Kannada News Technology Infinix Note 12 Pro 5G A 108MP Camera phone is now available for purchase on Flipkart
Infinix Note 12 Pro 5G: 108MP ಕ್ಯಾಮೆರಾದ ಇನ್ಫಿನಿಕ್ಸ್ ನೋಟ್ 12 ಪ್ರೊ ಫೋನ್ ಹೇಗಿದೆ?: ಖರೀದಿಸಬಹುದೇ?
ಇನ್ಫಿನಿಕ್ಸ್ ಕಂಪನಿ ಕಳೆದ ವಾರ ಇನ್ಫಿನಿಕ್ಸ್ ನೋಟ್ 12 ಸರಣಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಇನ್ಫಿನಿಕ್ಸ್ ನೋಟ್ 12 5G ಮತ್ತು ಇನ್ಫಿನಿಕ್ಸ್ ನೋಟ್ 12 ಪ್ರೊ 5G ಫೋನಿದೆ. ಈ ಪೈಕಿ 12 ಪ್ರೊ ಫೋನ್ ಇಂದು ಮೊದಲ ಸೇಲ್ ಕಾಣುತ್ತಿದೆ.
ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದರಲ್ಲಿ ಇನ್ಫಿನಿಕ್ಸ್ (Infinix) ಕಂಪನಿ ಮುಂಚೂಣಿಯಲ್ಲಿದೆ. ಈಗಂತು ಅತ್ಯುತ್ತಮ ಕ್ಯಾಮೆರಾ ಫೋನ್ಗಳ ಮೇಲೆ ಕಣ್ಣಿಟ್ಟಿರುವ ಇನ್ಫಿನಿಕ್ಸ್ ಇತ್ತೀಚೆಗಷ್ಟೆ ಬರೋಬ್ಬರಿ 108 ಮೆಗಾಫಿಕ್ಸೆಲ್ನ ಹೊಸ ಸ್ಮಾರ್ಟ್ಫೋನೊಂದನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. ಹೌದು, ಇನ್ಫಿನಿಕ್ಸ್ ಕಂಪನಿ ಕಳೆದ ವಾರ ಇನ್ಫಿನಿಕ್ಸ್ ನೋಟ್ 12 ಸರಣಿಯನ್ನು (Infinix Note 12 Series) ಬಿಡುಗಡೆ ಮಾಡಿತ್ತು. ಇದರಲ್ಲಿ ಇನ್ಫಿನಿಕ್ಸ್ ನೋಟ್ 12 5G ಮತ್ತು ಇನ್ಫಿನಿಕ್ಸ್ ನೋಟ್ 12 ಪ್ರೊ 5G ಫೋನಿದೆ. ಈ ಪೈಕಿ 12 ಪ್ರೊ (Infinix Note 12 Pro 5G) ಫೋನ್ ಇಂದು ಮೊದಲ ಸೇಲ್ ಕಾಣುತ್ತಿದೆ. ಈ ಫೋನ್ 108 ಮೆಗಾಫಿಕ್ಸೆಲ್ನ ಕ್ಯಾಮೆರಾ ಹೊಂದಿದೆ. ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ಕೂಡ ನೀಡಲಾಗಿದೆ. ಬೆಲೆ ಕೂಡ ದೊಡ್ಡ ಮಟ್ಟದಲ್ಲಿಲ್ಲ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಆಫರ್ ಏನಿದೆ?, ಫೀಚರ್ಸ್ ಏನು? ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ ನೋಟ್ 12 ಪ್ರೊ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM 128GB ಸ್ಟೋರೆಜ್ ರೂಪಂತರಕ್ಕೆ ಕೇವಲ 17,999 ರೂ. ಬೆಲೆ ನಿಗದಿ ಮಾಡಲಾಗಿದೆ.
ಈ ಫೋನನ್ನು ನೀವು ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ. ಫೋರ್ಸ್ ಬ್ಲಾಕ್ ಮತ್ತು ಸ್ನೋಫಾಲ್ ವೈಟ್ ಕಲರ್ನಲ್ಲಿ ಬರುತ್ತಿದೆ.
ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಗ್ರಾಹಕರು 1,500 ರೂ. ಡಿಸ್ಕೌಂಟ್ ಪಡದುಕೊಳ್ಳಬಹುದಾಗಿದೆ. SBI ಕಾರ್ಡ್ ಮೂಲಕ ಖರೀದಿಸಿದರೆ ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ.
Tech Tips: ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಇನ್ನಷ್ಟು ಪವರ್ಫುಲ್ ಮಾಡಬೇಕೆ?: ಇಲ್ಲಿದೆ ಟಿಪ್ಸ್
WhatsApp: ಕೂಡಲೇ ವಾಟ್ಸ್ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ ಬೆರಗುಗೊಳಿಸುವ ಹೊಸ ಫೀಚರ್
Nothing Phone 1: ಆಕರ್ಷಕ ವಿನ್ಯಾಸ, ಅದ್ಭುತ ಫೀಚರ್ಸ್: ಕಡಿಮೆ ಬೆಲೆಯ ನಥಿಂಗ್ ಫೋನ್ 1 ಬಿಡುಗಡೆ
6nm ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಮೂಲಕ ಕಾರ್ಯನಿರ್ವಹಿಸುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸೆನ್ಸಾರ್ನಲ್ಲಿದೆ. ಇದು Quad LED ಫ್ಲ್ಯಾಷ್ ಒಳಗೊಂಡಿದೆ. 2 ಮೆಗಾಫಿಕ್ಸೆಲ್ನ ಸೆಕೆಂಡರಿ ಸೆನ್ಸಾರ್ ಮತ್ತು ನ್ಯಾನೋ ಸೆನ್ಸಾರ್ ನೀಡಲಾಗಿದೆ.
ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಡ್ಯುಯಲ್ LED ಫ್ಲ್ಯಾಷ್ ಹೊಂದಿದೆ.
5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು ಇದು 33W ಟೈಪ್-ಸಿ ಫಾಸ್ಟ್ ಚಾರ್ಜರ್ ಬೆಂಬಲಿಸಲಿದೆ. ಒಂದು ಗಂಟೆ 30 ನಿಮಿಷಗಳ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಮಾರುಕಟ್ಟೆಯಲ್ಲಿ ಅದ್ಭುತ ಫೀಚರ್ಸ್ಗೆ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಫೋನುಗಳಲ್ಲಿ ಇದುಕೂಡ ಒಂದಾಗಿದೆ. ನೀವು ಕ್ಯಾಮೆರಾ ಪ್ರಿಯರಾಗದ್ದಲ್ಲಿ ಈ ಫೋನನ್ನು ಖರೀದಿಸಬಹುದು. ಸಣ್ಣ ಮಟ್ಟದ ಗೇಮಿಂಗ್ಗೆ ಕೂಡ ಪ್ರಯೋಜನವಾಗಲಿದೆ.