Infinix Zero 5G: ವ್ಯಾಲಂಟೈನ್ಸ್ ಡೇಯಂದು ರಿಲೀಸ್ ಆಗಿದೆ ಈ ವಿಶೇಷ ಸ್ಮಾರ್ಟ್​ಫೋನ್​: ಬೆಲೆ ಕೇವಲ …

ಇನ್ಫಿನಿಕ್ಸ್‌ ಕಂಪನಿ ತನ್ನ ಹೊಸ ಇನ್ಫಿನಿಕ್ಸ್‌ ಜಿರೋ 5ಜಿ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿಂದು ಅನಾವರಣ ಮಾಡಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಇದರ ವಿಶೇಷತೆಯನ್ನು ಹಂಚಿಕೊಂಡಿದ್ದು, ಇದು ಇನ್ಫಿನಿಕ್ಸ್‌ ಕಂಪನಿಯ ಚೊಚ್ಚಲ 5G ಸ್ಮಾರ್ಟ್‌ಫೋನ್‌ ಆಗಿದೆ.

Infinix Zero 5G: ವ್ಯಾಲಂಟೈನ್ಸ್ ಡೇಯಂದು ರಿಲೀಸ್ ಆಗಿದೆ ಈ ವಿಶೇಷ ಸ್ಮಾರ್ಟ್​ಫೋನ್​: ಬೆಲೆ ಕೇವಲ ...
Infinix Zero 5G
Follow us
| Updated By: Vinay Bhat

Updated on: Feb 14, 2022 | 1:53 PM

ಇಂದು ಪ್ರೇಮಿಗಳ ದಿನದ (Valentine’s Day) ಪ್ರಯುಕ್ತ ಫೆಬ್ರವರಿ 14 ರಂದು ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಫೋನ್​ ಒಂದು ಬಿಡುಗಡೆ ಆಗಿದೆ. ಹೆಚ್ಚಾಗಿ ಅಗ್ಗದ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್ಫಿನಿಕ್ಸ್‌ ಕಂಪನಿ ತನ್ನ ಹೊಸ ಇನ್ಫಿನಿಕ್ಸ್‌ ಜಿರೋ 5ಜಿ (Infinix Zero 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿಂದು ಅನಾವರಣ ಮಾಡಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಇದರ ವಿಶೇಷತೆಯನ್ನು ಹಂಚಿಕೊಂಡಿದ್ದು, ಇದು ಇನ್ಫಿನಿಕ್ಸ್‌ ಕಂಪನಿಯ ಚೊಚ್ಚಲ 5G ಸ್ಮಾರ್ಟ್‌ಫೋನ್‌ ಆಗಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌, ಮೀಡಿಯಾಟೆಕ್‌ ಡೈಮೆನ್ಸಿಟಿ ಪ್ರೊಸೆಸರ್‌, ಪವರ್ ಫುಲ್ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್​ಫೋನ್​ ಬಜೆಟ್ ಬೆಲೆಗೆ ಮಾರಾಟ ಕಾಣಲಿದೆ. ಈ ಮೂಲಕ ಸದ್ಯದ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿರುವ ಕಡಿಮೆ ಬೆಲೆಯ 5ಜಿ ಫೋನ್​ಗಳಿಗೆ ಇದು ನೇರವಾಗಿ ಸೆಡ್ಡು ಹೊಡೆಯಲಿದೆ.

ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ 1080 x 2460 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 11ನ ಮೇಲೆ XOS 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ವೈಫೈ, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಒಟ್ಟಾರೆ ವ್ಯಾಲಂಟೈನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಕಡಿಮೆ ಬೆಲೆಗೆ ಬೆಸ್ಟ್ ಗಿಫ್ಟ್ ನೀಡುವ ಬಯಕೆ ನಿಮಗಿದ್ದರೆ ಈ ಸ್ಮಾರ್ಟ್​ಫೋನ್ ಉತ್ತಮ ಆಯ್ಕೆಯಾಗಲಿದೆ.

ಈ ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಇದರ 8 GB RAM ಮತ್ತು 128 GB ಸ್ಟೋರೆಜ್ ಸಾಮರ್ಥ್ಯಕ್ಕೆ 19,999 ರೂ. ನಿಗದಿ ಮಾಡಲಾಗಿದೆ. ಇದೇ ಫೆಬ್ರವರಿ 18 ರಿಂದ ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ.

WhatsApp: ಫೇಸ್​ಬುಕ್​ನಲ್ಲಿರುವ ಅಚ್ಚರಿಯ ಫೀಚರ್ ಈಗ ವಾಟ್ಸ್ಆ್ಯಪ್​ನಲ್ಲಿ: ದಂಗಾದ ಬಳಕೆದಾರರು