ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ

ಈ ಎಂಟು ಅಪ್ಲಿಕೇಷನ್​ಗಳನ್ನು ನಿಮ್ಮ ಆಂಡ್ರಾಯಿಡ್ ಸ್ಮಾರ್ಟ್​ಫೋನ್​ನಿಂದ ಮೊದಲು ಡಿಲೀಟ್ ಮಾಡಿ. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ, ಎಚ್ಚರಿಕೆ.

ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on:Apr 23, 2021 | 2:23 PM

ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಹಾಗಿದ್ದಲ್ಲಿ ಈ ಲೇಖನವನ್ನು ಎಚ್ಚರಿಕೆಯಿಂದ ಓದಿ ಹಾಗೂ ತುಂಬ ಜಾಗರೂಕರಾಗಿರಿ. ಏಕೆಂದರೆ, ಇತ್ತೀಚೆಗೆ ಹೊಸ ಮಾಲ್‌ವೇರ್ ಪತ್ತೆಯಾಗಿದ್ದು, ಅದು ಬಳಕೆದಾರರ ಫೋನ್‌ಗಳಿಗೆ ಹಾನಿ ಉಂಟುಮಾಡುತ್ತಿದೆ. ಒಟ್ಟು 8 ಆಂಡ್ರಾಯ್ಡ್ ಅಪ್ಲಿಕೇಷನ್‌ಗಳು ಪತ್ತೆಯಾಗಿದ್ದು, ಇದರಲ್ಲಿ ಈ ವೈರಸ್ ಇದೆ. ಆಗ್ನೇಯ ಏಷ್ಯಾ ಮತ್ತು ಅರೇಬಿಯನ್ ಪೆನಿನ್ಸುಲಾದ ಗ್ರಾಹಕರನ್ನು ಈ ವೈರಸ್ ಗುರಿಯನ್ನಾಗಿ ಮಾಡಿಕೊಂಡಿದೆ. McAfee Cell Analysis ಪ್ರಕಾರ, ಈ ಅಪ್ಲಿಕೇಷನ್‌ಗಳು 7,00,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿವೆ.

ಬಳಕೆದಾರರ ಫೋನ್‌ಗಳಲ್ಲಿ ಫೋಟೋ ಎಡಿಟರ್, ವಾಲ್‌ಪೇಪರ್, ಕೀಬೋರ್ಡ್ ಸ್ಕಿನ್ ಮತ್ತು ಅನೇಕ ಕ್ಯಾಮೆರಾ ಸಂಬಂಧಿತ ಅಪ್ಲಿಕೇಷನ್‌ಗಳ ಮೂಲಕ ಈ ಮಾಲ್‌ವೇರ್ ಪ್ರವೇಶಿಸುತ್ತಿವೆ. ಈ ವಂಚಕ ಅಪ್ಲಿಕೇಷನ್‌ಗಳಲ್ಲಿ ಇರುವ ಮಾಲ್‌ವೇರ್ SMS ನೋಟಿಫಿಕೇಷನ್​ಗಳನ್ನು ಕಳುವು ಮಾಡಿ, ಆ ನಂತರ ಅನಧಿಕೃತ ಖರೀದಿಗಳನ್ನು ಮಾಡುತ್ತವೆ. ವರದಿಯ ಪ್ರಕಾರ, ಅವಲೋಕನಕ್ಕಾಗಿ ಸಾಮಾನ್ಯ ಮಾದರಿಯನ್ನು ತೋರಿಸುವ ಮೂಲಕ ಅಪ್ಲಿಕೇಷನ್ ಗೂಗಲ್ ಪ್ಲೇ ರೀಟೇಲರ್​ಗೆ ಸ್ವತಃ ಸಾಬೀತಾಯಿತು ಮತ್ತು ನಂತರ ಅಪ್​ಡೇಟ್ ಮೂಲಕ ಅಪಾಯಕಾರಿ ಕೋಡ್ ಅನ್ನು ಪ್ರಾರಂಭಿಸಿತು. ಅಂದರೆ, ಮೊದಲ ಅಪ್ಲಿಕೇಷನ್‌ನ ಸಾಮಾನ್ಯ ಕೆಲಸದ ಆವೃತ್ತಿಯನ್ನು ಪ್ರಾರಂಭಿಸಲಾಯಿತು ಮತ್ತು ನಂತರ ಅದನ್ನು ಅಪ್​ಡೇಟ್ ಮಾಡಲಾಗಿದೆ.

McAfee ಸೆಲ್ ಸುರಕ್ಷತಾ ಎಚ್ಚರಿಕೆಗಳು McAfee ಸೆಲ್ ಸೇಫ್ಟಿಯು ಆಂಡ್ರಾಯ್ಡ್ / ಎಟಿನು ರೂಪದಲ್ಲಿ ಈ ಆತಂಕವನ್ನು ಪತ್ತೆ ಮಾಡಿದೆ ಮತ್ತು ಗ್ರಾಹಕರನ್ನು ಎಚ್ಚರಿಸಿದೆ. ಈ ಅಪ್ಲಿಕೇಷನ್‌ಗಳಲ್ಲಿ, ಪ್ರಸ್ತುತ ಡೈನಾಮಿಕ್ ಕೋಡ್ ಲೋಡಿಂಗ್ ಮೂಲಕ ಮಾಲ್‌ವೇರ್ ದಾಳಿ ಮಾಡುತ್ತದೆ. ಮಾಲ್‌ವೇರ್‌ನ ಎನ್‌ಕ್ರಿಪ್ಟ್ ಮಾಡಿದ ಪೇಲೋಡ್‌ಗಳು ಅಪ್ಲಿಕೇಷನ್‌ಗೆ ಹೋಲುವ ಫೋಲ್ಡರ್‌ಗಳನ್ನು ಸಹ ಫೋನ್‌ಗೆ ಸೇರಿಸುತ್ತವೆ. ಇವು “cache.bin,” “settings.bin,” “knowledge.droid,” ಅಥವಾ “.png”ನಂತಹ ಹೆಸರುಗಳನ್ನು ಬಳಸುತ್ತವೆ.

ವೈರಸ್ ಪತ್ತೆ ಕಷ್ಟ ಒಟ್ಟಾರೆಯಾಗಿ, ಈ ವೈರಸ್ ನಿಮ್ಮ ಫೋನ್​ನಲ್ಲಿ ಅದ್ಯಾವ ಪರಿ ಸೇರಿಕೊಂಡು ಬಿಡುತ್ತವೆ ಅಂದರೆ ಅವುಗಳನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತದೆ. ಇದರ ನಂತರ, ಈ ಮಾಲ್​ವೇರ್ ತಾನಾಗಿಯೇ url ಅನ್ನು ತೆರೆಯುತ್ತದೆ ಮತ್ತು ಅನಧಿಕೃತ ಶಾಪಿಂಗ್ ಮಾಡುತ್ತದೆ. ಇಷ್ಟು ಮಾತ್ರವಲ್ಲ, ಈ ಮಾಲ್‌ವೇರ್ ನಿಮ್ಮ ನೋಟಿಫಿಕೇಷನ್​ಗಳ ಮೇಲೂ ನಿಗಾ ಮಾಡುತ್ತದೆ ಮತ್ತು ಫೋನ್‌ನ SMS ಅನ್ನು ಸಹ ಕಳುವು ಮಾಡುತ್ತದೆ. ನೀವು ಸಹ ಈ ಸಮಸ್ಯೆಯೊಂದಿಗೆ ಬಡಿದಾಡುತ್ತಿದ್ದಲ್ಲಿ ಈ ಅಪ್ಲಿಕೇಶನ್‌ಗಳನ್ನು ಅನ್ ಇನ್​ಸ್ಟಾಲ್ ಮಾಡಬೇಕಾಗುತ್ತದೆ.

ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ com.studio.keypaper2021 com.pip.editor.digicam org.my.favorites.up.keypaper com.tremendous.coloration.hairdryer com.ce1ab3.app.photograph.editor com.hit.digicam.pip com.daynight.keyboard.wallpaper Com.tremendous.star.ringtones

McAfee ಸೆಲ್ ಸಂಶೋಧನಾ ತಂಡವು ಪ್ರಸ್ತುತ ಈ ಅಪಾಯಕಾರಿ ಅಪ್ಲಿಕೇಷನ್‌ಗಳನ್ನು ನಿಗಾ ಮಾಡುತ್ತಿದೆ ಮತ್ತು ಈ ವೈರಸ್‌ಗಳನ್ನು ಶೀಘ್ರದಲ್ಲೇ ರಕ್ಷಣೆ ದೊರಕಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು

(Uninstall these 8 applications, which contains malware, would damage your Android smartphones)

Published On - 2:22 pm, Fri, 23 April 21

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು