೆ. ನೀವು ಏನಾದರು ವಿಶೇಷ ಗಿಫ್ಟ್ ಅನ್ನು ಹುಡುಕುತ್ತಿದ್ದರೆ, ಈ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಇದಕ್ಕಾಗಿ ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ ವಿಶೇಷ ಆಫರ್ ಘೋಷಿಸಿದೆ. ಅಮೆಜಾನ್​ನಲ್ಲಿ ಟಾಪ್ ಸ್ಮಾರ್ಟ್‌ಫೋನ್‌ಗಳಾದ ಐಫೋನ್ 15 ಪ್ರೊ, ಐಫೋನ್ 15, ಪೋಕೋ X6 ಮತ್ತು ಹೆಚ್ಚಿನ ಫೋನುಗಳ ಮೇಲೆ ಭಾರಿ ಬೆಲೆ ಕಡಿತವನ್ನು ಘೋಷಿಸಿದೆ. ಇದರಲ್ಲಿ ವ್ಯಾಲೆಂಟೈನ್ಸ್ ಡೇ ಉಡುಗೊರೆಯನ್ನು ನೀವು ಸುಲಭವಾಗಿ ಕಡಿಮೆ ಬೆಲೆಗೆ ಪಡೆದುಕೊಳ್ಳಬಹುದು.

ಆ್ಯಪಲ್ ಐಫೋನ್ 15 ಪ್ರೊ:

ಐಫೋನ್ 15 ಪ್ರೊ 6.1-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ ಜೊತೆಗೆ ಟೈಟಾನಿಯಂ ಫ್ರೇಮ್ ಅನ್ನು ಹೊಂದಿದೆ. ಇದು A17 ಪ್ರೊ SoC, 6-ಕೋರ್ CPU ನಿಂದ ಚಾಲಿತವಾಗಿದೆ. ಐಫೋನ್ 15 ಪ್ರೊ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದು 48 ಎಂಪಿ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ, ಇದರಲ್ಲಿ ಅದ್ಭುತ ಫೋಟೋದ ಗುಣಮಟ್ಟಕ್ಕಾಗಿ 7 ಪ್ರೊ ಲೆನ್ಸ್‌ಗಳನ್ನು ಅಳವಡಿಸಲಾಗಿದೆ. ನೀವು ಈ ಫೋನನ್ನು ಅಮೆಜಾನ್​ನಲ್ಲಿ ಕೇವಲ ರೂ. 1,37,990 ರೂ. ಗೆ ಖರೀದಿಸಬಹುದು.

ಯಾರಾದರು ನಿಮಗೆ ತಪ್ಪಾಗಿ ಹಣ ಕಳುಹಿಸಿದರೆ ಖುಷಿ ಪಡಬೇಡಿ: ಇದರ ಹಿಂದಿದೆ ಅತಿ ದೊಡ್ಡ ಜಾಲ

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE:

ಗ್ಯಾಲಕ್ಸಿ S23 FE ಫೋನ್ 6.4-ಇಂಚಿನ FHD+ ಡೈನಾಮಿಕ್ AMOLED 2X ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್​ರೇಟ್ ಹೊಂದಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್​ನೊಂದಿಗೆ ಬರುತ್ತಿದೆ. ಇದರಲ್ಲಿ 50MP ವೈಡ್ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಕ್ಯಾಮೆರಾವನ್ನು ನೀಡಲಾಗಿದೆ. ಮುಂಭಾಗದ ಕ್ಯಾಮೆರಾ 10MP ಸೆಲ್ಫಿ ಶೂಟರ್ ಆಗಿದೆ. 50MP ಕ್ಯಾಮೆರಾವು 3X ಆಪ್ಟಿಕಲ್ ಜೂಮ್ ಅನ್ನು ಒಳಗೊಂಡಿದೆ. ಎಕ್ಸಿನೊಸ್ 2200 SoC ನಿಂದ ಚಾಲಿತವಾಗಿದೆ. 4500mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವರೆಗೆ ವೇಗವಾಗಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಅಮೆಜಾನ್​ನಲ್ಲಿ ರೂ. 48,999 ಕ್ಕೆ ಸೇಲ್ ಆಗುತ್ತಿದೆ.

ಆ್ಯಪಲ್ ಐಫೋನ್ 15:

ಐಫೋನ್ 15 6.1-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ ಜೊತೆಗೆ ಡೈನಾಮಿಕ್ ಐಲ್ಯಾಂಡ್‌ನೊಂದಿಗೆ ಬರುತ್ತದೆ. 5-ಕೋರ್ GPU ಮತ್ತು USB-C ಪೋರ್ಟ್ ಚಾರ್ಜಿಂಗ್‌ನೊಂದಿಗೆ A16 ಬಯೋನಿಕ್ ಚಿಪ್‌ಸೆಟ್‌ನಿಂದ ಈ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. ಇದು 48MP ಮುಖ್ಯ ಕ್ಯಾಮೆರಾ ಮತ್ತು 12MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಐಫೋನ್ 15 20 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಶೇಕಡಾ 14 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ, ಇದು ಪ್ರೇಮಿಗಳ ದಿನಕ್ಕೆ ಉತ್ತಮ ಉಡುಗೊರೆಯಾಗಿದೆ.

ವ್ಯಾಲೆಂಟೈನ್ಸ್ ಡೇ ಸೇಲ್​ನಲ್ಲಿ ಖರೀದಿಗೆ ಕ್ಯೂ: ಅತಿ ಕಡಿಮೆ ಬೆಲೆಗೆ 200MP ಕ್ಯಾಮೆರಾ ಫೋನ್

ಆ್ಯಪಲ್ ಐಫೋನ್ 14:

ಆ್ಯಪಲ್ ಐಫೋನ್ 14 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಈ ಫೋನ್ ಕೂಡ 20 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಟೈಮ್ ಅನ್ನು ನೀಡುತ್ತದೆ. ಇದರಲ್ಲಿ iOS17 ನವೀಕರಣವನ್ನು ಬೆಂಬಲಿಸುತ್ತದೆ. 12MP ಡ್ಯುಯಲ್ ಕ್ಯಾಮೆರಾ ಮತ್ತು 12MP ಫ್ರಂಟ್ ಕ್ಯಾಮೆರಾ ಸೇರಿದಂತೆ ಸುಧಾರಿತ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಸುಗಮ ಕಾರ್ಯಕ್ಷಮತೆಗಾಗಿ 5-ಕೋರ್ GPU ಜೊತೆಗೆ A15 ಬಯೋನಿಕ್ ಚಿಪ್ ಅನ್ನು ಹೊಂದಿದೆ. ಇದು ಸೂಪರ್‌ಫಾಸ್ಟ್ 5G ಸೆಲ್ಯುಲಾರ್ ಸಂಪರ್ಕವನ್ನು ಸಹ ಪಡೆಯುತ್ತದೆ. ಅಮೆಜಾನ್​ನಲ್ಲಿ, ಐಫೋನ್ 14 ಶೇಕಡಾ 17 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.

ಪೋಕೋ X6 5G:

ಪೋಕೋ X6 ಫೋನ್ 6.67-ಇಂಚಿನ 1.5K OLED 12-ಬಿಟ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 1800nits ಗರಿಷ್ಠ ಹೊಳಪನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಆಕ್ಟಾ-ಕೋರ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 2 ಪ್ರೊಸೆಸರ್ ಅನ್ನು 12GB LPDDR4xRAM ನೊಂದಿಗೆ ಜೋಡಿಸಲಾಗಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ 64MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಮುಂಭಾಗದಲ್ಲಿ, 16MP ಸೆಲ್ಫಿ ಕ್ಯಾಮೆರಾ ಇದೆ. ಅಮೆಜಾನ್​ನಲ್ಲಿ 26 ಶೇಕಡಾ ರಿಯಾಯಿತಿಯೊಂದಿಗೆ ನೀವು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Tue, 13 February 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ