Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಗೊರಿಲ್ಲಾ ಗ್ಲಾಸ್ ಎಂದರೇನು?, ಇದನ್ನು ಅಳವಡಿಸಿದರೆ ಏನು ಪ್ರಯೋಜನ?

What is Gorilla Glass: ಗೊರಿಲ್ಲಾ ಗ್ಲಾಸ್ ಅನ್ನು ಅಲ್ಕಾಲಿ-ಅಲ್ಯೂಮಿನಾ ಸಿಲಿಕೇಟ್ ಸ್ಫಟಿಕಗಳಿಂದ ತಯಾರಿಸಲಾಗುತ್ತದೆ. ಇದನ್ನು ಎಲೆಕ್ಟ್ರಿಕಲ್ ಡಿವೈಸ್​ನಲ್ಲೂ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿರುವ ಯಾವುದೇ ಸ್ಮಾರ್ಟ್​ಫೋನ್ ಅಂಗಡಿಯಿಂದ ನೀವು ಈ ಗ್ಲಾಸ್ ಅನ್ನು ಪಡೆಯಬಹುದು. ಇದನ್ನು ಅಳವಡಿಸಿದರೆ ಟಚ್ ಸ್ಕ್ರೀನ್ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ.

Tech Tips: ಗೊರಿಲ್ಲಾ ಗ್ಲಾಸ್ ಎಂದರೇನು?, ಇದನ್ನು ಅಳವಡಿಸಿದರೆ ಏನು ಪ್ರಯೋಜನ?
Gorilla Glass
Follow us
Vinay Bhat
|

Updated on:Nov 09, 2023 | 3:06 PM

ಇಂದು ಸ್ಮಾರ್ಟ್​ಫೋನ್​ಗಳು (Smartphones) ಕೈಗೆಟಕುವ ಬೆಲೆಗೆ ಲಭ್ಯ ಇರುವುದರಿಂದ ಜನಸಾಮಾನ್ಯರು ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ತುಂಬಾ ಜೋಪಾನವಾಗಿ ಮೊಬೈಲ್ ಅನ್ನು ಇಟ್ಟುಕೊಳ್ಳುವವರು ಕೆಲವೇ ಮಂದಿ. ಹೀಗಾಗಿ ಮೊಬೈಲ್​ಗಳು ಆಗಾಗ ಕೈಯಿಂದ ಬಿದ್ದು ಒಡೆಯುತ್ತಲೇ ಇರುತ್ತದೆ. ಹೀಗಾದಾಗ ಸ್ಕ್ರೀನ್ ಬಿರುಕು ಬಿಟ್ಟು, ಮೊಬೈಲ್ ಕೂಡ ಹಾಳಾಗುತ್ತದೆ. ಇದು ಆಗತಾನೆ ಖರೀದಿಸಿದ ಸ್ಮಾರ್ಟ್​ಫೋನ್​ಗಳಲ್ಲೂ ಸಂಭವಿಸುತ್ತದೆ. ಈ ಸಮಸ್ಯೆ ಬಗೆಹರಿಸಲು ಮಾರುಕಟ್ಟೆಗೆ ಬಂದಿದ್ದು ಗೊರಿಲ್ಲಾ ಗ್ಲಾಸ್.

ಗೊರಿಲ್ಲಾ ಗ್ಲಾಸ್ ಅನ್ನು ಅಲ್ಕಾಲಿ-ಅಲ್ಯೂಮಿನಾ ಸಿಲಿಕೇಟ್ ಸ್ಫಟಿಕಗಳಿಂದ ತಯಾರಿಸಲಾಗುತ್ತದೆ. ಇದನ್ನು ಎಲೆಕ್ಟ್ರಿಕಲ್ ಡಿವೈಸ್​ನಲ್ಲೂ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿರುವ ಯಾವುದೇ ಸ್ಮಾರ್ಟ್​ಫೋನ್ ಅಂಗಡಿಯಿಂದ ನೀವು ಈ ಗ್ಲಾಸ್ ಅನ್ನು ಪಡೆಯಬಹುದು. ಇದನ್ನು ಅಳವಡಿಸಿದರೆ ಟಚ್ ಸ್ಕ್ರೀನ್ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ.

ಆ್ಯಪಲ್ ದೀಪಾವಳಿ ಸೇಲ್ 2023: ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್, ಆಫರ್ ಮಿಸ್ ಮಾಡ್ಬೇಡಿ

ಇದನ್ನೂ ಓದಿ
Image
ಬಜೆಟ್ ಪ್ರಿಯರಿಗಾಗಿ ಬಂತು ಹೊಸ ​ಫೋನ್: ವಿವೋ Y27s ಬಿಡುಗಡೆ, ಬೆಲೆ ಎಷ್ಟು?
Image
2,599 ರೂ. ಬೆಲೆಯ ಜಿಯೋ ಪ್ರೈಮಾ 4G ಫೋನ್ ಖರೀದಿಗೆ ಲಭ್ಯ
Image
ಬಹುನಿರೀಕ್ಷಿತ ಐಕ್ಯೂ 12 ಪ್ರೊ, ಐಕ್ಯೂ 12 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?
Image
ಆ್ಯಪಲ್ ದೀಪಾವಳಿ ಮಾರಾಟ: ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್

ಗೊರಿಲ್ಲಾ ಗ್ಲಾಸ್‌ನಲ್ಲಿ ಎಷ್ಟು ವಿಧಗಳಿವೆ?

  • ಗೊರಿಲ್ಲಾ ಗ್ಲಾಸ್‌ನ ಮೊದಲ ರೂಪಾಂತರವನ್ನು 2008 ರಲ್ಲಿ ಬಿಡುಗಡೆ ಮಾಡಲಾಯಿತು.
  • 2008 ರಿಂದ ಈವರೆಗೆ ಗೊರಿಲ್ಲಾ ಗ್ಲಾಸ್‌ನಲ್ಲಿ ಒಟ್ಟು 7 ರೂಪಾಂತರಗಳು ಬಂದಿವೆ.
  • ವಿಕ್ಟಸ್, ಗೊರಿಲ್ಲಾ ಗ್ಲಾಸ್‌ನ 7ನೇ ರೂಪಾಂತರವನ್ನು ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಲಾಯಿತು.

ಗೊರಿಲ್ಲಾ ಗ್ಲಾಸ್ ಅನ್ನು ಏಕೆ ಹಾಕಬೇಕು?

ಗೊರಿಲ್ಲಾ ಗ್ಲಾಸ್ ಕೇವಲ ನಿಮ್ಮ ಸ್ಮಾರ್ಟ್​ಫೋನ್​ನ ಡಿಸ್ ಪ್ಲೇಯನ್ನು ರಕ್ಷಣೆ ಮಾಡುವುದು ಮಾತ್ರವಲ್ಲ, ಇದು ಮೊಬೈಲ್ ಬಳಸುವಾಗ ಬಿಸಿಯಾಗುವುದನ್ನು ಕೂಡ ತಪ್ಪಿಸುತ್ತದೆ. ಗೊರಿಲ್ಲಾ ಗ್ಲಾಸ್ ಹೆಚ್ಚಿನ ಶಾಖದ ಪ್ರತಿರೋಧವನ್ನು ಹೊಂದಿದೆ, ಆದ್ದರಿಂದ ನೀವು ಫೋನ್‌ನಲ್ಲಿ ಮಾತನಾಡಬಹುದು ಅಥವಾ ನೀವು ದೀರ್ಘ ಸಮಯ ಮೊಬೈಲ್ ಅನ್ನು ಬಳಸುತ್ತಿದ್ದರೆ ಇದು ಬಿಸಿ ಆಗುವುದರಿಂದ ತಪ್ಪಿಸುತ್ತದೆ.

ಗೊರಿಲ್ಲಾ ಗ್ಲಾಸ್‌ ಬೆಲೆ?

ಮಾರುಕಟ್ಟೆಯಲ್ಲಿ ಗೊರಿಲ್ಲಾ ಗ್ಲಾಸ್​ಗೆ ದುಬಾರಿ ಬೆಲೆಯೇನಿಲ್ಲ. ಇದು 100 ರಿಂದ 200 ರೂ. ಒಳಗೆ ಸಿಗುತ್ತದೆ. ಇದನ್ನು ಹಾಕುವುದರಿಂದ ನಿಮ್ಮ ಸ್ಮಾರ್ಟ್​ಫೋನ್ ಸುರಕ್ಷಿತವಾಗಿರುತ್ತದೆ.

ಸ್ಮಾರ್ಟ್​ಫೋನ್ ಡಿಸ್ ಪ್ಲೇ ಸ್ಕ್ರಾಚ್ ಆದರೆ ಏನು ಮಾಡಬಹುದು?

ಸ್ಮಾರ್ಟ್​ಫೋನ್ ಡಿಸ್ ಪ್ಲೇಗೆ ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಸ್ಕ್ರಾಚ್ ಆಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ. ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ. ಅಥವಾ ಮಾರುಕಟ್ಟೆಯಲ್ಲಿ ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಬಹುದು. ಅಂತೆಯೆ ಮೊಟ್ಟೆಯ ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್‌ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿದರೆ ಸ್ಕ್ರಾಚ್ ಮಾಯವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Thu, 9 November 23

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ