AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮದು ಯೂಟ್ಯೂಬ್ ಚಾನೆಲ್ ಇದೆಯಾ?: ಸಬ್​ಸ್ಕ್ರೈಬರ್ಸ್ ಹೆಚ್ಚಿಸಲು ಇಲ್ಲಿದೆ ಹೊಸ ಟ್ರಿಕ್ಸ್

How to Increase YouTube Subscribers : ಯೂಟ್ಯೂಬ್ ಖಾತೆ ತೆರೆದು ಹಣ ಗಳಿಸಬೇಕು ಎಂದರೆ ಅದಕ್ಕೆ ಒಂದಿಟ್ಟು ಮಾನದಂಡಗಳಿವೆ. ಈ ಪೈಕಿ ಬಳಕೆದಾರರಿಗೆ ಚಂದಾದಾರರನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಹಾಗಾದರೆ, ನಿಮ್ಮ ಚಾನಲ್‌ನ ಚಂದಾದಾರರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ನೀವು ಬಯಸಿದರೆ ಈ ಟ್ರಿಕ್ ಅನ್ನು ಪ್ರಯೋಗಿಸಬಹುದು.

Tech Tips: ನಿಮ್ಮದು ಯೂಟ್ಯೂಬ್ ಚಾನೆಲ್ ಇದೆಯಾ?: ಸಬ್​ಸ್ಕ್ರೈಬರ್ಸ್ ಹೆಚ್ಚಿಸಲು ಇಲ್ಲಿದೆ ಹೊಸ ಟ್ರಿಕ್ಸ್
YouTube Subscribers
Vinay Bhat
|

Updated on: Nov 10, 2023 | 1:56 PM

Share

ಇಂದು ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಡಿಮೆ ಬೆಲೆಗೆ ಡೇಟಾ ಸಿಗುತ್ತಿರುವುದರಿಂದ ಫ್ರೀ ಟೈಮ್​ನಲ್ಲಿ ಹೆಚ್ಚಿನವರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿರುತ್ತಾರೆ. ಈಗಂತು ಇನ್​ಸ್ಟಾಗ್ರಾಮ್, ಫೇಸ್​ಬುಕ್ ಜೊತೆ ಯೂಟ್ಯೂಬ್ (Youtube) ವೀಕ್ಷಣೆಯೂ ಹೆಚ್ಚಾಗಿದೆ. ಭಾರತದಲ್ಲಿ ಯೂಟ್ಯೂಬ್‌ ಜನಪ್ರಿಯತೆ ಗಮನಾರ್ಹ ಏರಿಕೆ ಕಂಡಿವೆ. ನಿಮ್ಮ ಕೌಶಲ್ಯದಿಂದ ಮನೆಯಲ್ಲೇ ಕುಳಿತು ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ಹೀಗಾಗಿ ಯೂಟ್ಯೂಬ್‌ ಚಾನೆಲ್​ಗಳ ಸಂಖ್ಯೆ ಕೂಡ ಲೆಕ್ಕಕ್ಕೆ ಸಿಗದಷ್ಟಿದೆ. ಆದರೆ, ಯೂಟ್ಯೂಬ್ ಖಾತೆ ತೆರೆದು ಕೇವಲ ವಿಡಿಯೋ ಹಂಚಿಕೊಳ್ಳುತ್ತಿದ್ದರೆ ಸಾಲದು.

ಯೂಟ್ಯೂಬ್ ಖಾತೆ ತೆರೆದು ಹಣ ಗಳಿಸಬೇಕು ಎಂದರೆ ಅದಕ್ಕೆ ಒಂದಿಟ್ಟು ಮಾನದಂಡಗಳಿವೆ. ಒಂದು ಸಾವಿರ ಚಂದಾದಾರರು, ನಾಲ್ಕು ಸಾವಿರ ವೀಕ್ಷಣೆ ಹೀಗೆ ಕೆಲವೊಂದು ನಿಯಮಗಳಿವೆ. ಈ ಪೈಕಿ ಬಳಕೆದಾರರಿಗೆ ಚಂದಾದಾರರನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಹಾಗಾದರೆ, ನಿಮ್ಮ ಚಾನಲ್​ಗೆ ಚಂದಾದಾರರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಬಯಸಿದರೆ ಈ ಟ್ರಿಕ್ ಅನ್ನು ಪ್ರಯೋಗಿಸಬಹುದು.

ಕ್ರಿಯಾಶೀಲರಾಗಿರಿ

ನೀವೆಲ್ಲರೂ ಕೇಳಿರುವಂತೆ, ಯಶಸ್ಸಿಗೆ ಪರಿಶ್ರಮ ಅತ್ಯಗತ್ಯ. ಅದೇ ರೀತಿ, ಯೂಟ್ಯೂಬ್​ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್​ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು. ವಾರದಲ್ಲಿ ಕನಿಷ್ಠ 3 ವಿಡಿಯೋಗಳನ್ನು ಯೂಟ್ಯೂಬ್​ಗೆ ಅಪ್‌ಲೋಡ್ ಮಾಡಲೇಬೇಕು.

ಇದನ್ನೂ ಓದಿ
Image
ಅತಿ ಕಡಿಮೆ ಬೆಲೆಯ ಸ್ವದೇಶಿ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್ 2 5G ಮಾರಾಟ ಆರಂಭ
Image
ಗೊರಿಲ್ಲಾ ಗ್ಲಾಸ್ ಎಂದರೇನು?, ಇದರಿಂದ ಏನು ಪ್ರಯೋಜನ?
Image
ಬಜೆಟ್ ಪ್ರಿಯರಿಗಾಗಿ ಬಂತು ಹೊಸ ​ಫೋನ್: ವಿವೋ Y27s ಬಿಡುಗಡೆ, ಬೆಲೆ ಎಷ್ಟು?
Image
2,599 ರೂ. ಬೆಲೆಯ ಜಿಯೋ ಪ್ರೈಮಾ 4G ಫೋನ್ ಖರೀದಿಗೆ ಲಭ್ಯ

ಬಹುನಿರೀಕ್ಷಿತ ಐಕ್ಯೂ 12 ಪ್ರೊ, ಐಕ್ಯೂ 12 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಏನಿದೆ ನೋಡಿ

ಗುಣಮಟ್ಟಕ್ಕೆ ಗಮನ ಕೊಡಿ

ನಿಮ್ಮ ಯೂಟ್ಯೂಬ್​ ಚಾನಲ್‌ನಲ್ಲಿ ಉತ್ತಮ ಗುಣಮಟ್ಟದ ಮಾಹಿತಿಯನ್ನು ಒದಗಿಸಬೇಕು. ನೀವು ವಿಡಿಯೋವನ್ನು ಪೋಸ್ಟ್ ಮಾಡಿದಾಗ ಅದರ ಗುಣಮಟ್ಟಕ್ಕೆ ವಿಶೇಷ ಗಮನ ನೀಡಿ. ಅದು ನಿಮ್ಮ ಚಾನಲ್ ಅನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಹಾಗಾಯೆ ಹೈ ಕ್ವಾಲಿಟಿಯಲ್ಲಿ ಹಂಚಿಕೊಳ್ಳಿ.

ಶೇರ್ ಮಾಡುವುದು ಮುಖ್ಯ

ನೀವು ಯೂಟ್ಯೂಬ್​ ಚಾನಲ್ ಅನ್ನು ಪ್ರಾರಂಭಿಸಿ ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿಬಿಟ್ಟರೆ ಸಾಲದು. ನಿಮ್ಮ ನೆಟ್‌ವರ್ಕಿಂಗ್ ವಿಸ್ತಾರವಾಗಿರಬೇಕು. ಇದಕ್ಕಾಗಿ ನೀವು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋವನ್ನು ಶೇರ್ ಮಾಡಬೇಕು. ನೀವು ಎಷ್ಟು ಜನರಿಗೆ ಹತ್ತಿರವಾಗುತ್ತೀರೊ ಅಷ್ಟು ಚಂದಾದಾರರನ್ನು ಪಡೆಯುತ್ತೀರಿ.

ನಿಮ್ಮ ಯೂಟ್ಯೂಬ್​ ಚಾನಲ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ರಚಿಸಿದ್ದರೆ, ನೀವು ಅಧ್ಯಯನ ಮಾಡಬೇಕು. ಅಲ್ಲದೆ ಇತರರಿಗಿಂತ ಭಿನ್ನವಾದ ಮಾಹಿತಿ ನೀಡಬೇಕು. ಹಾಗಾದಾಗ ಜನರು ನೋಡಲು ಇಷ್ಟಪಟ್ಟು ಸಬ್​ಸ್ರೈಬ್ ಆಗುತ್ತಾರೆ. ನೀವು ಅಡುಗೆ ಚಾನೆಲ್ ಅನ್ನು ಪ್ರಾರಂಭಿಸಿದ್ದರೆ, ಅಲ್ಲಿ ಕೇವಲ ಅಡುಗೆ ಮಾಡುವ ವಿಡಿಯೋ ಮಾತ್ರವಲ್ಲ ಅದರ ಜೊತೆಗೆ ವಿಭಿನ್ನ ಸಲಹೆಗಳನ್ನು ನೀಡಬೇಕು. ಹೀಗಾದಾಗ ನಿಮ್ಮ ಯೂಟ್ಯೂಬ್​ ಚಾನೆಲ್ ಕ್ಲಿಕ್ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​