ಶವೋಮಿಯಿಂದ ಸದ್ದಿಲ್ಲದೆ ಹೊಸ ಫೋನ್ ಬಿಡುಗಡೆ: ಬಜೆಟ್ ಬೆಲೆಯ ರೆಡ್ಮಿ 13C ಹೇಗಿದೆ ನೋಡಿ

Redmi 13C Launched: ರೆಡ್ಮಿ 13 ಸರಣಿಯ ಈ ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕ ಆಕರ್ಷಕ ಕ್ಯಾಮೆರಾ, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಶವೋಮಿಯಿಂದ ಸದ್ದಿಲ್ಲದೆ ಹೊಸ ಫೋನ್ ಬಿಡುಗಡೆ: ಬಜೆಟ್ ಬೆಲೆಯ ರೆಡ್ಮಿ 13C ಹೇಗಿದೆ ನೋಡಿ
Redmi 13C
Follow us
Vinay Bhat
|

Updated on: Nov 10, 2023 | 2:24 PM

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಕ ಕಂಪನಿ ಶವೋಮಿ ತನ್ನ ಸಬ್​ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ಸದ್ದಿಲ್ಲದೆ ಹೊಸ ಫೋನನ್ನು ಪರಿಚಯಿಸಿದೆ. ಇಂದು ನೈಜೀರಿಯಾ ಮಾರುಕಟ್ಟೆಗೆ ರೆಡ್ಮಿ 13C (Redmi 13C) ಫೋನ್ ಲಗ್ಗೆಯಿಟ್ಟಿದೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಬರುವ ಸಾಧ್ಯತೆ ಇದೆ. ರೆಡ್ಮಿ 13 ಸರಣಿಯ ಈ ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕ, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರೆಡ್ಮಿ 13C ಬೆಲೆ

ರೆಡ್ಮಿ 13C ಸ್ಮಾರ್ಟ್​ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4GB RAM + 128GB ಸ್ಟೋರೇಜ್ ಮಾಡೆಲ್‌ಗೆ ನೈಜೀರಿಯಾದಲ್ಲಿ NGN 98,100 (ಸುಮಾರು ರೂ. 10,100). 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ NGN 108,100 (ಸುಮಾರು ರೂ. 11,000), 8GB RAM + 256GB ಆಯ್ಕೆಯು NGN 121,100 (ಸುಮಾರು ರೂ. 12,500) ನಿಗದಿ ಮಾಡಲಾಗಿದೆ. ಇದು ಕಪ್ಪು ಮತ್ತು ಕ್ಲೋವರ್ ಗ್ರೀನ್ ಶೇಡ್‌ಗಳಲ್ಲಿ ಲಭ್ಯವಿರುತ್ತದೆ.

ವಾಟ್ಸ್​ಆ್ಯಪ್, ಯೂಟ್ಯೂಬ್ ಇರುವ 2,599 ರೂ. ಬೆಲೆಯ ಜಿಯೋ ಪ್ರೈಮಾ 4G ಫೋನ್ ಖರೀದಿಗೆ ಲಭ್ಯ

ಇದನ್ನೂ ಓದಿ
Image
ನಿಮ್ಮದು ಯೂಟ್ಯೂಬ್ ಚಾನೆಲ್ ಇದೆಯಾ?: ಸಬ್​ಸ್ಕ್ರೈಬರ್ಸ್ ಹೀಗೆ ಹೆಚ್ಚಿಸಿ
Image
ಅತಿ ಕಡಿಮೆ ಬೆಲೆಯ ಸ್ವದೇಶಿ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್ 2 5G ಮಾರಾಟ ಆರಂಭ
Image
ಗೊರಿಲ್ಲಾ ಗ್ಲಾಸ್ ಎಂದರೇನು?, ಇದರಿಂದ ಏನು ಪ್ರಯೋಜನ?
Image
ಬಜೆಟ್ ಪ್ರಿಯರಿಗಾಗಿ ಬಂತು ಹೊಸ ​ಫೋನ್: ವಿವೋ Y27s ಬಿಡುಗಡೆ, ಬೆಲೆ ಎಷ್ಟು?

ರೆಡ್ಮಿ 13C ಯ ಹಿಂದಿನ ವರ್ಷನ್ ರೆಡ್ಮಿ 12C ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದರ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 8,999 ರೂ. ಇದೆ.

ರೆಡ್ಮಿ 13C ಫೀಚರ್ಸ್

ರೆಡ್ಮಿ 13C ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ (1,080×2,460 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 9nm ಮೀಡಿಯಾಟೆಕ್ ಹಿಲಿಯೊ G99 SoC ಯಿಂದ 8GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ರೆಡ್ಮಿ 13C ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ಎರಡು 2-ಮೆಗಾಪಿಕ್ಸೆಲ್ ಶೂಟರ್‌ಗಳ ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ರೆಡ್ಮಿ ಫೋನ್ 5,000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ