ಬಜೆಟ್ ಪ್ರಿಯರಿಗೆ ಬಂತು ಬಂಪರ್ ಫೋನ್: ಇನ್ಫಿನಿಕ್ಸ್ ಸ್ಮಾರ್ಟ್​ 8 ಬಿಡುಗಡೆ, ಬೆಲೆ ಎಷ್ಟು?

|

Updated on: Nov 11, 2023 | 2:26 PM

Infinix Smart 8 Launched: ಇನ್ಫಿನಿಕ್ಸ್ ಸ್ಮಾರ್ಟ್​ 8, ಇನ್ಫಿನಿಕ್ಸ್ ಸ್ಮಾರ್ಟ್​ 7 ಫೋನಿನ ಮುಂದಿನ ವರ್ಷನ್ ಆಗಿದೆ. ಇದು ಮುಂದಿನ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಜೆಟ್ ಪ್ರಿಯರಿಗೆ ಬಂತು ಬಂಪರ್ ಫೋನ್: ಇನ್ಫಿನಿಕ್ಸ್ ಸ್ಮಾರ್ಟ್​ 8 ಬಿಡುಗಡೆ, ಬೆಲೆ ಎಷ್ಟು?
Infinix Smart 8
Follow us on

ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ನೂತನ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹೊಸದಾಗಿ ಮಾರ್ಕೆಟ್​ಗೆ ಇನ್ಫಿನಿಕ್ಸ್ ಸ್ಮಾರ್ಟ್​ 8 (Infinix Smart 8) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿದೆ. ಸದ್ಯ ಈ ಫೋನ್ ನೈಜೀರಿಯಾದಲ್ಲಿ ರಿಲೀಸ್ ಆಗಿದೆ. ಇದು ಇನ್ಫಿನಿಕ್ಸ್ ಸ್ಮಾರ್ಟ್​ 7 ಫೋನಿನ ಮುಂದಿನ ವರ್ಷನ್ ಆಗಿದೆ. ಇನ್ಫಿನಿಕ್ಸ್ ಸ್ಮಾರ್ಟ್​ 8 ಫೋನ್ ಮುಂದಿನ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ಫಿನಿಕ್ಸ್ ಸ್ಮಾರ್ಟ್​ 8 ಬೆಲೆ, ಲಭ್ಯತೆ:

ಇನ್ಫಿನಿಕ್ಸ್ ಸ್ಮಾರ್ಟ್​ 8 ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ರಿಲೀಸ್ ಆಗಿದೆ. ಇದರ ಏಕೈಕ 4GB + 128GB ರೂಪಾಂತರಕ್ಕೆ ನೈಜೀರಿಯಾದಲ್ಲಿ NGN 97,900 ಇದೆ. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 10,100 ರೂ. ಎನ್ನಬಹುದು. ಈ ಹ್ಯಾಂಡ್ಸೆಟ್ ಅನ್ನು ಕ್ರಿಸ್ಟಲ್ ಗ್ರೀನ್, ಗ್ಯಾಲಕ್ಸಿ ವೈಟ್, ಟಿಂಬರ್ ಬ್ಲಾಕ್ ಮತ್ತು ಶೈನಿ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

Tech Tips: ನಿಮ್ಮದು ಯೂಟ್ಯೂಬ್ ಚಾನೆಲ್ ಇದೆಯಾ?: ಸಬ್​ಸ್ಕ್ರೈಬರ್ಸ್ ಹೆಚ್ಚಿಸಲು ಇಲ್ಲಿದೆ ಹೊಸ ಟ್ರಿಕ್ಸ್

ಇದನ್ನೂ ಓದಿ
ರಿಲೀಸ್ ಆಯಿತು 108MP ಕ್ಯಾಮೆರಾದ ಹೊಸ ​ಫೋನ್: ಫಾಸ್ಟ್ ಚಾರ್ಜರ್ ಕೂಡ ಇದೆ
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್: ನಥಿಂಗ್ ಫೋನ್ 2 ಮೇಲೆ ದಾಖಲೆಯ ರಿಯಾಯಿತಿ
ವಿವಿಧ ಸಿಮ್​ಗಳಿಗೆ ಅಗ್ಗದ ವಾರ್ಷಿಕ ರೀಚಾರ್ಜ್ ಪ್ಲಾನ್​ಗಳಿವು...
ಶವೋಮಿಯಿಂದ ಸದ್ದಿಲ್ಲದೆ ಹೊಸ ಫೋನ್ ಬಿಡುಗಡೆ: ರೆಡ್ಮಿ 13C ಹೇಗಿದೆ?

ಇನ್ಫಿನಿಕ್ಸ್ ಸ್ಮಾರ್ಟ್​ 8 ಫೀಚರ್ಸ್:

ಈ ಹ್ಯಾಂಡ್‌ಸೆಟ್ 6.6-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ, 90Hz ನ ರಿಫ್ರೆಶ್ ದರ ಮತ್ತು 90Hz ನ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ. XOS 13 ಜೊತೆಗೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ಫಿನಿಕ್ಸ್ ಸ್ಮಾರ್ಟ್​ 8 ಆಕ್ಟಾ-ಕೋರ್ ಯುನಿಸಕ್ T606 SoC ಅನ್ನು 4GB RAM ನೊಂದಿಗೆ ಜೋಡಿಸಲಾಗಿದೆ. ಇದು 8GB ಮತ್ತು 256GB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಕೂಡ ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಇನ್ಫಿನಿಕ್ಸ್ ಸ್ಮಾರ್ಟ್​ 8 ನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟನ ಇದೆ. ಇದು f/1.8 ರ ದ್ಯುತಿರಂಧ್ರದೊಂದಿಗೆ 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ದ್ವಿತೀಯ AI-ಸಹಾಯದ ಸಂವೇದಕವನ್ನು ಹೊಂದಿದೆ. ಮತ್ತೊಂದೆಡೆ, ಮುಂಭಾಗದ ಕ್ಯಾಮೆರಾವನ್ನು ಡಿಸ್ ಪ್ಲೇ ಮಧ್ಯದಲ್ಲಿ ಜೋಡಿಸಲಾಗಿದ್ದು ಇದು 8-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಇನ್ಫಿನಿಕ್ಸ್ ಸ್ಮಾರ್ಟ್​ 8 ಫೋನ್ 10W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಡ್ಯುಯಲ್ ಸಿಮ್ 4G VoLTE, Wi-Fi 802.11, ಬ್ಲೂಟೂತ್ 5, GPS ಮತ್ತು USB ಟೈಪ್-ಸಿ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಈ ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ